ಸದ್ದಿಲ್ಲದೆ ಸ್ಕೋಡಾ ಒಕ್ಟಾವಿಯಾ ಆಂಬಿಷನ್ ಲಾಂಚ್

By Nagaraja

ಸ್ಕೋಡಾ ಇಂಡಿಯಾವು ಸದ್ದಿಲ್ಲದೆ ಒಕ್ಟಾವಿಯಾದ ಆಂಬಿಷನ್ ವೆರಿಯಂಟ್ ಲಾಂಚ್ ಮಾಡಿದೆ. ಇದರ ಮುಂಬೈ ಎಕ್ಸ್ ಶೋ ರೂಂ ದರ 16.85 ಲಕ್ಷ ರು. ಆಗಿರಲಿದೆ. ಇತ್ತೀಚೆಗಷ್ಟೇ ಲಾಂಚ್ ಆಗಿರುವ ಒಕ್ಟಾವಿಯಾದ ನೂತನ 1.8 ಆಂಬಿಷನ್ ಪೆಟ್ರೋಲ್ ಮಾದರಿಯ ವಿತರಣೆ ಕಾರ್ಯವು ಜನವರಿ ತಿಂಗಳಿಂದ ಆರಂಭವಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

1.8 ಟಿಎಸ್‌ಐ ಎಂಜಿನ್ ಎಲೆಗನ್ಸ್ ವರ್ಷನ್‌‌ ದರ 18.81 ಲಕ್ಷ ರು.ಗಳಾಗಿವೆ. ಅಂದರೆ ಇದೀಗ ಆಗಮನವಾಗಲಿರುವ ಆಂಬಿಷನ್ ಮಾದರಿ ಎರಡು ಲಕ್ಷ ರು.ಗಳಷ್ಟು ಅಗ್ಗವಾಗಲಿದೆ.

Skoda Octavia ambition variant

ಹಾಗಿದ್ದರೂ ಬೆಲೆ ಕಡಿತಗೊಳಿಸುವ ನಿಟ್ಟಿನಲ್ಲಿ ಆಂಬಿಷನ್ ವೆರಿಯಂಟ್‌ನಲ್ಲಿ ಕೆಲವೊಂದು ವೈಶಿಷ್ಟ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದರಲ್ಲಿ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್, ರಿಯರ್ ಡಿಕ್ಲೈಡ್ ಸ್ಪಾಯ್ಲರ್, ಅಡಾಪ್ಟಿವ್ ಫ್ರಂಟ್‌ಲೈಟ್ ಸಿಸ್ಟಂ, ಕಾರ್ನರ್ ಫಂಕ್ಷನ್, ಫ್ರಂಟ್ ಫಾಗ್ ಲೈಟ್, ಟೈರ್ ಪ್ರೆಶರ್ ಮಾನಿಟರಿಂಗ್, ಹೆಡ್ ಲೈಟ್ ವಾಶರ್, ಸೈಡ್ ಮತ್ತು ಕರ್ಟೈನ್ ಏರ್ ಬ್ಯಾಗ್, ಫ್ರಂಟ್ ಏರ್ ಬ್ಯಾಗ್ ಸೆನ್ಸಾರ್, ಪಾನೋರಾಮಿಕ್ ಸನ್‌ರೂಫ್, 12 ರೀತಿಯಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಡ್ರೈವರ್ ಸೀಟು, ಕ್ರೂಸ್ ಕಂಟ್ರೋಲ್, ವಿಂಗ್ ಮಿರರ್‌ಗೆ ಮೆಮೆರಿ ಸೆಟ್ಟಿಂಗ್ ಸೇರಿದಂತೆ ಅನೇಕ ಫೀಚರ್‌ಗಳ ಅಭಾವ ಕಾಡಲಿದೆ.

ಹಾಗಿದ್ದರೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.8 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 177.6 ಬಿಎಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ. ಇದರಲ್ಲಿ ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಫಂಕ್ಷನಲ್ ಡಿಸ್‌ಪ್ಲೇ, ಬ್ಲೂಟೂತ್ ಫಂಕ್ಷನ್, ಅಪ್‌ಹೋಲ್‌ಸ್ಟ್ರೇ ಮತ್ತು ಮಾಹಿತಿ ಸಿಸ್ಟಂ ಒಳಗೊಂಡಿರಲಿದೆ.

More from DriveSpark

Article Published On: Friday, November 22, 2013, 12:21 [IST]
English summary
Skoda has silently launched a new base 1.8 Ambition petrol variant of the recently launched new 2013 Octavia. The new Skoda Octavia 1.8 Ambition petrol trim is priced at Rs 16.85 lakh (ex-showroom, Mumbai).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+