ಧನಿಕ ರೈತರಿಗಾಗಿ ಇಲ್ಲೊಂದು ಐಷಾರಾಮಿ ಎಸಿ ಟ್ರಾಕ್ಟರ್
ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ; ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹ ಪರ ಸಾಧನವು; ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಸ್ಟಿ ನಿಯಮದೊಳಗವನೆ ಭೋಗಿ; ಉಳುವಾ ಯೋಗಿಯ ನೋಡಲ್ಲಿ !!
ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಏಕೈಕ ಕವಿ ಕುವೆಂಪು ಬರೆದ ನಾಡ ರೈತ ಗೀತೆ ಇಂದಿಗೂ ನಮ್ಮೆಲ್ಲರ ಹೃದಯದಲ್ಲಿ ಮಿಡಿಯುತ್ತಿದೆ. ಬರ ಬರುತ್ತಾ ಕೃಷಿ ಚಟುವಟಿಕೆಗಳಿಗೆ ಆಧುನಿಕ ಟಚ್ ಲಭಿಸಿದಂತೆ ಟ್ರಾಕ್ಟರ್‌ಗಳ ಆಗಮನವಾಯಿತು.
ನಿಜಕ್ಕೂ ರೈತರ ಕೃಷಿ ಚಟುವಟಿಕೆಗಳಲ್ಲಿ ಟ್ರಾಕ್ಟರ್ ಬಹುದೊಡ್ಡ ಪಾತ್ರ ವಹಿಸುತ್ತದೆ. ನಾವಿಂದು ಹೇಳಬಯಸುವ ವಿಚಾರವೆಂದರೆ ಕೃಷಿಕರಾಗಿ ಸಂಪೂರ್ಣ ಹವಾ ನಿಯಂತ್ರಿತ ನೂತನ ಟ್ರಾಕ್ಟರ್ ಆಗಮನವಾಗಿದೆ.
ದೇಶದಲ್ಲಿ ಟ್ರಾಕ್ಟರ್ ಉತ್ಪಾದಿಸುವುದರಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಪಡೆದಿರುವ ಪಂಜಾಬ್ ಮೂಲದ ಸೋನಲಿಕಾ ಗ್ರೂಪ್ಸ ನೂತನ ವರ್ಲ್ಡ್‌ಟ್ರಾಕ್ 90 ಅಶ್ವಶಕ್ತಿ ಪವರ್‌ಫುಲ್ ಟ್ರಾಕ್ಟರ್ ಪರಿಚಯಿಸಿದೆ. ಇದರ ದರ 14.45 ಲಕ್ಷ ರು.ಗಳಾಗಿವೆ.
ಇದೇ ಕಾರಣಕ್ಕಾಗಿ ಆರಂಭದಲ್ಲೇ ಧನಿಕ ರೈತರಿಗಾಗಿ ಎಂಬುದನ್ನು ನಾವು ಉಲ್ಲೇಖಿಸಿರುತ್ತೇವೆ. ಇದರಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಕೊಠಡಿ ಲಗತ್ತಿಸಲಾಗಿದ್ದು, ಚಾಲಕನಿಗೆ ಆರಾಮದಾಯಕವಾಗಲಿದೆ. ಅಷ್ಟೇ ಅಲ್ಲದೆ ಮನರಂಜನೆಗಾಗಿ ಮ್ಯೂಸಿಕ್ ಸಿಸ್ಟಂ ಕೂಡಾ ಇದೆ.
ಒಟ್ಟಾರೆಯಾಗಿ ಟ್ರಾಕ್ಟರ್‌ಗಳಿಗೂ ಆಧುನಿಕ ಟಚ್ ನೀಡಲು ಸೋನಲಿಕಾ ಸಂಸ್ಥೆ ಪ್ರಯತ್ನಿಸುತ್ತಿದೆ. ಇದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೈತರನ್ನು ಹೆಚ್ಚು ಪ್ರೋತ್ಸಾಹಿಸಲಿದೆ.


Click it and Unblock the Notifications









