ಇನ್ನು ವಾಹನಗಳಲ್ಲಿ ಡಿಜಿಟಲ್ ಲೈಸನ್ಸ್ ಪ್ಲೇಟ್ ಆಳವಡಿಕೆ
ಇನ್ನು ಮುಂದೆ ವಾಹನಗಳಲ್ಲಿ ಹಳೆಯ ಕ್ಲಾಸಿಕ್ ನಂಬರ್ ಪ್ಲೇಟ್‌ಗೆ ಗುಡ್‌ಬೈ ಹೇಳಬಹುದು. ಸಂಪೂರ್ಣವಾಗಿ ಡಿಜಿಟಲ್ ರೂಪ ಪಡೆದಿರುವ ನಂಬರ್ ಪ್ಲೇಟ್ ಆಗಮನಕ್ಕೆ ಕಾಲ ಸನ್ನಿಹಿತವಾಗಿದೆ.
ಅಂದ ಹಾಗೆ ನಾವು ಮಾತನಾಡುತ್ತಿರುವುದು ನಮ್ಮ ದೇಶದ ವಿಚಾರವಲ್ಲ. ಬದಲಾಗಿ ಅಮೆರಿಕದ ದಕ್ಷಿಣ ಕರೊಲಿನಾ ಪ್ರಾಂತ್ಯದಲ್ಲಿ ಇಂತಹದೊಂದು ಮಹತ್ವದ ವಿಚಾರ ಪ್ರಸ್ತಾಪವಾಗಿದೆ.
ಡೇವಿಡ್ ಫೈಂಡ್‌ಲೇ ಎಂಬವರ ಮನದಲ್ಲಿ ಹೊಳೆದಿರುವ ಈ ಯೋಜನೆ ನನಸಾಗುವ ಸಾಧ್ಯತೆಗಳಿವೆ. ಪ್ರಾಂತ್ಯ ಆಡಳಿತಾ ವರ್ಗದಿಂದ ಅನುಮತಿ ದೊರೆತಲ್ಲಿ ವಾಹನಗಳಿಗೆ ಡಿಜಿಟಲ್ ನಂಬರ್ ಪ್ಲೇಟ್ ಆಳವಡಿಕೆಯಾಗಲಿದೆ.
ಇಲ್ಲಿ ಗಮನಾರ್ಹ ವಿಷಯ ಏನೆಂದರೆ ಡಿಜಿಟಲ್ ನಂಬರ್ ಪ್ಲೇಟನ್ನು ಸಂಪೂರ್ಣವಾಗಿಯೂ ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಹಾಗೆಯೇ ಎಲ್ಲ ಮಾಹಿತಿಗಳನ್ನು ಒಳಗೊಂಡಿರಲಿದೆ. ಒಟ್ಟಾರೆಯಾಗಿ ತಂತ್ರಜ್ಞಾನ ಅಭಿವದ್ಧಿ ಸಾದಿಸಿರುವುಂತೆಯೇ ವಾಹನಗಳ ನಂಬರ್ ಪ್ಲೇಟ್ ಕೂಡಾ ಎಲೆಕ್ಟ್ರಿಕ್‌ಮಯವಾಗುತ್ತಿದೆ.


Click it and Unblock the Notifications









