ಬಜಾಜ್ ಕ್ವಾಡ್ರಾಸೈಕಲ್ ಯೋಜನೆಗೆ ತಗಾದೆ ಎತ್ತಿದ ಟಾಟಾ

By Nagaraja

ಬಹುನಿರೀಕ್ಷಿತ ಕ್ವಾಡ್ರಾಸೈಕಲ್ ವಾಹನವನ್ನು ಬಿಡುಗಡೆಗೊಳಿಸಲು ಸನ್ನದ್ಧವಾಗಿರುವ ಬಜಾಜ್ ಆಟೋ, ಕೇಂದ್ರ ಸರಕಾರದ ಮಾನ್ಯತೆಗಾಗಿ ಕಾಯುತ್ತಿದೆ. ಹಾಗಿರುವಂತೆಯೇ ಬಜಾಜ್ ಯೋಜನೆಗೆ ತಗಾದೆ ಎತ್ತಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್, ಟೀಕಾಪ್ರಹಾರ ನಡೆಸಿದೆ.

ಭಾರತೀಯ ರಸ್ತೆಗಳಲ್ಲಿ ಕ್ವಾಡ್ರಾಸೈಕಲ್ ವಿಭಾಗದ ವಾಹನಗಳಿಗೆ ಅನುಮತಿ ನೀಡಲು ಕೇಂದ್ರ ಸರಕಾರ ಮುಂದಾಗುತ್ತಿದೆ. ಇದನ್ನು ಹಿಂದುಳಿದ ಹೆಜ್ಜೆ ಎಂದು ಟೀಕಿಸಿರುವ ಟಾಟಾ ಮೋಟಾರ್ಸ್ ಮಹಾ ನಿರ್ದೇಶಕ ಕಾರ್ಲ್ ಸ್ಲಿಮ್, ಟ್ರಾಫಿಕ್ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗಾಗಿ ಸರಕಾರ ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ.

ನಾಲ್ಕು ಚಕ್ರದ ಸಣ್ಣ ವಾಹನ ಅಥವಾ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಬಜಾಜ್ ಆರ್‌ಇ60 ಸದ್ಯದಲ್ಲೇ ಮಾರುಕಟ್ಟೆಗೆ ಆಗಮಿಸಲಿರುವಂತೆಯೇ ಟಾಟಾದಿಂದ ಇಂತಹದೊಂದು ವಿರುದ್ಧ ಹೇಳಿಕೆ ಕಂಡುಬಂದಿದೆ.

ಪ್ರಮುಖವಾಗಿ ಆಟೋ ರಿಕ್ಷಾ ಬದಲಿ ವ್ಯವಸ್ಥೆ ಎಂದೇ ಬಣ್ಣಿಸಲಾಗಿರುವ ಬಜಾಜ್ ಆರ್‌ಇ60 ನಗರದೊಳಗಿನ ಪ್ರಯಾಣಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಆಗಿರಲಿದೆ. ಇದು ಟಾಟಾದ ಅತಿ ಅಗ್ಗದ ಕಾರಾದ ನ್ಯಾನೋ ಪ್ರತಿಸ್ಪರ್ಧಿ ಎನ್ನಲಾಗುತ್ತಿದೆ. 200ಸಿಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿರುವ ಪ್ರಸ್ತುತ ಗಾಡಿ ಪ್ರತಿ ಗಂಟೆಗೆ ಗರಿಷ್ಠ 70 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಇವನ್ನೂ ಓದಿರಿ: ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆ; ಬರುತ್ತಿದೆ ಬಜಾಜ್ ಆರ್‌ಇ60

More from DriveSpark

Article Published On: Friday, April 26, 2013, 12:41 [IST]
English summary
Amid a move by the government to form a policy to allow quadricycles on Indian roads, auto major Tata Motors has hit out at it terming it as a backward step.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+