ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆ; ಬರುತ್ತಿದೆ ಬಜಾಜ್ ಆರ್‌ಇ60

Posted By:

ಹೌದು, ಇದನ್ನು ಆಟೋಮೊಬೈಲ್ ಜಗತ್ತಿನ ಕ್ರಾಂತಿಕಾರಿ ಬದಲಾವಣೆ ಎಂದೇ ವಿಶ್ಲೇಷಿಸಬಹುದು. ಜನ ಸಾಮಾನ್ಯರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಹೆಚ್ಚಾಗಿಯೇ ಬಳಸುತ್ತಿರುವ ಆಟೋರಿಕ್ಷಾಗಳಿಗೆ ಬದಲಿಯಾಗಿ ಬಜಾಜ್ ಆಟೊ ಕಂಪನಿ ನೂತನ ಆರ್‌ಇ60 ಅವಿಷ್ಕಾರ ಮಾಡಲು ಸಿದ್ಧಗೊಂಡಿದೆ.

ಏನಿದು ಬಜಾಜ್ ಆರ್‌ಇ60..?

ಮುಂದಿನ ಕೆಲವೇ ತಿಂಗಳುಗಳಲ್ಲಿ ಬಜಾಜ್ ಆಟೋಮೊಬೈಲ್ ಜಗತ್ತಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲಿದ್ದು, ಆರ್‌ಇ60 ನಾಲ್ಕು ಚಕ್ರದ ವಾಹನವನ್ನು ಬಿಡುಗಡೆಗೊಳಿಸಲಿದೆ. ಅಂದ ಹಾಗೆ ಭಾರತೀಯ ಸರಕಾರವು 'ಕ್ವಾಡ್ರಿಸೈಕಲ್ ನೀತಿ'ಯನ್ನು ಇನ್ನಷ್ಟೇ ಮಂಜೂರುಗೊಳಿಸಬೇಕಾಗಿದೆ. ಈ ನಡುವೆ ಮುಂದಿನ ಜನವರಿ ತಿಂಗಳಲ್ಲಿ ದೆಹಲಿ ವಾಹನ ಮೇಳದಲ್ಲಿ ಬಜಾಜ್ ಆರ್‌ಇ 60 ಪ್ರದರ್ಶನಗೊಳ್ಳುವ ಎಲ್ಲ ಸಾಧ್ಯತೆಗಳಿವೆ.

ಬಜಾಜ್ ಆರ್‌ಇ60 ಆಟೋರಿಕ್ಷಾಗಳಿಗಿಂತ ಹೇಗೆ ಭಿನ್ನ?

ಬಜಾಜ್ ಆರ್‌ಇ 60 ನಾಲ್ಕು ಚಕ್ರದ ವಾಹನ ಹಿಂದಿನ ಆಟೋರಿಕ್ಷಾ ಮಾದರಿಯ ಅಪ್‌ಗ್ರೇಡ್ ಆವೃತ್ತಿ ಆಗಿದ್ದು, ಟಾಟಾ ನ್ಯಾನೊಗಳಂತಹ ಸಣ್ಣ ಕಾರುಗಳಿಗೆ ಸಾಮ್ಯತೆ ಹೊಂದಿದೆ. ಬಜಾಜ್ ಆರ್‌ಇ 60 ಆಗಮನದೊಂದಿಗೆ ದೇಶದಲ್ಲಿ ಸಾರಿಗೆ ಸಂಚಾರಕ್ಕೆ ಪರಿಹಾರ ದೊರಕುವ ನಿರೀಕ್ಷೆಯಿದ್ದು, ಕಳೆದ ಕೆಲವು ದಶಕಗಳಿಂದಲೂ ಚಾಲ್ತಿಯಲ್ಲಿರುವ ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಲಿದೆ.

ದರ ಎಷ್ಟು..?

ಆಟೋರಿಕ್ಷಾಗಳ ದರಗಳಿಗೆ ಹೋಲಿಸಿದಾಗ ಬಜಾಜ್ ಆರ್‌ಇ60 ಫೋರ್ ವೀಲರ್ ವಾಹನ ಕಡಿಮೆ ಅಗ್ಗದ ದರದಲ್ಲಿ ಗ್ರಾಹಕರ ಕೈಸೇರಲಿದೆ.

ಸುರಕ್ಷಿತವೇ..?

ಹಾಗೆಯೇ ಮೂರು ಚಕ್ರಗಳ ಆಟೋರಿಕ್ಷಾಗಳಿಗಿಂತ ನಾಲ್ಕು ಚಕ್ರದ ಬಜಾಜ್ ಆರ್‌ಇ60 ಹೆಚ್ಚು ಸುರಕ್ಷಿತವಾಗಿದ್ದು, ಸುಗಮ ಸಂಚಾರಕ್ಕೆ ಹೇಳಿ ಮಾಡಿಸಿದಂತಿದೆ.

ಇಂಧನ ದಕ್ಷತೆ

ಕಡಿಮೆ ಹೊಗೆಯನ್ನು ಹೊರಸೂಸುವ ಬಜಾಜ್ ಆರ್‌ಇ 60, ಆಟೋರಿಕ್ಷಾಗಳಿಗೆ ಹೋಲಿಸಿದಾಗ ಗರಿಷ್ಠ ಇಂಧನ ದಕ್ಷತೆಯನ್ನು ಹೊಂದಿದೆ. ಈ ಎಲ್ಲ ವೈಶಿಷ್ಟ್ಯಗಳೊಂದಿಗೆ ನಗರ ಪ್ರದೇಶಗಳ ಸಂಚಾರಿ ಪಯಣದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಲು ಬಜಾಜ್ ಸಿದ್ಧವಾಗಿದೆ.

ಎಂಜಿನ್

ಬಜಾಜ್ ಆರ್‌ಇ60 ನಾಲ್ಕು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ನಾಲ್ಕು ಸ್ಟ್ರೋಕ್ ಎಂಜಿನ್‌ನಿಂದ ಲಿಕ್ವಿಡ್ ಕೂಲಿಂಗ್ ಸುಗಮವಾಗಿ ಸಾಗಲಿದೆ. ಅಲ್ಲದೆ ಪಲ್ಸರ್ ರೇಂಜ್‌ನ ಮೋಟಾರ್ ಸೈಕಲ್‌ಗಳಂತೆ ಟ್ವಿನ್ ಸ್ಪಾರ್ಟ್ ಪ್ಲಗ್ ಡಿಟಿಎಸ್‌ಐ ತಂತ್ರಜ್ಞಾನ ಆಳವಡಿಸಲಾಗಿದೆ. 20 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸಲಿರುವ ಬಜಾಜ್‌ ಆರ್‌ಇ60 ಪ್ರತಿ ಲೀಟರ್‌ಗೆ ಗರಿಷ್ಠ 35 ಕಿಲೋ ಮೀಟರ್ ಇಂಧನ ಕ್ಷಮತೆ ನೀಡಲಿದೆ.

ಇಂಧನ ದಕ್ಷತೆ ಯಾವುದು ಬೆಟರ್..?

ಪ್ರಸ್ತುತ ರಸ್ತೆಯಲ್ಲಿ ಓಡಾಡುತ್ತಿರುವ ಆಟೋರಿಕ್ಷಾಗಳು ಪ್ರತಿ ಲೀಟರ್‌ಗೆ 25 ಕಿಲೋ ಮೀಟರ್ ಇಂಧನ ದಕ್ಷತೆ ನೀಡಲಿದೆ. ಬಜಾಜ್ ಆರ್‌ಇ60 ಸಿಎನ್‌ಜಿ ಹಾಗೂ ಎಪಿಜಿ ಆಯ್ಕೆಯಲ್ಲೂ ಲಭ್ಯವಿರಲಿರುವುದರಿಂದ ದರ ಮತ್ತಷ್ಟು ಅಗ್ಗವಾಗಲಿದೆ. ಆದರೆ ಸದ್ಯಕ್ಕಂತೂ ಡೀಸೆಲ್ ಹಾಗೂ ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಲಭ್ಯವಿರುವುದಿಲ್ಲ.

ವಿಂಡೋ ಸ್ಪೆಷಲ್...

ಪ್ರಸ್ತುತ ನಾಲ್ಕು ಚಕ್ರಗಳ ಆಟೋ ರಿಕ್ಷಾಗಳಿಗಿಂತ ಭಿನ್ನವಾಗಿ ನಿರ್ದಿಷ್ಟಪಡಿಸಿದ ಕಿಟಕಿಗಳು ಸಿದ್ಧಪಡಿಸಿರುವುದು ಬಜಾಜ್ ಆರ್‌ಇ 60 ನಾಲ್ಕು ಚಕ್ರ ವಾಹನದ ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇದರಿಂದ ಉತ್ತಮ ಹವಾಮಾನ ರಕ್ಷಣೆ ದೊರಕುವುದರ ಜತೆ ಸುರಕ್ಷಿತ ಪಯಣಕ್ಕೆ ನೆರವು ಮಾಡಲಿದೆ. ಸದ್ಯ ಆಟೋರಿಕ್ಷಾ ತಯಾರಿಯಾಗುತ್ತಿರುವ ಔರಂಗಬಾದ್‌ನ ವಾಲುಜ್ ಪ್ಲಾಂಟ್‌ನಲ್ಲೇ ಬಜಾಜ್ ಆಟೋದ ನೂತನ ಅವಿಷ್ಕಾರ ನಿರ್ಮಾಣವಾಗಲಿದೆ.

ಹಾಗೆಯೇ ಭವಿಷ್ಯದಲ್ಲಿ ಬಜಾಜ್ ಆರ್‌ಇ60 ಮಾದರಿಯಲ್ಲಿ ಘನ ವಾಹನ, ಮಿನಿ ಪಿಕ್ ಅಪ್ ಟ್ರಕ್ ನಿರ್ಮಿಸಲು ಕೂಡಾ ಬಜಾಜ್ ಆಟೋ ಯೋಜನೆಯಿರಿಸಿಕೊಂಡಿದೆ. ಪಿಕ್ ಅಪ್ ಟ್ರಕ್ ವೆರಿಯಂಟ್ ಆರ್‌ಇ60 ವಾಹನ ಟಾಟಾ ಏಸ್ ಹಾಗೂ ಮಹೀಂದ್ರ ಮಾಕ್ಸಿಮೊ ಜತೆ ಸಾಮ್ಯತೆ ಹೊಂದಿರಲಿದೆ. ಮತ್ತೊಂದು ವೈವಿಧ್ಯತೆ ಏನೆಂದರೆ ಬಜಾಜ್ ಆಟೊ ಒಂದು ಲಕ್ಷ ಬಜೆಟ್‌ನೊಳಗೆ ಲಭಿಸಲಿದೆ. ಒಂದು ವೇಳೆ ಇದು ನನಸಾದ್ದಲ್ಲಿ ಖಂಡಿತವಾಗಿಯೂ ಇದು ಹೊಸ ಕ್ರಾಂತಿಗೆ ಕಾರಣವಾಗಲಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಮುಂದಿನ ಕೆಲವೇ ತಿಂಗಳುಗಳಲ್ಲಿ ಬಜಾಜ್ ಆಟೋಮೊಬೈಲ್ ಜಗತ್ತಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲಿದ್ದು, ಆರ್‌ಇ60 ನಾಲ್ಕು ಚಕ್ರದ ವಾಹನವನ್ನು ಬಿಡುಗಡೆಗೊಳಿಸಲಿದೆ. ಅಂದ ಹಾಗೆ ಭಾರತೀಯ ಸರಕಾರವು 'ಕ್ವಾಡ್ರಿಸೈಕಲ್ ನೀತಿ'ಯನ್ನು ಇನ್ನಷ್ಟೇ ಮಂಜೂರುಗೊಳಿಸಬೇಕಾಗಿದೆ. ಈ ನಡುವೆ ಮುಂದಿನ ಜನವರಿ ತಿಂಗಳಲ್ಲಿ ದೆಹಲಿ ವಾಹನ ಮೇಳದಲ್ಲಿ ಬಜಾಜ್ ಆರ್‌ಇ 60 ಪ್ರದರ್ಶನಗೊಳ್ಳುವ ಎಲ್ಲ ಸಾಧ್ಯತೆಗಳಿವೆ.

ಬಜಾಜ್ ಆರ್‌ಇ60 ಆಟೋರಿಕ್ಷಾಗಳಿಗಿಂತ ಹೇಗೆ ಭಿನ್ನ?

ಬಜಾಜ್ ಆರ್‌ಇ60 ಆಟೋರಿಕ್ಷಾಗಳಿಗಿಂತ ಹೇಗೆ ಭಿನ್ನ?

ಬಜಾಜ್ ಆರ್‌ಇ 60 ನಾಲ್ಕು ಚಕ್ರದ ವಾಹನ ಹಿಂದಿನ ಆಟೋರಿಕ್ಷಾ ಮಾದರಿಯ ಅಪ್‌ಗ್ರೇಡ್ ಆವೃತ್ತಿ ಆಗಿದ್ದು, ಟಾಟಾ ನ್ಯಾನೊಗಳಂತಹ ಸಣ್ಣ ಕಾರುಗಳಿಗೆ ಸಾಮ್ಯತೆ ಹೊಂದಿದೆ. ಬಜಾಜ್ ಆರ್‌ಇ 60 ಆಗಮನದೊಂದಿಗೆ ದೇಶದಲ್ಲಿ ಸಾರಿಗೆ ಸಂಚಾರಕ್ಕೆ ಪರಿಹಾರ ದೊರಕುವ ನಿರೀಕ್ಷೆಯಿದ್ದು, ಕಳೆದ ಕೆಲವು ದಶಕಗಳಿಂದಲೂ ಚಾಲ್ತಿಯಲ್ಲಿರುವ ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಲಿದೆ.

ಬಜಾಜ್ ಆರ್‌ಇ60 ದರ

ಬಜಾಜ್ ಆರ್‌ಇ60 ದರ

ಆಟೋರಿಕ್ಷಾಗಳ ದರಗಳಿಗೆ ಹೋಲಿಸಿದಾಗ ಬಜಾಜ್ ಆರ್‌ಇ60 ಫೋರ್ ವೀಲರ್ ವಾಹನ ಕಡಿಮೆ ಅಗ್ಗದ ದರದಲ್ಲಿ ಗ್ರಾಹಕರ ಕೈಸೇರಲಿದೆ.

ಬಜಾಜ್ ಆರ್‌ಇ60 ಸುರಕ್ಷಿತ

ಬಜಾಜ್ ಆರ್‌ಇ60 ಸುರಕ್ಷಿತ

ಹಾಗೆಯೇ ಮೂರು ಚಕ್ರಗಳ ಆಟೋರಿಕ್ಷಾಗಳಿಗಿಂತ ನಾಲ್ಕು ಚಕ್ರದ ಬಜಾಜ್ ಆರ್‌ಇ60 ಹೆಚ್ಚು ಸುರಕ್ಷಿತವಾಗಿದ್ದು, ಸುಗಮ ಸಂಚಾರಕ್ಕೆ ಹೇಳಿ ಮಾಡಿಸಿದಂತಿದೆ.

ಬಜಾಜ್ ಆರ್‌ಇ60 ವೈಶಿಷ್ಟ್ಯ

ಬಜಾಜ್ ಆರ್‌ಇ60 ವೈಶಿಷ್ಟ್ಯ

ಕಡಿಮೆ ಹೊಗೆಯನ್ನು ಹೊರಸೂಸುವ ಬಜಾಜ್ ಆರ್‌ಇ 60, ಆಟೋರಿಕ್ಷಾಗಳಿಗೆ ಹೋಲಿಸಿದಾಗ ಗರಿಷ್ಠ ಇಂಧನ ದಕ್ಷತೆಯನ್ನು ಹೊಂದಿದೆ. ಈ ಎಲ್ಲ ವೈಶಿಷ್ಟ್ಯಗಳೊಂದಿಗೆ ನಗರ ಪ್ರದೇಶಗಳ ಸಂಚಾರಿ ಪಯಣದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಲು ಬಜಾಜ್ ಸಿದ್ಧವಾಗಿದೆ.

ಬಜಾಜ್ ಆರ್‌ಇ60 ಎಂಜಿನ್

ಬಜಾಜ್ ಆರ್‌ಇ60 ಎಂಜಿನ್

ಬಜಾಜ್ ಆರ್‌ಇ60 ನಾಲ್ಕು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ನಾಲ್ಕು ಸ್ಟ್ರೋಕ್ ಎಂಜಿನ್‌ನಿಂದ ಲಿಕ್ವಿಡ್ ಕೂಲಿಂಗ್ ಸುಗಮವಾಗಿ ಸಾಗಲಿದೆ. ಅಲ್ಲದೆ ಪಲ್ಸರ್ ರೇಂಜ್‌ನ ಮೋಟಾರ್ ಸೈಕಲ್‌ಗಳಂತೆ ಟ್ವಿನ್ ಸ್ಪಾರ್ಟ್ ಪ್ಲಗ್ ಡಿಟಿಎಸ್‌ಐ ತಂತ್ರಜ್ಞಾನ ಆಳವಡಿಸಲಾಗಿದೆ. 20 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸಲಿರುವ ಬಜಾಜ್‌ ಆರ್‌ಇ60 ಪ್ರತಿ ಲೀಟರ್‌ಗೆ ಗರಿಷ್ಠ 35 ಕಿಲೋ ಮೀಟರ್ ಇಂಧನ ಕ್ಷಮತೆ ನೀಡಲಿದೆ.

ಬಜಾಜ್ ಆರ್‌ಇ60 ಇಂಧನ ದಕ್ಷತೆ

ಬಜಾಜ್ ಆರ್‌ಇ60 ಇಂಧನ ದಕ್ಷತೆ

ಪ್ರಸ್ತುತ ರಸ್ತೆಯಲ್ಲಿ ಓಡಾಡುತ್ತಿರುವ ಆಟೋರಿಕ್ಷಾಗಳು ಪ್ರತಿ ಲೀಟರ್‌ಗೆ 25 ಕಿಲೋ ಮೀಟರ್ ಇಂಧನ ದಕ್ಷತೆ ನೀಡಲಿದೆ. ಬಜಾಜ್ ಆರ್‌ಇ60 ಸಿಎನ್‌ಜಿ ಹಾಗೂ ಎಪಿಜಿ ಆಯ್ಕೆಯಲ್ಲೂ ಲಭ್ಯವಿರಲಿರುವುದರಿಂದ ದರ ಮತ್ತಷ್ಟು ಅಗ್ಗವಾಗಲಿದೆ. ಆದರೆ ಸದ್ಯಕ್ಕಂತೂ ಡೀಸೆಲ್ ಹಾಗೂ ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಲಭ್ಯವಿರುವುದಿಲ್ಲ.

English summary
The launch of the Bajaj RE60 has been a topic of suspense since its unveiling at the Delhi Auto Expo this January. But the latest buzz is that, the company is planning to launch this four wheeler by end of this fiscal.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more