ಕನಸಿನ ಕೂಸು ನ್ಯಾನೋ ಆಗಲಿದೆ 'ಸ್ಮಾರ್ಟ್ ಸಿಟಿ ಕಾರು'
ಟಾಟಾ ಮೋಟಾರ್ಸ್ ಮಾಜಿ ಮುಖ್ಯಸ್ಥ ರತನ್ ಟಾಟಾ ಕನಸಿನ ಕೂಸು ವಿಶ್ವದ ಅತಿ ಅಗ್ಗದ ಕಾರು 'ನ್ಯಾನೋ' ಸದ್ಯದಲ್ಲೇ ಹೊಸ ರೂಪ ಪಡೆಯಲಿದೆ. ಹೌದು ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂದಿನ ದಿನಗಳಲ್ಲಿ ನ್ಯಾನೋ 'ಸ್ಮಾರ್ಟ್ ಸಿಟಿ' ಕಾರು ಎನಿಸಿಕೊಳ್ಳಲಿದೆ.
ಮಾರಾಟ ಕುಸಿತ, ಆಗ್ನಿ ಆಕಸ್ಮಿಕ ಹೀಗೆ ಹಲವು ಬಾರಿ ತೊಂದರೆ ಕಾಣಿಸಿಕೊಂಡರೂ ಎದೆಗುಂದದ ಟಾಟಾ ಮೋಟಾರ್ಸ್, ದೇಶದ ಮಧ್ಯಮ ವರ್ಗದ ಜನರಿಗಾಗಿ ವಿಭಿನ್ನ ವೆರಿಯಂಟ್‌ಗಳ ನ್ಯಾನೋ ಪರಿಚಯಿಸಿತ್ತು.
ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ನ್ಯಾನೋ ಸದ್ಯದಲ್ಲೇ ಸ್ಮಾರ್ಟ್ ಸಿಟಿ ಕಾರು ಎನಿಸಿಕೊಳ್ಳಲಿದೆ. ಇದರೊಂದಿಗೆ ಕೆಲವು ಅತ್ಯಾಕರ್ಷಕ ಫೀಚರ್‌ಗಳು ಸೇರ್ಪಡೆಯಾಗಲಿದ್ದು, ಈ ಎಲ್ಲ ವೈಶಿಷ್ಟ್ಯಗಳು ಸಮಾಜದ ಹಿರಿಯ ಜನರನ್ನು ಆಕರ್ಷಿಸಲಿದೆ.
ಪವರ್ ಸ್ಟೀರಿಂಗ್ ಜತೆ ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ಭಾಗಗಳು ಹೊಸ ವಿನ್ಯಾಸ ಪಡೆದುಕೊಳ್ಳಲಿದೆ. ಈ ಎಲ್ಲ ಬದಲಾವಣೆಗಳು ನ್ಯಾನೋ ಸಿಎನ್‌ಜಿ ಹಾಗೂ ಡೀಸೆಲ್ ವರ್ಷನ್‌ಗಳು ಮಾರುಕಟ್ಟೆ ಪ್ರವೇಶಿಸಿದ ಬೆನ್ನಲ್ಲೇ ಕಂಡುಬರಲಿದೆ.
ಸದ್ಯ ನ್ಯಾನೋ 800ಸಿಸಿ ಡೀಸೆಲ್ ಎಂಜಿನ್ ಕಾರನ್ನು ಲಾಂಚ್ ಮಾಡುವ ಸಿದ್ಧತೆಯಲ್ಲಿದೆ. ಇದು ಜಗತ್ತಿನಲ್ಲಿ ಅತ್ಯಂತ ಕಡಿಮೆಯ ಟರ್ಬೊ ಚಾರ್ಜರ್ ಹೊಂದಿರುವ ಡೀಸೆಲ್ ಎಂಜಿನ್ ಎನಿಸಿಕೊಳ್ಳಲಿದೆ. ಇದು ಎಆರ್‌ಎಐ ಮಾನ್ಯತೆ ಪ್ರಕಾರ ಪ್ರತಿ ಲೀಟರ್‌ಗೆ 40 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications









