ಅಗ್ಗದ ಕಾರು ಟಾಟಾ ನ್ಯಾನೋ ಕಂಪ್ಲೀಟ್ ಪ್ಲಾಪ್; ಏಕೆ?

By Nagaraja

ವಿಶ್ವದ ಅತಿ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟಾಟಾ ನ್ಯಾನೋ, ಗ್ರಾಹಕರ ನಿರೀಕ್ಷೆ ತಲುಪುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆಯೇ? ಹೌದು ಅಂತಿದೆ ಎಪ್ರಿಲ್ ಮಾರಾಟ ಅಂಕಿಅಂಶ.

ಕಳೆದ ಕೆಲವು ತಿಂಗಳುಗಳಲ್ಲಿ ಗ್ರಾಹಕರ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲವಾಗಿರುವ ಟಾಟಾ ನ್ಯಾನೋ, 2013 ಎಪ್ರಿಲ್ ಮಾರಾಟದಲ್ಲಿ ಶೇಕಡಾ 88ರಷ್ಟು ಭಾರಿ ಕುಸಿತವನ್ನು ಅನುಭವಿಸಿದೆ. ಈ ಅವಧಿಯಲ್ಲಿ 948 ಯುನಿಟ್ ಮಾತ್ರ ಮಾರಾಟ ಮಾಡುವಲ್ಲಿ ನ್ಯಾನೋ ಯಶಸ್ವಿಯಾಗಿದೆ. ಕಳೆದ ವರ್ಷ 8028 ಯುನಿಟ್‌ಗಳನ್ನು ಸೇಲ್ ಮಾಡಲಾಗಿತ್ತು.

ನ್ಯಾನೋ ಅಧಪತನ ಕೇವಲ ಎಪ್ರಿಲ್ ತಿಂಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದೊಂದು ವರ್ಷದಿಂದ ನಿರಂತರವಾಗಿ ಹಿನ್ನಡೆ ಅನುಭಸುತ್ತಿದೆ. ಹಾಗಾಗಿ ಸದ್ಯದಲ್ಲೇ ಆಗಮನವಾಗಲಿರುವ ಟಾಟಾ ನ್ಯಾನೋ ಫೇಸ್‌ಲಿಫ್ಟ್ ವರ್ಷನ್ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಂತೆಯೇ ಮುಂದಿನ ವರ್ಷ ಟಾಟಾ ನ್ಯಾನೋ ಡೀಸೆಲ್ ವರ್ಷನ್ ಮಾರುಕಟ್ಟೆಗೆ ಪರಿಚಯವಾಗಲಿದೆ.

ಒಟ್ಟಾರೆಯಾಗಿ ಟಾಟಾ ಮೋಟಾರ್ಸ್ ಎಪ್ರಿಲ್ ತಿಂಗಳ ಮಾರಾಟದಲ್ಲಿ ಶೇಕಡಾ 14.85ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 60,086 ಯುನಿಟ್ ಸೇಲ್ ಆಗಿದ್ದರೆ ಈ ಬಾರಿಯದು 51,160 ಯುನಿಟ್‌ಗಳಿಗಷ್ಟೇ ಸೀಮಿತವಾಗಿದೆ.

More from DriveSpark

Article Published On: Wednesday, May 8, 2013, 12:22 [IST]
English summary
Tata Motors has sells just 948 units of Nano in April 2013, Nano sales declined over 88 percent during the month compared to 8,028 units sold in April last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+