2013ರಲ್ಲಿ ನ್ಯಾನೋಗೆ ಇನ್ನಷ್ಟು ಪವರ್‌ಫುಲ್ ಎಂಜಿನ್?

By Nagaraja

ದೇಶದ ಅತಿ ಅಗ್ಗದ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ಟಾಟಾ ನ್ಯಾನೋ ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಪವರ್‌ಫುಲ್ ಎಂಜಿನ್ ಪಡೆಯಲಿದೆ. ನ್ಯಾನೋ ಲಾಂಚ್ ಆದ ದಿನದಿಂದಲೇ ತಂತ್ರಗಾರಿಕೆ ಹಾಗೂ ನಿರ್ವಹಣೆ ದೃಷ್ಟಿಕೋನದಲ್ಲಿ ಟಾಟಾ ಮೋಟಾರ್ಸ್‌ಗೆ ನ್ಯಾನೋ ಪ್ರಮುಖ ಸವಾಲಾಗಿ ಪರಿಣಮಿಸಿತ್ತು.

ಇವೆಲ್ಲದರ ನಡುವೆಯೂ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ನ್ಯಾನೋ ಯಶಸ್ವಿಯಾಗಿತ್ತು. ಅಂತೆಯೇ ಕಳೆದ ನವೆಂಬರ್ ತಿಂಗಳಲ್ಲಿ 3500 ಯುನಿಟ್ ಸೇಲ್ ಮಾಡುವಲ್ಲಿ ಯಶ ಸಾಧಿಸಿತ್ತು.

ಇದೀಗ ಬಂದಿರುವ ಮಾಹಿತಿಯಂತೆ ಟಾಟಾ ನ್ಯಾನೋ ಎಂಜಿನ್ ಪರಿಷ್ಕೃತಗೊಳ್ಳಲಿದೆ. ಮೂಲಗಳ ಪ್ರಕಾರ 2013ರಲ್ಲಿ ಆಗಮಿಸಲಿರುವ ನ್ಯಾನೋ ಪೆಟ್ರೋಲ್ ಆವೃತ್ತಿಯ ಕಾರು 800 ಸಿಸಿ ಎಂಜಿನ್ ಪಡೆಯಲಿದೆ. ಪ್ರಸ್ತುತ ನ್ಯಾನೋ ಪೆಟ್ರೋಲ್ ಆವೃತ್ತಿಯು 38 ಪಿಎಸ್ 624 ಸಿಸಿ ಎಂಜಿನ್ ಹೊಂದಿದೆ.

ಹಾಗೆಯೇ ಮುಂಬರುವ ದಿನಗಳಲ್ಲಿ ನ್ಯಾನೋ ಸಿಎನ್‌ಜಿ ಹಾಗೂ ಡೀಸೆಲ್ ಆವೃತ್ತಿಗಳು ಸಹ ಭಾರಿ ನಿರೀಕ್ಷೆ ಮೂಡಿಸಿವೆ. ಇದರ ಜತೆ ನ್ಯಾನೋ 800ಸಿಸಿ ಎಂಜಿನ್ ಸ್ಟೈಲಿಷ್ ವಿನ್ಯಾಸ ಹಾಗೂ ಅಪ್‌ಗ್ರೇಡ್ ವರ್ಷನ್ ಪಡೆಯಲಿದೆ.

ಆದರೂ ರೆನೊ ಹಾಗೂ ಡಟ್ಸನ್ ಎಂಟ್ರಿ ಲೆವೆಲ್ ಕಾರುಗಳು ಪ್ರಮುಖ ಸವಾಲಾಗಲಿದೆ. ಮತ್ತೊಂದೆಡೆ ಆಲ್ಟೊ 800 ಹಾಗೂ ಹ್ಯುಂಡೈ ಇಯಾನ್ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲು ನ್ಯಾನೋ ಸಜ್ಜಾಗುತ್ತಿದೆ. ಹಾಗೆಯೇ 800ಸಿಸಿ ಪೆಟ್ರೋಲ್ ಆವೃತ್ತಿ ಸ್ವಲ್ಪ ದುಬಾರಿಯಾಗಲಿದ್ದು, 2.5 ಲಕ್ಷ ರು. ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.

More from DriveSpark

Article Published On: Tuesday, January 1, 2013, 15:40 [IST]
English summary
Industry sources are reporting that in 2013, the Nano petrol will be offered with a 800cc engine. Currently, the Nano is powered by a 38PS 624cc petrol engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+