ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

Written By:

ಪ್ರಪಂಚದ ಅಗ್ಗದ ಕಾರು ಎಂದೇ ಖ್ಯಾತಿ ಪಡೆದಿರುವ ಟಾಟಾ ಮೋಟಾರ್ಸ್ ಕಂಪನಿಯ ನ್ಯಾನೋ ಕಾರಿನಷ್ಟು ಕಡಿಮೆ ಪ್ರಮಾಣದ ಉತ್ಪಾದನೆಯಾಗುವ ಕಾರು ದೇಶದಲ್ಲಿಯೇ ಯಾವುದು ಇಲ್ಲ ಎನ್ನಬಹುದು.

ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

ಹೌದು, ಟಾಟಾ ಮೋಟರ್ಸ್ ಕಂಪನಿಯ ಹೆಮ್ಮೆ, ರತನ್ ಟಾಟಾ ಅವರ ಕೂಸು, ಬಿಡುಗಡೆಯಾಗುವ ಸಮಯದಲ್ಲಿ ಎಷ್ಟರ ಮಟ್ಟಿಗೆ ಸುದ್ದಿಯಾಗಿತ್ತೋ, ಇಂದು ಈ ವಿಷಯಕ್ಕೆ ವಿರೋಧವೆಂಬಂತೆ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗುವ ಮೂಲಕ ತನ್ನ ಖ್ಯಾತಿಯ ಶಿಖರವು ಪಾತಾಳಕ್ಕೆ ಇಳಿದಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.

ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ... ದಿನವೊಂದಕ್ಕೆ ಕೇವಲ ಎರಡು ನ್ಯಾನೋ ಕಾರುಗಳನ್ನು ಮಾತ್ರ ಟಾಟಾ ಮೋಟರ್ಸ್ ಉತ್ಪಾದನೆ ಮಾಡುತ್ತಿದೆ. ಈ ಕಾರು ಸದ್ಯ ಡೀಲರ್‌ಗಳ ನಂಬಿಕೆಯನ್ನೂ ಕಳೆದುಕೊಂಡಿದೆ ಎನ್ನಬಹುದು.

ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

ಕಂಪನಿಯ ಸನಾಂಡ್ ಸ್ಥಾವರದಲ್ಲಿ ಸರಾಸರಿ ಕೇವಲ ಎರಡು ನ್ಯಾನೊ ಕಾರುಗಳನ್ನು ದಿನಕ್ಕೆ ಉತ್ಪಾದನೆಯಾಗುತ್ತಿದ್ದು, ಅನಧಿಕೃತವಾಗಿ ಈ ವಾಹನವು ಸದ್ಯ ಬಳಕೆಯಲ್ಲಿಲ್ಲವೆಂಬುದನ್ನು ಸೂಚಿಸುತ್ತದೆ.

ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

ದೇಶದ ಬಹುತೇಕ ಭಾಗಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಡೀಲರ್‌ಗಳು ಕಳೆದ ಮೂರು ನಾಲ್ಕು ತಿಂಗಳಲ್ಲಿ ಈ ಸಣ್ಣ ಕಾರಿನ ಡೆಲಿವರಿಯನ್ನು ತೆಗೆದುಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಸದ್ಯ ಡೀಲರ್‌ಗಳು, ಹೆಚ್ಚು ಸದ್ದು ಮಾಡುತ್ತಿರುವ ಟಿಯಾಗೊ, ಟಿಗೊರ್, ಹೆಕ್ಸಾ ಮತ್ತು ನೆಕ್ಸಾನ್‌ನಂತಹ ಸಮಕಾಲೀನ ಮಾದರಿಗಳ ಕಡೆ ಹೆಚ್ಚು ಗಮನಹರಿಸಿವೆ.

ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ಹಬ್ಬದ ತಿಂಗಳುಗಳಾಗಿದ್ದವು. ಆದರೆ, ಟಾಟಾ ಮೋಟರ್ಸ್ ಕಂಪನಿಯು ಸೆಪ್ಟಂಬರ್ ತಿಂಗಳಿನಲ್ಲಿ 124 ಟಾಟಾ ನ್ಯಾನೋ ಕಾರುಗಳನ್ನು ಮಾತ್ರ ಉತ್ಪಾದಿಸಿದೆ ಮತ್ತು ಆಗಸ್ಟ್‌ನಲ್ಲಿ ಈ ಸಂಖ್ಯೆ ಕೇವಲ 57 ಕಾರುಗಳಿಗೆ ಕುಸಿದಿದೆ.

ದಿನಕ್ಕೆ ಎಷ್ಟು ನ್ಯಾನೋ ಕಾರುಗಳನ್ನು ಟಾಟಾ ಉತ್ಪಾದನೆ ಮಾಡ್ತಿದೆ ಗೊತ್ತೆ ?

ನ್ಯಾನೋ ಕಾರನ್ನು ರೂ. 2.25 ಲಕ್ಷದಿಂದ ರೂ 3.20 ಲಕ್ಷ(ಎಕ್ಸ್ ಶೋರೂಂ, ದೆಹಲಿ)ಬೆಲೆಯೊಂದಿಗೆ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಸದ್ಯ ಈ ಕಾರಿನ ಎಲೆಕ್ಟ್ರಿಕ್ ಆವೃತಿಯನ್ನು ಭಾರತದಲ್ಲಿ ಸದ್ಯದರಲ್ಲೆಯೇ ಬಿಡುಗಡೆಗೊಳಿಸಲು ಸಿದ್ದವಾಗಿದ್ದು, ಈ ವಾಹನವು ಭಾರತದಲ್ಲಿ ಜಯಂ ನಿಯೋ ಎಂಬ ಹೆಸರನ್ನು ಪಡೆದು ಬಿಡುಗಡೆಗೊಳಿಸಿದೆ.

Source Link :Business Standard

English summary
The average daily production of just two Nano cars at the TATA’s Sanand plant.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark