ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಹಣ ಇದ್ದವರಿಗೆ ವಾಹನ ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಒಂದು ವಾಹನ ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ವಾಹನ ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪಾರವು ವಾಹನ ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಟಾಟಾ ನ್ಯಾನೋ ಕಾರನ್ನು ಖರೀದಿ ಮಾಡಲು ಮುಂದಾಗಿದ್ದ ಗ್ರಾಹಕನಿಗೆ ಅಲ್ಲಿನ ಡೀಲರ್‍‍ಗಳು ಕಾರಿನ ಅಸಲು ಬೆಲೆಗಿಂತಲೂ ಸುಮಾರು ರೂ. 20000 ಹೆಚ್ಚಾಗಿ ತೆಗೆದುಕೊಂಡ ಕಾರಣ ಟಾಟಾ ನ್ಯಾನೋ ಕಾರಿನ ಮಾಲೀಕನು ಕೋರ್ಟ್ ಮೊರೆ ಹೋಗಿದ್ದನು. ಹೀಗಿರುವಾಗ ಕಾರು ಮಾಲೀಕನು ನೀಡಿದ ಡಾಕ್ಯುಮೆಂಟ್‍ಗಳನ್ನು ಪರಿಶೀಲಿಸಿದ ನಂತರ ನ್ಯಾನೋ ಕಾರಿನ ಮಾಲೀಕನಿಗೆ ಡೀಲರ್‍‍ಗಳು ಸುಮಾರು ರೂ. 50,000 ಹಾನಿ ದುಂಬಿ ಕೋಡಬೇಕಾಗಿದೆ.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಅಸಲಿಗೆ ಏಪ್ರಿಲ್ 2015 ರಂದು ತೆಲಂಗಾಣನಲ್ಲಿರುವ ನಲ್ಗೊಂಡ ಜಿಲ್ಲೆಯ ನೆರಾದ ಗ್ರಾಮದ ನಿವಾಸಿಯಾದ ಶ್ರೀದರ್ ರೆಡ್ಡಿ 2012ರ ಟಾಟಾ ನ್ಯಾನೋ ಸಿಎಕ್ಸ್ ವೇರಿಯೆಂಟ್ ಕಾರನ್ನು ರೂ. 1,39,000 ನೀಡಿ ಖರೀದಿ ಮಾಡಿದ್ದರು. ಆದರೆ ಶ್ರೀದರ್ ರೆಡ್ಡಿ ಪಡೆದ ಬಿಲ್‍ನಲ್ಲಿ ರೂ. 1,19,519 ಮಾತ್ರ ನಮೂದಿಸಲಾಗಿತ್ತು. ಅಂದರೆ ಡೀಲರ್‍‍ಗಳು ಶ್ರೀದರ್ ರೆಡ್ಡಿಯನ್ನು ಯಾಮಾರಿಸಲು ಮುಂದಾಗಿದ್ದರು.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಇದನ್ನು ಅರಿತ ಶ್ರೀದರ್ ರೆಡ್ಡಿ ನಲ್ಗೊಂಡಾನಲ್ಲಿನ ಗ್ರಾಹಕ ನ್ಯಾಯಯದ ಮೊರೆ ಹೋಗಿ ಸರಿಯಾದ ದಾಖಲೆಗಳನ್ನು ನೀಡಿ ತನಗಾದ ಮೋಸದ ಹಿನ್ನೆಲೆ ಡೀಲರ್‍‍ನ ಮೇಲೆ ಕೇಸ್ ಹಾಕಿದ. ನೀಡಿದ ದೂರಿನಲ್ಲಿ ಕಾರು ಬೆಲೆಗಿಂತಲೂ ರೂ. 19,482 ಹೆಚ್ಚಾಗಿ ತೆಗೆದುಕೊಳ್ಳಲಾಗಿದೆ. ಅಂದರೆ ಡೀಲರ್‍‍ಗಳು ಕಾರಿನ ನಿಖರವಾದ ಬೆಲೆಗಿಂತಲೂ ಶೇ. 16.2 ರಷ್ಟು ಹೆಚ್ಚಾಗಿ ತೆಗೆದುಕೊಂಡಿದ್ದಾರೆ.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಗ್ರಾಹಕ ನ್ಯಾಯಾಲಯವು ಎರಡೂ ಬದಿಗಳ ವಾದ ವಿವಾದವನ್ನು ಕೇಳಿದ ನಂತರ, ದೂರುದಾರರಿಗೆ 5,000 ರೂಪಾಯಿಯ ಪರಿಹಾರಕ್ಕಾಗಿ ವೇದಿಕೆ ಪ್ರತಿಕ್ರಿಯೆ ನೀಡಿದೆ. ಹೆಚ್ಚುವರಿಯಾಗಿ, ವರ್ಷಕ್ಕೆ 9 ಪ್ರತಿಶತದಷ್ಟು ಬಡ್ಡಿದರದಲ್ಲಿ ಅವರು ಅಧಿಕ ಮೊತ್ತವನ್ನು ಮರುಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಅದಾಗ್ಯೂ ಗ್ರಾಹಕ ನ್ಯಾಯಾಲಯವು ನೀಡಿದ ತೀರ್ಪು ಶ್ರೀದರ್ ರೆಡ್ಡಿಯವರಿಗೆ ತೃಪ್ತಿಕರವಾಗರಲಿಲ್ಲ ಮತ್ತು ಅವರು ಆಯೋಗವನ್ನು ಸಂಪರ್ಕಿಸಿದರು. ಆಯೋಗದಲ್ಲಿ ದೂರುದಾರರು ಬಡ್ದಿ ದರವನ್ನು ಶೇಕಡ 9 ತಿಂದ 24ರಷ್ಟು ಹೆಚ್ಚಿಸಲು ಹೇಳಿದಾಗ, ಆಯೋಗವು ಕೊಟ್ಟ ಬಡ್ಡಿ ದರವು ನಿಖರವಾಗಿದೆ ಎಂದು ತೀರ್ಮಾನಿಸಲಾಯಿತು.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಆನಂತರ ಪ್ರತಿಪಾದಕರು ವಾಸ್ತವವಾಗಿ ದೂರುದಾರರನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ಕೂಡ ಕಮಿಷನ್ ಎತ್ತಿಹಿಡಿದಿದೆ ಮತ್ತು ಹೇಳಿಕೆ ನೀಡಿದ ಪರಿಹಾರವನ್ನು ಹೆಚ್ಚಿಸಲು ಅನುಕೂಲವಾಯಿತು. ಹಾಗೆಯೆ ಕಮಿಷನ್ ಹತ್ತುಪಟ್ಟು ಪರಿಹಾರವನ್ನು ಹೆಚ್ಚಿಸಲು 5,000 ರಿಂದ 50,000 ರೂಪಾಯಿಗಳಿಗೆ ಹೆಚ್ಚು ಮಾಡಿದ್ದು, ನ್ಯಾಯೋಚಿತವಾಗಿರುವುದರಿಂದ ಪರಿಹಾರವು ಉತ್ತಮ ನಂಬಿಕೆ ಹೊಂದಿದೆ ಮತ್ತು ನ್ಯಾಯಾಲಯವು ನೀಡಿದ ಆದೇಶದಿಂದಾಗಿ ಶ್ರೀಧರ್ ರೆಡ್ಡಿಯವರು ಖುಷಿಯಾಗಿದ್ದಾರೆ.

Source: rushlane

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಇನ್ನು ಟಾಟಾ ನ್ಯಾನೋ ಕಾರಿನ ಬಗ್ಗೆ ಹೇಳುವುದಾದ್ರೆ 2008ರ ಆಟೋ ಎಕ್ಸ್-ಪೋನಲ್ಲಿ ಮೊದಲ ಬಾರಿಗೆ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿತ್ತು.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಕೂಡಾ ಈ ಹಿಂದೆ ಟಾಟಾ ನ್ಯಾನೋ ಉತ್ಪಾದನೆಯಿಂದ ಸಂಸ್ಥೆಗೆ 1 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ನ್ಯಾನೋ ಕಾರು ಉತ್ಪಾದನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಲಾಭ ಸಹ ಗಳಿಸಿಲ್ಲ ಎಂದು ಆರೋಪಿಸಿದ್ದರು.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಅದರಲ್ಲೂ ಕಳೆದ 6 ತಿಂಗಳಲ್ಲಿನಲ್ಲಿ ಕೇವಲ 5 ನ್ಯಾನೊ ಕಾರುಗಳು ಮಾರಾಟವಾಗಿದ್ದು, ನ್ಯಾನೊ ಕಾರಿನ ಕುರಿತು ಯಾವೊಬ್ಬ ಗ್ರಾಹಕನು ಕೂಡಾ ವಿಚಾರಣೆ ಮಾಡುತ್ತಿಲ್ಲ ಎನ್ನುವುದು ವಾಸ್ತವಾಂಶ. ಹೀಗಾಗಿಯೇ ಮಹತ್ವದ ನಿರ್ಧಾರಕ್ಕೆ ಬಂದಿರುವ ಟಾಟಾ ಸಂಸ್ಥೆಯು ನ್ಯಾನೋ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿದೆ.

ಅಧಿಕ ಹಣ ಪಡೆದ ಡೀಲರ್‍‍ಗೆ ಸರಿಯಾಗಿ ಬುದ್ದಿ ಕಲಿಸಿದ ಟಾಟಾ ನ್ಯಾನೋ ಮಾಲೀಕ

ಇದರಿಂದ ನ್ಯಾನೋ ಸ್ಥಗಿತಗೊಳಿಸುವ ತನಕ ನ್ಯಾನೋ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಮುಂಗಡ ಪಾವತಿ ನಂತರಷ್ಟೇ ನ್ಯಾನೋ ಕಾರುಗಳನ್ನು ಸಿದ್ದಗೊಳಿಸಲು ನಿರ್ಧರಿಸಿದ್ದು, ನ್ಯಾನೋ ಕಾರುಗಳನ್ನು ಸ್ಟಾಕ್ ಮಾಡದಿರಲು ತೀರ್ಮಾನಿಸಲಾಗಿದೆ.

Most Read Articles

Kannada
English summary
ata Nano Owner Compensated Rs.50,000 For Being Overcharged By Dealer In Telangana. Read In Kannada
Story first published: Tuesday, May 21, 2019, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more