ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು

Written By:

ಟಾಟಾ ಸಂಸ್ಥೆಯ ಹೆಮ್ಮೆಯ ಟಾಟಾ ನಾನೋ ಕಾರಿನ ಎಲೆಕ್ಟ್ರಿಕ್ ಆವೃತಿಯನ್ನು ಭಾರತದಲ್ಲಿ ಸದ್ಯದರಲ್ಲೆಯೇ ಬಿಡುಗಡೆಗೊಳಿಸಲು ಸಿದ್ದವಾಗಿದ್ದು, ಈ ವಾಹನವು ಭಾರತದಲ್ಲಿ ಜಯಂ ನಿಯೋ ಎಂಬ ಹೆಸರನ್ನು ಪಡೆದು ಬಿಡುಗಡೆಗೊಳಿಸಿದೆ.

ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು !!

ಸದ್ಯ ಬಿಡುಗಡೆಯಾಗಲಿರುವ ಹೊಸ ಕಾರು ಈ ತಿಂಗಳ 28ರಂದು ಬಿಡುಗಡೆಯಾಗಲಿದೆ. ಟಾಟಾ ಸಂಸ್ಥೆಯು ಕೇವಲ ನ್ಯಾನೋ ಕಾರಿನ ದೇಹವನ್ನು ಮಾತ್ರ ಉತ್ಪಾದನೆ ಮಾಡದ್ದು, ಉಳಿದಂತೆ ಕಾರಿನ ಎಂಜಿನ್ ಮತ್ತು ಕೊಯಮತ್ತೂರು ಮೂಲದ ಜಯಂ ಆಟೋಮೋಟಿವ್ಸ್ ಈ ವಾಹನದ ಎಲೆಕ್ಟ್ರಿಕ್ ಎಂಜಿನ್ ಮತ್ತು ಮಾರ್ಕೆಟಿಂಗ್ ಮಾಡಲಿದೆ.

ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು !!

ಜಯಂ ಆಟೋಮೋಟಿವ್ಸ್ ಕಂಪನಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯ ಜೊತೆ ದೀರ್ಘಕಾಲದ ಸಹಯೋಗವನ್ನು ಹೊಂದಿದೆ ಮತ್ತು ಇತ್ತೀಚೆಗೆ ಬಿಡುಗಡೆಯಾದ ಕೆಲವು ಸ್ಪೋರ್ಟಿ ಮಾದರಿಗಳನ್ನು ಅಭಿವೃದ್ಧಿಪಡಿಸಲು ಟಾಟಾ ಜೊತೆ ಕೈಜೋಡಿಸಿದೆ.

ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು !!

ಜಯಂ ಬ್ರ್ಯಾಂಡ್ ಅಡಿಯಲ್ಲಿ ನಿಯೋ ಕಾರಿನ ಬಿಡುಗಡೆಯ ಯೋಜನೆಯನ್ನು ಸದ್ಯ ಟಾಟಾ ಮುಂದೆ ಇದ್ದು, ಮುಂಬರುವ ದಿನಗಳಲ್ಲಿ ಟಾಟಾ ಮೋಟಾರ್ಸ್ ತನ್ನದೇ ಆದ ನವೀನ ನಿಯೋ ಆವೃತ್ತಿಯನ್ನು ಹೊಂದುವ ನಿರೀಕ್ಷೆ ಇದೆ.

ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು !!

ವಿದ್ಯುತ್ ಉತ್ಪಾದನೆ, ಅಭಿವೃದ್ಧಿ ಮತ್ತು ಪೂರೈಕೆಯ ವ್ಯಾಪಾರದಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದಿರುವ ಎಲೆಕ್ಟ್ರಾ ಇವಿ ಎಂಬ ಬಲಿಷ್ಠ ಸಂಸ್ಥೆಯಿಂದ ಕಾರಿನ ಎಲೆಕ್ಟ್ರಾನಿಕ್ ಪವರ್ಟ್ರೈನ್ ಪಡೆಯಲು ಜಯಂ ಕಂಪನಿ ನಿರ್ಧರಿಸಿದೆ. ಇಲೆಕ್ಟ್ರಾ ಇವಿ ಕಂಪನಿಯು ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಒದಗಿಸುವುದರಲ್ಲಿ ನೈಪುಣ್ಯತೆ ಪಡೆದಿದೆ.

ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು !!

ನಿಯೋ ಕಾರು ಸುಮಾರು 48 ವೋಲ್ಟ್ ಉತ್ಪಾದನೆ ಕಾರು 17 ಕಿಲೋವ್ಯಾಟ್ ಅಥವಾ 23 ಬಿಎಚ್‌ಪಿ ಶಕ್ತಿ ಪಡೆಯಲಿದೆ. ಸುಮಾರು 800 ಕೆ/ಜಿ ತೂಕದ ಕಾರಿಗೆ ಈ ಎಂಜಿನ್ ಸಾಕಷ್ಟು ಶಕ್ತಿ ನೀಡಲಿದೆ ಎನ್ನಬಹುದು.

ಜಯಂ ನಿಯೋ ಹೆಸರಿನೊಂದಿಗೆ ಮತ್ತೆ ಬರ್ತಿದೆ ಎಲೆಕ್ಟ್ರಿಕ್ ಆವೃತ್ತಿಯ ಟಾಟಾ ನ್ಯಾನೋ ಕಾರು !!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದ್‌ನಲ್ಲಿ ಜೆಎಂ ನಿಯೋ ಎಲೆಕ್ಟ್ರಿಕ್ ಕಾರನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಬಿಡುಗಡೆಗೊಂಡ ನಂತರ ಕಂಪನಿಯು 400 ನಿಯೋ ಕಾರುಗಳನ್ನು ಟ್ಯಾಕ್ಸಿ ಅಗ್ರಿಗ್ರೇಟರ್ ಓಲಾ ಕ್ಯಾಬ್ಸ್‌ಗೆ ನೀಡಲು ಸಹಿ ಹಾಕಿದೆ.

English summary
Tata Electric Nano will be launched as the Jayem Neo

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark