ಟಾಟಾ ಪ್ರೇಮಿಗಳಿಗೆ ವಿಸ್ಟಾ ಎಕ್ಸ್‌ಟ್ರೀಮ್ ಕಾನ್ಸೆಪ್ಟ್
ಇತ್ತೀಚೆಗಷ್ಟೇ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ (ಬಿಎಚ್‌ಸಿ) ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ವಿಸ್ಟಾ ಡಿ90 ಹ್ಯಾಚ್‌ಬ್ಯಾಕ್ ಕಾರನ್ನು ಅನಾವರಣಗೊಳಿಸಿತ್ತು. ಇದೀಗ ಇನ್ನು ಹೆಚ್ಚಿನ ಶಕ್ತಿಯುತ ಕ್ರೀಡಾ ಆವೃತ್ತಿಯಾದ ಡಿ90 ಎಕ್ಸ್‌ಟ್ರೀಮ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ.
ಸ್ಪೋರ್ಟಿ ವರ್ಷನ್ ಆಗಿರುವ ಡಿ90 ಪ್ರಮುಖವಾಗಿಯೂ ನಿರ್ವಹಣೆ ಮೇಲೆ ಹೆಚ್ಚಿನ ಆದ್ಯತೆ ನೀಡಿದೆ. ಇದು ಖಂಡಿತವಾಗಿಯೂ ಉತ್ತಮ ಹ್ಯಾಂಡ್ಲಿಂಗ್ ಅನುಭವ ನೀಡುವ ನಂಬಿಕೆಯನ್ನು ಟಾಟಾ ಮೋಟಾರ್ಸ್ ವ್ಯಕ್ತಪಡಿಸಿದೆ.
ಸ್ವಾಭಾವಿಕವಾಗಿ ಟಾಟಾ ವಿಸ್ಟಾ ಅಪ್‌ಗ್ರೇಡ್ ವರ್ಷನ್ ವಿಸ್ಟಾ ಡಿ90 ಕ್ರಾಸೋವರ್ ಆಗಿರಲಿದೆ. ಖಂಡಿತವಾಗಿಯೂ ಉತ್ತಮ ನಿರ್ವಹಣೆ ಹಾಗೂ ಶಕ್ತಿ ನೀಡಲಿದ್ದು, ಖರೀದಿದಾರರಿಗೆ ಶ್ರೇಷ್ಠ ಹ್ಯಾಚ್‌ಬ್ಯಾಕ್ ಆಯ್ಕೆಯಾಗಿ ಪರಿಣಮಿಸಲಿದೆ. ಹೆಚ್ಚು ಪವರ್‌ಫುಲ್ ಕಾರು ಬಯಸುವ ಗ್ರಾಹಕರಿಗೆ ಎಸ್‌ಯುವಿ ಲುಕ್ ಹೊಂದಿರುವ ವಿಸ್ಟಾ ಗಮನ ಸೆಳೆಯಲಿದೆ.

ಟಾಟಾ ಅಭಿಮಾನಿಗಳಲ್ಲಿ ಖಂಡಿತವಾಗಿಯೂ ನೂತನ ಕಾನ್ಸೆಪ್ಟ್ ಗಮನ ಪ್ರಿಯವೆನಿಸಲಿದೆ.

ಡಿ90 ಹ್ಯಾಚ್‌ಬ್ಯಾಕ್ ಎಂಜಿನ್ 90 ಬಿಎಚ್‌ಪಿ ಉತ್ಪಾದಿಸಲಿದೆ. ಆದರೆ ಎಕ್ಸ್‌ಟ್ರೀಮ್ ಕಾನ್ಸೆಪ್ಟ್ ಕಾರಿನಲ್ಲಿ ಇದು 105 ಬಿಎಚ್‌ಪಿಗೆ ಏರಿಕೆಯಾಗಿದೆ.

ಸ್ಪೋರ್ಟಿ ಸ್ಟೈಲಿಷ್ ಲುಕ್ ಜತೆ, ಬ್ಲ್ಯಾಕ್ ಬಾಡಿ ಕಿಟ್, ಬ್ಲ್ಯಾಕ್ ರೂಫ್, ಬ್ಲ್ಯಾಕ್ ಹ್ಯಾಚ್ ಗಮನಾರ್ಹವಾಗಿದೆ.

ಟಾಟಾ ವಿಸ್ಟಾ ಎಕ್ಸ್‌ಟ್ರೀಮ್ ಕಾನ್ಸೆಪ್ಟ್

ಟಾಟಾ ವಿಸ್ಟಾ ಎಕ್ಸ್‌ಟ್ರೀಮ್ ಕಾನ್ಸೆಪ್ಟ್

ಟಾಟಾ ವಿಸ್ಟಾ ಎಕ್ಸ್‌ಟ್ರೀಮ್ ಕಾನ್ಸೆಪ್ಟ್

ಟಾಟಾ ವಿಸ್ಟಾ ಎಕ್ಸ್‌ಟ್ರೀಮ್ ಕಾನ್ಸೆಪ್ಟ್


Click it and Unblock the Notifications








