ಚೀನಾಗೆ ಕಾಲಿಟ್ಟ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳು

By Nagaraja

ಅಮೆರಿಕ ಮೂಲದ ಐಷಾರಾಮಿ ವಿದ್ಯುತ್ ಚಾಲಿತ ಕಾರು ತಯಾರಕ ಸಂಸ್ಥೆಯಾಗಿರುವ ಟೆಸ್ಲಾ, ಚೀನಾದಲ್ಲೂ ತನ್ನ ಕಾರ್ಯಾರಂಭ ಆರಂಭಿಸಿದೆ. ಇದರನ್ವಯ ಸ್ಥಳೀಯವಾಗಿ ವೆಬ್‌ಸೈಟ್‌ವೊಂದನ್ನು ಆರಂಭಿಸಿದೆ.

ಕಳೆದ ನವೆಂಬರ್ ತಿಂಗಳಿನಲ್ಲಷ್ಟೇ ಮೊದಲ ಟೆಸ್ಲಾ ಶೋ ರೂಂ ಆರಂಭಿಸಲಾಗಿತ್ತು. ಇದರ ಬೆನ್ನಲ್ಲೇ tousule.cn ವೆಬ್‌ಸೈಟ್ ಅನಾವರಣಗೊಂಡಿದೆ.

Tesla Motors

ನಿಮ್ಮ ಮಾಹಿತಿಗಾಗಿ Tousule ಎಂಬುದು ಟೆಸ್ಲಾದ ಚೀನಾ ಉಚ್ಛಾರಣಾ ಪದವಾಗಿದೆ. ಪ್ರಸ್ತುತ ಮಾಡೆಲ್ ಎಸ್ ಹಾಗೂ ಮಾಡೆಲ್ ಎಕ್ಸ್ ಮಾದರಿಗಳನ್ನು ಟೆಸ್ಲಾ ಚೀನಾದಲ್ಲಿ ಮಾರಾಟಗೈಯಲಿದೆ.

2014 ಮೊದಲ ಅವಧಿಯಲ್ಲಿ ಇದು ಮಾರುಕಟ್ಟೆ ತಲುಪಲಿದೆ. ಪ್ರಸ್ತುತ ಆಟೋ ಕಂಪನಿಯು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ 25.42 ರು.ಗಳಷ್ಟು ಪಾವತಿಸಬೇಕಾಗಿದೆ. ಹಾಗಿದ್ದರೂ ಹೆಚ್ಚಿನ ತೆರಿಗೆ ಅನ್ವಯವಾಗುವುದರಿಂದ ಈ ವಿದ್ಯುತ್ ಚಾಲಿತ ಕಾರು ಇನ್ನಷ್ಟು ದುಬಾರಿಯೆನಿಸಲಿದೆ.

Most Read Articles

Kannada
English summary
Tesla Motors, the American manufacturer of electric luxury car, Model S gets one step closer to start selling cars in China with the launch of its locate website, Tousule.cn earlier this week.
Story first published: Thursday, December 19, 2013, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X