ಭಾರತೀಯ ರಸ್ತೆ ಸುರಕ್ಷಿತವಲ್ಲ: ವಿಶ್ವಸಂಸ್ಥೆ ವರದಿ

By Nagaraja

ಭಾರತೀಯ ರಸ್ತೆಗಳು ಇನ್ನೂ ಸುರಕ್ಷಿತವಲ್ಲ ಎಂಬ ಆಘಾತಕಾರಿ ವರದಿಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬಿಡುಗೊಡೆಗೊಳಸಿದೆ. 'ರಸ್ತೆ ಸುರಕ್ಷತೆ' ಸಂಬಂಧ ಈ ಮಹತ್ವದ ವರದಿ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಭಾರತದಲ್ಲಿ ಶೇಕಡಾ 50ಕ್ಕಿಂತಲೂ ಕೆಳಗಡೆಯ ದ್ವಿಚಕ್ರ ವಾಹನ ಸವಾರರು ಹಾಗೂ ಶೇಕಡಾ 10ಕ್ಕಿಂತಲೂ ಕೆಳಗಿನ ಪ್ರಯಾಣಿಕರು ಮಾತ್ರ ಹೆಲ್ಮೆಟ್ ಧರಿಸುತ್ತಾರೆ.

ಇನ್ನು ಶೇಕಡಾ 27ರಷ್ಟು ಚಾಲಕರು ಮಾತ್ರ ಸೀಟ್ ಬೆಲ್ಟ್ ಧರಿಸುತ್ತಾರೆ. ಹಾಗೆಯೇ ಶೇಕಡಾ 11ರಿಂದ 49ರಷ್ಟು ಗಂಭೀರ ಗಾಯಾಳುವಾದವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತಲುಪಿಸಲಾಗುತ್ತಿದೆ.

ವರದಿಯ ಪ್ರಕಾರ 2008ರಿಂದ 2011ರ ಅವಧಿಯಲ್ಲಿ ರೋಡ್ ಅಪಮೃತ್ಯುಗಳನ್ನು ಕಡಿಮೆ ಮಾಡುವಲ್ಲಿ 88 ರಾಷ್ಟ್ರಗಳು ಯಶಸ್ವಿಯಾಗಿದೆ. ಮತ್ತೊಂದೆಡೆ ಭಾರತೀಯ ರಸ್ತೆಗಳು ಮತ್ತಷ್ಟು ಅಪಾಯಕಾರಿ ಎನಿಸಿಕೊಳ್ಳುತ್ತಿವೆ. ಅಷ್ಟೇ ಯಾಕೆ 2011ನೇ ಸಾಲಿನಲ್ಲಿ ರಸ್ತೆ ಅಪಘಾತದಿಂದಾಗಿ ಅತಿ ಹೆಚ್ಚು ಅಂದರೆ 1.42 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದಿದೆ.

ವಿಶ್ವದ್ಯಾಂತ ರೋಡ್ ಟ್ರಾಫಿಕ್ ಮರಣ ಸಂಖ್ಯೆ ಪ್ರತಿ ವರ್ಷ 1.24 ಮಿಲಿಯನ್ ಆಗಿದ್ದರೂ 20ರಿಂದ 50 ಮಿಲಿಯನ್ ಮಂದಿ ಹೆಚ್ಚಿನ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ ಎಂದಿದೆ. 2010ರಲ್ಲಿ ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಮೃತ್ಯುಗಳು ದಾಖಲಾಗಿದ್ದು, ಚೀನಾ (70,134) ಎರಡು ಹಾಗೂ ಬ್ರೆಜಿಲ್ (36,499 ) ಮೂರನೇ ಸ್ಥಾನದಲ್ಲಿದೆ.

ವೇಗ, ಪ್ರಭಾವಿ ಚಾಲನೆ, ಹೆಲ್ಮೆಟ್, ಸೀಟ್ ಬೆಲ್ಟ್ ಹಾಗೂ ಮಕ್ಕಳ ಸುರಕ್ಷತೆ ಅನುಸರಿಸುವಲ್ಲಿ 28 ರಾಷ್ಟ್ರಗಳು ಯಶಸ್ವಿಯಾಗಿದೆ. ಆದರೆ ಈ ಎಲ್ಲ ವಿಭಾಗದಲ್ಲಿ ಭಾರತ ಸತತ ವೈಫಲ್ಯ ಕಾಣುತ್ತಿವೆ ಎಂದಿದೆ.

ಭಾರತದಲ್ಲಿ ದ್ವಿಚಕ್ರ ವಾಹನ ಸವಾರರು ಅತ್ಯಂತ ಹೆಚ್ಚಿದ್ದು, ಒಟ್ಟಾರೆ ವಾಹನ ಸಂಖ್ಯೆಯ ಶೇಕಡಾ 60ರಿಂದ 70ರಷ್ಟು ಆಕ್ರಮಿಸಿಕೊಂಡಿದೆ. ಹಾಗಿದ್ದರೂ ಹೆಲ್ಮೆಟ್ ನಿಯಮ ಕಡ್ಡಾಯವಾಗಿ ಅನುಸರಿಸುವಲ್ಲಿ ವಿಫಲವಾಗಿದೆ.

ಸೀಟ್ ಬೆಲ್ಟ್ ವಿಷಯದಲ್ಲೂ ದೇಶದ ಪರಿಸ್ಥಿತಿ ಭಿನ್ನವಾಗಿಲ್ಲ. ದೇಶದಲ್ಲಿ ಕೇವಲ 27% ಚಾಲಕರು ಮಾತ್ರ ಸೀಟ್ ಬೆಲ್ಟ್ ಧರಿಸುತ್ತಾರೆ. ಇನ್ನು ಸಹ ಪ್ರಮಾಣಿಕರುಪ ಸೀಲ್ಟ್ ಬೆಲ್ಟ್ ಧರಿಸುವ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಮತ್ತೊಂದೆಡೆ ಜಪಾನ್‌ನಲ್ಲಿ ಗರಿಷ್ಠ ಅಂದರೆ 99.2% ಚಾಲಕರು ಸೀಟ್ ಬೆಲ್ಟ್ ಧರಿಸುತ್ತಿದ್ದು 97% ಪ್ರಯಾಣಿಕರು ಸಹ ಇದನ್ನು ಅನುಸರಿಸುತ್ತಾರೆ.

ಈ ಜಾಗತಿಕ ವರದಿಯು ಹೆಚ್ಚಿನ ಸಂಖ್ಯೆಯ ರೋಡ್ ಟ್ರಾಫಿಕ್ ಮರಣವು ಪಾದಚಾರಿ ಹಾಗೂ ಸೈಕಲ್ ಸವಾರರಿಂದ ಆಗುತ್ತಿದೆ ಎಂಬುದನ್ನು ಕೂಡಾ ಉಲ್ಲೇಖಿಸಿದೆ. ಜಾಗತಿಕವಾಗಿ ಅರ್ಧದಷ್ಟು ರೋಡ್ ಟ್ರಾಫಿಕ್ ಮರಣವು ಬೈಕ್‌ಗಳು (23%), ಪಾದಚಾರಿಗಳು (22%) ಹಾಗೂ ಸೈಕಲ್ ಸವಾರರಿಂದಾಗಿ (5%) ನಡೆಯುತ್ತಿದೆ. ಉಳಿದ 31% ಕಾರು ಸವಾರರಿಂದ ನಡೆಯುತ್ತಿದೆ.

More from DriveSpark

Article Published On: Thursday, March 21, 2013, 12:12 [IST]
English summary
According to the World Health Organization (WHO) report, Indian roads still unsafe to drive as lists the total number of deaths recorded on road in 2011 at 1.43 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+