256 ಮಂದಿಗೆ ಪಯಣಿಸಬಹುದಾದ ವಿಶ್ವದ ಅತಿ ಉದ್ದವಾದ ಬಸ್
ಕುತೂಹಲಕಾರಿ ಬಸ್ ಸುದ್ದಿಗಳನ್ನು ನಮ್ಮ ಡ್ರೈವ್ ಸ್ಪಾರ್ಕ್ ಓದುಗರು ತುಂಬಾನೇ ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ವಿಶ್ವದ ಅತಿ ಉದ್ದವಾದ ಬಸ್ಸನ್ನು ನಿಮಗಾಗಿ ಪರಿಚಯಿಸುತ್ತಿದ್ದೇವೆ.
ಸಾಮಾನ್ಯ, ಡಬಲ್ ಡೆಕ್ಕರ್ ಹಾಗೂ ವೋಲ್ವೋದಿಂದ ಹಿಡಿದು ನಾವು ಹಲವು ವಿಧಧ ಬಸ್‌ಗಳನ್ನು ನೋಡಿರುತ್ತೇವೆ. ಆದರೆ ಇಂದು ಪರಿಚಯಿಸಲಿರುವ ಬಸ್ ಇವೆಲ್ಲಕ್ಕಿಂತಲೂ ಭಿನ್ನವಾಗಿದ್ದು, ಜರ್ಮನಿಯಲ್ಲಿ ವಿಶ್ವದ ಅತಿ ಉದ್ದವಾದ ಬಸ್ ನಿರ್ಮಾಣಗೊಂಡಿದೆ.
ಮೊದಲ ನೋಟಕ್ಕೆ ರೈಲನ್ನು ಹೋಲುವ ಈ ಬಸ್ಸಿನಲ್ಲಿ 256 ಮಂದಿಗೆ ಪಯಣಿಸಬಹುದಾಗಿದೆ. ಫ್ರಾನ್‌ಹಾಫೆರ್ IVI (Fraunhofe IVI) ಹಾಗೂ ಡ್ರೆಸ್ಡೆನ್ ತಾಂತ್ರಿಕ ವಿಶ್ವ ವಿದ್ಯಾನಿಲಯದ ಸದಸ್ಯರು ಇದನ್ನು ಅಭಿವೃದ್ಧಪಡಿಸಿದ್ದಾರೆ. 98 ಅಡಿ ಉದ್ದದ ಈ ಬಸ್ಸನ್ನು ಇತರ ಸಾಮಾನ್ಯ ಬಸ್‌ಗಳಂತೆ ಪ್ರಯಾಣಿಕ ವಾಹನವಾಗಿ ಬಳಕೆ ಮಾಡಬಹುದಾಗಿದೆ. ಹಾಗಿದ್ದರೆ ಬನ್ನಿ ಆಕರ್ಷಿಕ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆಯೋಣ...

ಆಟೋಟ್ರಾಮ್ ಎಕ್ಸ್‌ಟ್ರಾ ಗ್ರಾಂಡ್ ಎಂದು ಅರಿಯಲ್ಪಡುವ ಈ ಬಸ್ಸನ್ನು ಡ್ರೈವಿಂಗ್ ಮಾಡುವ ಚಾಲಕನಿಗೆ ಯಾವುದೇ ನುರಿತ ತರಬೇತಿಯ ಅಗತ್ಯವಿರುವುದಿಲ್ಲ. ಅಂದರೆ ಇತರ ಸಾಮಾನ್ಯ ಬಸ್‌ಗಳಂತೆ ಇದನ್ನು ಸರಾಗವಾಗಿ ಡ್ರೈವಿಂಗ್ ಮಾಡಬಹುದಾಗಿದೆ.

ಇನ್ನು ತಿರುವಿನಲ್ಲಿ ಚಾಲಕನಿಗೆ ಮಾಹಿತಿ ನೀಡುವ ಸಲುವಾಗಿ ಕಂಪ್ಯೂಟರ್ ಸಿಸ್ಟಂ ಲಗತ್ತಿಸಲಾಗಿದೆ. ಸೆಂಟರ್ ಹಾಗೂ ರಿಯರ್ ಭಾಗಗಳು ಎದುರಿನ ಭಾಗವನ್ನು ಸರಿಯಾಗಿ ಹಿಂಬಾಲಿಸುತ್ತಿದೆಯೇ ಎಂಬುದನ್ನು ಕಂಪ್ಯೂಟರ್ ಮಾನಿಟರ್ ಮಾಡಲಿದೆ.

ಮತ್ತೊಂದು ವಿಶೇಷ ಸಂಗತಿ ಏನೆಂದರೆ ಈ ಬಸ್ಸಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಂಜಿನ್ ಕೂಡಾ ಲಗತ್ತಿಸಿದ್ದು, ಇದರ ಇಯಾನ್ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ ಐದು ಕೀ.ಮೀ. ತನಕ ಸಾಗಬಹುದಾಗಿದೆ.

256 ಮಂದಿಗೆ ಪಯಣಿಸಬಹುದಾದ ಈ ಉದ್ದವಾದ ಬಸ್ಸಿನಲ್ಲಿ 96 ಸೀಟ್‌ಗಳಿದ್ದು, ಇನ್ನುಳಿದಂತೆ 160 ಪ್ರಯಾಣಿಕರಿಗೆ ನಿಂತುಕೊಂಡು ಪಯಣಿಸಬಹುದಾಗಿದೆ.

ಹಾಗಿದ್ದರೂ ಪ್ರಸ್ತುತ ಬಸ್ ಟ್ರಾಫಿಕ್ ಜಾಮ್‌ಗೆ ಕಾರಣವಾಗಲಿದೆ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಭಾರತದಂತಹ ವಾಹನ ದಟ್ಟಣೆಯ ನಗರಗಳಲ್ಲಿ ಇದು ಪ್ರಾಯೋಗಿಕವಾಗಿಯೂ ಆಳವಡಿಸುವುದು ತುಂಬಾನೇ ಕಷ್ಟಕರ.

ಈಗಾಗಲೇ ಟೆಸ್ಟಿಂಗ್ ಡ್ರೈವ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದರಲ್ಲಿ ಮೊದಲ ಅನುಭವ ಪಡೆದಿರುವ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ದರ ಬಗ್ಗೆ ಚರ್ಚಿಸಿದರೆ ಈ ಉದ್ದವಾದ ಬಸ್ 6.8 ಕೋಟಿ ರು.ಗಳಷ್ಟು ದುಬಾರಿಯಾಗಿದೆ.





ಅಂದ ಹಾಗೆ ಚೀನಾದಲ್ಲೂ ವಿಶ್ವದ ಅತಿ ಉದ್ದವಾದ ಬಸ್ ಇದ್ದು, 300 ಪ್ರಯಾಣಿಕರನ್ನು ಹೊತ್ಯೊಯ್ಯಬಲ್ಲ ಶಕ್ತಿ ಹೊಂದಿದೆ.


Click it and Unblock the Notifications








