2014 ಫಿಯೆಟ್ ಲಿನಿಯಾ ಲಾಂಚ್; ದರ 6.99 ಲಕ್ಷ ರು.
ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ನೂತನ 2014 ಲಿನಿಯಾ ಫೇಸ್‌ಲಿಫ್ಟ್ ವರ್ಷನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ಪ್ರಾರಂಭಿಕ ದರ 6.99 (ದೆಹಲಿ ಎಕ್ಸ್ ಶೋ ರೂಂ) ಲಕ್ಷ ರು.ಗಳಾಗಿರಲಿದೆ.
ಫಿಯೆಟ್ ಲಿನಿಯಾ ಟಿ-ಜೆಟ್ ಹಾಗೂ ಮಲ್ಟಿಜೆಟ್ ಆವೃತ್ತಿಗಳು ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಅವುಗಳೆಂದರೆ ಆಕ್ಟಿವ್, ಡೈನಾಮಿಕ್ ಮತ್ತು ಟಾಪ್ ಎಂಡ್ ಇಮೊಷನ್. ಈ ಪೈಕಿ ಬೇಸ್ ಲಿನಿಯಾ ಟಿ-ಜೆಟ್ ವೆರಿಯಂಟ್ ಎಬಿಎಸ್ ಪಡೆದುಕೊಳ್ಳಲಿದೆ. ಹಾಗೆಯೇ ಎರಡು ಹೈಯರ್ ವೆರಿಯಂಟ್‌ಗಳಲ್ಲಿ ಎಬಿಎಸ್ ಮತ್ತು ಎರಡು ಏರ್‌ಬ್ಯಾಗ್‌ಗಳು ಸ್ಟಾಂಡರ್ಡ್ ಆಗಿ ದೊರಕಲಿದೆ.

ತಾಜಾ ವಿನ್ಯಾಸವನ್ನು ಪಡೆದುಕೊಂಡಿರುವ 2014 ಲಿನಿಯಾ ಆವೃತ್ತಿಯು, ಪರಿಷ್ಕೃತ ಬಂಪರ್, ಗ್ರಿಲ್ ಮತ್ತು ಫಾಗ್ ಲ್ಯಾಂಪ್ ಹೌಸಿಂಗ್ ಪಡೆದುಕೊಂಡಿದೆ.

ಅಷ್ಟೇ ಅಲ್ಲದೆ 16 ಇಂಚಿನ ಅಲಾಯ್ ವೀಲ್ ಐಚ್ಛಿಕವಾಗಿ ಲಭ್ಯವಿರಲಿದ್ದು, 15 ಇಂಚಿನ ವೀಲ್ಸ್ ಸ್ಟಾಂಡರ್ಡ್ ಆಗಿ ಲಭಿಸಲಿದೆ.

ಕಾರಿನ ಹಿಂದುಗಡೆ ಬದಲಾಯಿಸಲಾದ ನಂಬರ್ ಪ್ಲೇಯ್ ಮತ್ತು ಕ್ರೋಮ್ ಫಿನಿಶಿಂಗ್ ಪಡೆದುಕೊಂಡಿದೆ.

ಇನ್ನು ಕಾರಿನೊಳಗಡೆ ಹೊಸತಾದ ಡ್ಯಾಶ್ ಬೋರ್ಡ್ ಪಡೆದುಕೊಂಡಿದೆ. ಹಾಗೆಯೇ ಎಸಿ ವೆಂಟ್, ಸೆಂಟ್ರಲ್ ಕನ್ಸೋಲ್ ಪ್ರಮುಖ ಆಕರ್ಷಣೆಯಾಗಿರಲಿದೆ.

ನೂತನ ಲಿನಿಯಾ 1.4 ಎನ್‌ಎ ಪೆಟ್ರೋಲ್ ಗರಿಷ್ಠ ನಿರ್ವಹಣೆಯ ಟರ್ಬೊ ಪೆಟ್ರೋಲ್ ಟಿ ಜೆಟ್ ಮತ್ತು ಮಲ್ಟಿಜೆಟ್ ಡೀಸೆಲ್ ಆಯ್ಕೆಗಳಲ್ಲಿ ಆಗಮನವಾಗಿದೆ.

ಇದರ 1.4 ಟಿ ಜೆಟ್ ಎಂಜಿನ್ 11 ಪಿಎಸ್ ಪವರ್ ಉತ್ಪಾದಿಸುವ (207 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಅದೇ ಹೊತ್ತಿಗೆ 1.3 ಮಲ್ಟಿಜೆಟ್ ಎಂಜಿನ್ 93 ಪಿಎಸ್ ಪವರ್ (209 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಈ ಎರಡು ಎಂಜಿನ್‌ಗಳು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಇನ್ನು ಸಂಸ್ಥೆಯ ಪ್ರಕಾರ 2014 ಫಿಯೆಟ್ ಲಿನಿಯಾ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 15.7 ಹಾಗೂ 20.4 ಕೀ.ಮೀ.ಗಳಷ್ಟು ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

ಅಂದ ಹಾಗೆ ಫಿಯೆಟ್ ಲಿನಿಯಾ ಪ್ರಾರಂಭಿಕ ದರ 6.99 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ ವೆರಿಯಂಟ್ 9.72 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. (ದೆಹಲಿ ಎಕ್ಸ್ ಶೋ ರೂಂ ದರ)

ಅದೇ ರೀತಿ ರೈನ್ ಸೆನ್ಸಿಂಗ್ ವೈಪರ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಅತ್ಯಾಕರ್ಷಕ ವೈಶಿಷ್ಟ್ಗಗಳನ್ನು ಹೊಂದಿರಲಿದೆ.

ಅತಿ ಉದ್ದದ ಕಾರೆನಿಸಿಕೊಂಡಿರುವ ಫಿಯೆಟ್ ಲನಿಯಾ 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದಿದೆ. ಪ್ರಸ್ತುತ ಫಿಯೆಟ್ ಲಿನಿಯಾ ದೇಶದಲ್ಲಿ ಸ್ಥಿತಗೊಂಡಿರುವ 108 ಶೋ ರೂಂಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಪೆಟ್ರೋಲ್
ಫಿಯೆಟ್ ಲಿನಿಯಾ ಆಕ್ಟಿವ್ - 6.99 ಲಕ್ಷ ರು.
ಫಿಯೆಟ್ ಟಿ-ಜೆಟ್ ಆಕ್ಟಿವ್ - 7.44 ಲಕ್ಷ ರು.
ಫಿಯೆಟ್ ಟಿ-ಜೆಟ್ ಡೈನಾಮಿಕ್ - 8.53 ಲಕ್ಷ ರು.
ಫಿಯೆಟ್ ಟಿ-ಜೆಟ್ ಇಮೊಷನ್ - 9.01 ಲಕ್ಷ ರು.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಡೀಸೆಲ್
ಫಿಯೆಟ್ ಮಲ್ಟಿ-ಜೆಟ್ ಆಕ್ಟಿವ್ - 8.15 ಲಕ್ಷ ರು.
ಫಿಯೆಟ್ ಮಲ್ಟಿ-ಜೆಟ್ ಡೈನಾಮಿಕ್ - 9.27 ಲಕ್ಷ ರು.
ಫಿಯೆಟ್ ಮಲ್ಟಿ-ಜೆಟ್ ಇಮೊಷನ್ - 9.72 ಲಕ್ಷ ರು.


Click it and Unblock the Notifications








