ಫಾರ್ಚುನರ್ ಮೀರಿಸಲಿದೆಯಂತೆ ಹ್ಯುಂಡೈ ಸಾಂಟಾಫೆ

By Nagaraja

ಈ ಹಿಂದೆ ದೇಶಕ್ಕೆ ಪ್ರವೇಶ ಪಡೆದಿದ್ದ ಹ್ಯುಂಡೈ ಪ್ರೀಮಿಯಂ ಸಾಂಟಾಫೆ ನಿರೀಕ್ಷೆಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಇವೆಲ್ಲದರಿಂದ ಎಚ್ಚೆತ್ತುಕೊಂಡಿರುವ ಈ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ0 ಸಂಸ್ಥೆಯು 2014 ಸಾಂಟಾಫೆ ಆವೃತ್ತಿಯನ್ನು ದೇಶಕ್ಕೆ ಮಗದೊಮ್ಮೆ ಪರಿಚಯಿಸಲು ಸರ್ವ ಸನ್ನದ್ಧವಾಗಿ ನಿಂತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಮುಂಬರುವ ಫೆಬ್ರವರಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಹ್ಯುಂಡೈ ಸಾಂಟಾಫೆ ಲಾಂಚ್ ಆಗಲಿದೆ. ಇದು ಎಲ್ಲ ಹಂತದಲ್ಲೂ ಟೊಯೊಟಾ ಫಾರ್ಚುನರ್ ಮೀರಿ ನಿಲ್ಲಲಿದೆ ಎಂದು ಆಟೋ ಮೂಲಗಳು ತಿಳಿಸಿವೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಹ್ಯುಂಡೈ ಸಾಂಟಾಫೆ ಎಸ್‍‌ಯುವಿ ಲಾಂಚ್

ತನ್ನ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಪವರ್‌ಫುಲ್ ಎನಿಸಿಕೊಳ್ಳಲಿರುವ 2014 ಸಾಂಟಾಫೆ, ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಹ್ಯುಂಡೈ ಸಾಂಟಾಫೆ ಎಸ್‍‌ಯುವಿ ಲಾಂಚ್

ವಿನ್ಯಾಸವನ್ನು ಗಮನಿಸಿದರೆ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕ್ರಮಣಕಾರಿಯೆನಿಸಲಿದೆ. ಇದು ಫಾರ್ಚುನರ್ ಸೇರಿದಂತೆ ಷೆವರ್ಲೆ ಕಾಪ್ಟಿವಾ ಸವಾಲನ್ನು ಮೀರಿ ನಿಲ್ಲಲಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಹ್ಯುಂಡೈ ಸಾಂಟಾಫೆ ಎಸ್‍‌ಯುವಿ ಲಾಂಚ್

ಇಷ್ಟೆಲ್ಲ ಆದರೂ ದರ ಸಾಂಟಾಫೆ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರತ್ತವೂ ಗಮನ ಹರಿಸಿರುವ ಸಂಸ್ಥೆಯು ಚೆನ್ನೈ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡಲು ನಿರ್ಧರಿಸಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪರಿಚಯಿಸಲು ನೆರವಾಗಲಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಹ್ಯುಂಡೈ ಸಾಂಟಾಫೆ ಎಸ್‍‌ಯುವಿ ಲಾಂಚ್

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ 2014 ಹ್ಯುಂಡೈ ಸಾಂಟಾಫೆ ಎಂಟ್ರಿ ಲೆವೆಲ್ ಟು ವೀಲ್ ಡ್ರೈವ್ ವೆರಿಯಂಟ್‌ ಆರಂಭಿಕ ದ 22 ಲಕ್ಷ ರು. ಅಂದಾಜಿಸಲಾಗಿದೆ. ಇದು ಮ್ಯಾನುವಲ್ ಜತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಲಿದೆ. ಇನ್ನೊಂದೆಡೆ ಆಲ್ ವೀಲ್ ಡ್ರೈವ್ ಜತೆಗಿನ ಆಟೋಮ್ಯಾಟಿಕ್ ವೆರಿಯಂಟ್ ಸದ್ಯ ಇರುವುದಕ್ಕೆ ಸಮಾನವಾದ 2.2 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಹ್ಯುಂಡೈ ಸಾಂಟಾಫೆ ಎಸ್‍‌ಯುವಿ ಲಾಂಚ್

ಪರಿಷ್ಕೃತ ಎಕ್ಸ್‌ಟೀರಿಯರ್ ವಿನ್ಯಾಸದ ಜತೆಗೆ ಗುಣಮಟ್ಟ ಹಾಗೂ ಹೆಚ್ಚಿನ ವೈಶಿಷ್ಟ್ಯತೆಗಳತ್ತ ಗಮನ ಹರಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ...

More from DriveSpark

Article Published On: Thursday, December 5, 2013, 9:57 [IST]
English summary
Hyundai will launch the 2014 Santa Fe SUV in India in Feb at the Auto Show. The new santa Fe is expected to perform a lot better in India than its predecessor as Hyundai has identified the weak links and will sort it out with the coming of the new model
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+