ತವರೂರಿನಲ್ಲಿ ನೂತನ ಸಾಂಟಾಫೆ ಅನಾವರಣ

Written By:

ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ಸಂಸ್ಥೆಯಾಗಿರುವ ಹ್ಯುಂಡೈ, ತವರೂರಿನಲ್ಲಿ ಅತಿ ನೂತನ ಸಾಂಟಾಫೆ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಿದೆ. ವಿಶೇಷವೆಂದರೆ ಪ್ರಸ್ತುತ ಮಾದರಿಯು ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಭಾರತದಲ್ಲಿ ಹ್ಯುಂಡೈನಿಂದ ಲಭ್ಯವಿರುವ ಏಕ ಮಾತ್ರ ಸಂಪೂರ್ಣ ವೈಶಿಷ್ಟ್ಯಗಳುಳ್ಳ ಎಸ್ ಯುವಿ ಇದಾಗಿದ್ದು, ಪ್ರೀಮಿಯಂ ಕ್ರೀಡಾ ವಾಹನಗಳ ವಿಭಾಗದಲ್ಲಿ ಗ್ರಾಹಕರಿಗೆ ಇನ್ನು ಹೆಚ್ಚಿನ ಆಯ್ಕೆಯನ್ನು ಒದಗಿಸಲಿದೆ.

ಹ್ಯುಂಡೈ ಸಾಂಟಾಫೆ

ಪರಿಷ್ಕೃತ ಫ್ರಂಟ್ ಮತ್ತು ರಿಯರ್ ಬಂಪರ್, ಕ್ರೋಮ್ ಸ್ಪರ್ಶ, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಹೆಡ್ ಲೈಟ್ ಮತ್ತು ಟೈಲ್ ಲ್ಯಾಂಪ್ ಗಳು ಹೊಸ ಕಾರನ್ನು ಮತ್ತಷ್ಟು ಆಕರ್ಷಕವಾಗಿಸಲಿದೆ.

ಹೊಸ ಸಾಂಟಾಫೆ ಕಾರಿನಲ್ಲಿ ಐಚ್ಛಿಕ ಪ್ಯಾನರಾಮಿಕ್ ಸನ್ ರೂಫ್ ಆಯ್ಕೆಯೂ ಲಭ್ಯವಾಗಲಿದೆ. ಇದರಲ್ಲಿ 18 ಹಾಗೂ 19 ಇಂಚುಗಳ ಅಲಾಯ್ ವೀಲ್ ಗಳ ಆಯ್ಕೆಯೂ ಇರಲಿದೆ.

ಇನ್ನು ಕಾರಿನೊಳಗೆ ಎಲ್ಲ ಹೊಸತನದ ಡ್ಯಾಶ್ ಬೋರ್ಡ್ ನೀಡಲಾಗುವುದು. ಹಾಗೆಯೇ ಆರಾಮದಾಯಕತೆ ಹಾಗೂ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಉಳಿದಂತೆ ಜೆಬಿಎಲ್ ಸರೌಂಡ್ ಸಿಸ್ಟಂ, ಡೈನಾಮಿಕ್ ಬಾಗುವ ಲೈಟ್ಸ್, ಸ್ಮಾರ್ಟ್ ಹೈ ಬೀಮ್ ಸಹಾಯ, ಕ್ರೂಸ್ ಕಂಟ್ರೋಲ್, ಸ್ವಯಂಚಾಲಿತ ಬ್ರೇಕಿಂಗ್ ಹಾಗೂ 360 ಡಿಗ್ರಿ ಕ್ಯಾಮೆರಾ ಸೇವೆಯಿರಲಿದೆ.

English summary
Hyundai currently offers a single full size SUV in India, which is called the Santa Fe. The Korean manufacturer has now provided a facelift to its SUV in its own country.
Story first published: Tuesday, June 9, 2015, 7:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark