ವೈರಲ್ ಆಗಿ ಪಸರಿಸಿದ ಹ್ಯುಂಡೈ ಸಾಂಟಾ ಫೆ 'ಏಲಿಯನ್ಸ್' ಜಾಹೀರಾತು

Written By:

ಬಾಲಿವುಡ್ ಸ್ಟಾರ್ ಹೃತಿಕ್ ರೋಶನ್ ಅಭಿನಯದ 2003ನೇ ಇಸವಿಯಲ್ಲಿ ತೆರೆಕಂಡ 'ಕೊಯ್ ಮಿಲ್ ಗಯಾ' ಚಿತ್ರವನ್ನು ವೀಕ್ಷಿಸಿದವರಿಗೆ ಅನ್ಯ ಗ್ರಹ ಜೀವಿ 'ಏಲಿಯನ್ಸ್' ಬಗ್ಗೆ ಹೆಚ್ಚು ನಿಖರವಾಗಿ ತಿಳಿಯಲು ಸಾಧ್ಯವಾಗಿರುವುದು.

ಇದನ್ನೇ ಆಧಾರವಾಗಿಟ್ಟುಕೊಂಡು ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಹ ಹೊಸ ಸಾಂಟಾಫೆ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಿತ್ತು. ಇಲ್ಲಿ ಬಲಿಷ್ಠ ಏಲಿಯನ್ಸ್‌ಗಳನ್ನು ಶಕ್ತಿಶಾಲಿ ಹ್ಯುಂಡೈ ಸಾಂಪಾಫೆ ಕಾರು ವಶಪಡಿಸಿಕೊಳ್ಳುತ್ತಿರುವುದು ವಿಶೇಷವೆನಿಸಿದ್ದು, ಅತ್ಯಂತ ಅದ್ಬುತವಾಗಿ ಚಿತ್ರಿಕರಿಸಲಾಗಿದೆ.

ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡಿರುವ ಹ್ಯುಂಡೈ ಸಂಸ್ಥೆಯು ಈ ಕುತೂಹಲಕಾರಿ ಏಲಿಯನ್ಸ್ ಕಾಪ್ಚಾರ್ಡ್ ವೀಡಿಯೋ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. 2014 ಅಕ್ಟೋಬರ್ ಒಂದರಂದು ಬಿಡುಗಡೆಗೊಂಡಿರುವ ಈ ಜಾಹೀರಾತು ಏಳು ದಿನಗಳಲ್ಲೇ ಎರಡು ದಶಲಕ್ಷಗಳಷ್ಟು ವೀಕ್ಷಣೆಗೆ ಪಾತ್ರವಾಗಿರುವುದು ವೈರಲ್ ಆಗಿ ಪಸರಿಸಲು ಸಾಧ್ಯವಾಗಿದೆ.

ಅಂದ ಹಾಗೆ ಇದರಲ್ಲಿ ಆಳವಡಿಸಲಾಗಿರುವ ಹ್ಯುಂಡೈ ಮೂರನೇ ತಲೆಮಾರಿನ ಸಿಆರ್‌ಡಿಐ ಡೀಸೆಲ್ 'ಆರ್' ಸಿರೀಸ್ ಎಂಜಿನ್ 197 ಅಶ್ವಶಕ್ತಿ (14.9 ಕೆಜಿಎಂ ಮ್ಯಾನುವಲ್, 44.5 ಕೆಜಿಎಂ ಆಟೋಮ್ಯಾಟಿಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇವೆರಡು ಅನುಕ್ರಮವಾಗಿ ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 14.74 ಹಾಗೂ 13.01 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/OdJjqVWKw4w?rel=0" frameborder="0" allowfullscreen></iframe>
English summary
Hyundai Motor India, the country’s largest exporter and the second-largest car manufacturer, launched its unique viral campaign of the Hyundai Santa Fe #Alienscaptured on October 01, 2014.&#13;
Story first published: Thursday, October 9, 2014, 14:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark