Renault: ಬಿಡುಗಡೆ ಮುನ್ನವೆ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ 7-ಸೀಟರ್ SUV: ಹೇಗಿದೆ?
ಜಾಗತಿಕವಾಗಿ ಪ್ರೀಮಿಯಂ ಕಾರುಗಳ ತಯಾರ ಕಂಪನಿಯಾಗಿ ಗುರ್ತಿಸಿಕೊಂಡಿರುವ ಫ್ರೆಂಚ್ ಮೂಲದ 'ರೆನಾಲ್ಟ್' (Renault) ಕಂಪನಿಯು ಸದ್ಯ ಭಾರತದಲ್ಲಿ ಕೇವಲ ಬೆರಳೆಣಿಕೆಯ ಮಾಡಲ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಹೊಸ ಪೀಳಿಗೆಯ ಡಸ್ಟರ್ (Duster) ಎಸ್‌ಯುವಿಯನ್ನು ಸಹ ಬಿಡುಗಡೆ ಮಾಡಿತ್ತು. ಬ್ರ್ಯಾಂಡ್ ತನ್ನ ಕಾರುಗಳ ವಿಸ್ತರೆಣೆ ಇಲ್ಲಿಗೆ ನಿಂತಿದೆ ಎಂದುಕೊಂಡರೆ ತಪ್ಪು, ಡಸ್ಟರ್ ಮಾರಾಟ ಪಟ್ಟಿಯಲ್ಲಿ ಹೊಸ ಎತ್ತರವನ್ನು ತಲುಪಲು ಯೋಜಿಸುತ್ತಿರುವುದರಿಂದ, ಇದರ ಬಿಡುಗಡೆಯು ಭಾರತದಲ್ಲಿ ಈ ಫ್ರೆಂಚ್ ಕಾರು ತಯಾರಕರ ಯೋಜನೆಗಳ ಒಂದು ಭಾಗ ಮಾತ್ರ. ಆದರೆ ಇದಕ್ಕೂ ದೊಡ್ಡ ಪ್ಲಾನ್ ಮತ್ತೊಂದಿದೆ ಎಂದು ಈಗ ತಿಳಿದುಬಂದಿದೆ.
ನಮ್ಮ ಡ್ರೈವ್‌ಸ್ಪಾರ್ಕ್ ಓದುಗರಲ್ಲಿ ಒಬ್ಬರಾದ ಬೆಂಗಳೂರಿನ 'ಅನಿಲ್' ಅವರು, ರೆನಾಲ್ಟ್ ಬ್ರ್ಯಾಂಡ್‌ನಿಂದ ಮುಂಬರಲಿರುವ ದೊಡ್ಡ 7-ಸೀಟರ್ ಎಸ್‌ಯುವಿ ಫೋಟೋಗಳನ್ನು ನಮಗೆ ಕಳುಹಿಸಿದ್ದಾರೆ. ಇವು ಸ್ಪೈ ಚಿತ್ರಗಳಾದ್ದು, ಕಾರನ್ನು ಸಂಪೂರ್ಣವಾಗಿ ಮರೆಮಾಚಿ ನಗರದ ಕೆಲವು ರಸ್ತೆಗಳಲ್ಲಿ ಹೊಸ 7-ಸೀಟರ್ ಎಸ್‌ಯುವಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ಈ ಚಿತ್ರಗಳನ್ನು ನಮ್ಮ ತಂಡ ಹತ್ತಿರದಿಂದ ಪರಿಶೀಲಿಸಿ ಯಾವ ಕಾರೆಂದು ಪತ್ತೆಹಚ್ಚಿದ್ದಾರೆ.

ಇದು 'ಡೇಸಿಯಾ ಬಿಗ್‌ಸ್ಟರ್' ಎಸ್‌ಯುವಿಯಾಗಿದೆ, ಈ 7-ಸೀಟರ್ ಎಸ್‌ಯುವಿಯು 2024 ರಿಂದ ಯುರೋಪ್‌ನಲ್ಲಿ ಮಾರಾಟದಲ್ಲಿದೆ. ಅಲ್ಲಿ ಇದನ್ನು ಕಾರು ತಯಾರಕರ ರೊಮೇನಿಯನ್ ಅಂಗಸಂಸ್ಥೆಯಾದ ಡೇಸಿಯಾ ಮಾರಾಟ ಮಾಡುತ್ತಿದೆ. ಇದು ಡಸ್ಟರ್‌ಗೆ ಹತ್ತಿರವಾದ ಡಿಸೈನ್ ಹಾಗೂ ಪ್ಲಾಟ್‌ಫಾರ್ಮ್ ಹೊಂದಿದೆ. ಆದರೆ ಭಾರತದಲ್ಲಿ ಇದುವರೆಗೆ ಈ ಕಾರಿನ ಬಗ್ಗೆ ಯಾವುದೇ ಆಧಾರಗಳು ಸಿಕ್ಕಿರಲಿಲ್ಲ.
ಇದೀಗ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮರೆಮಾಚಿ ಟೆಸ್ಟಿಂಗ್ ನಡೆಸಲಾಗುತ್ತಿದೆ. ಡಸ್ಟರ್‌ನಂತೆಯೇ ರೆನಾಲ್ಟ್-ನಿಸ್ಸಾನ್ ಅಲೈಯನ್ಸ್‌ನ CMF-B ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಡಸ್ಟರ್‌ಗೆ ಹೋಲಿಸಿದರೆ ಬಿಗ್‌ಸ್ಟರ್ ಉದ್ದವಾಗಿದ್ದು, ದೊಡ್ಡ ವೀಲ್‌ಬೇಸ್ ಅನ್ನು ಸಹ ಹೊಂದಿದೆ. ಸ್ಪೈ ಚಿತ್ರಗಳಲ್ಲಿ ಕಾರಿನ ಹಿಂಭಾಗದ ವಿಂಡ್‌ಸ್ಕ್ರೀನ್ ಅನ್ನು ಧೀರ್ಘವಾಗಿ ಪರಿಶೀಲಿಸಿದಾಗ ಹಿಂದೆ ಎರಡು ಹೆಚ್ಚುವರಿ ಸೀಟ್‌ಗಳಿರುವುದು ಬಹಿರಂಗವಾಗಿದೆ.

ಆಗಷ್ಟೆ ಇದು ಬಿಗ್‌ಸ್ಟರ್ ಎಂದು ಕಂಡುಕೊಳ್ಳಲಾಯಿತು, ಈ ಟೆಸ್ಟಿಂಗ್ ಮಾಡಲ್ ಹೊಸ ಅಲಾಯ್ ವೀಲ್‌ಗಳನ್ನು ಹೊಂದಿರುವಂತೆ ಕಾಣುತ್ತದೆ, ಯುರೋಪ್‌ನಲ್ಲಿ ಬಿಗ್‌ಸ್ಟರ್ ಅನ್ನು 17 ರಿಂದ 19 ಇಂಚು ಗಾತ್ರದ ವಿಲ್‌ಗಳೊಂದಿಗೆ ನೀಡಲಾಗುತ್ತದೆ. ರೆನಾಲ್ಟ್ ಬಿಗ್‌ಸ್ಟರ್ ಜೊತೆಗೆ ಯುರೋಪ್‌ನಲ್ಲಿ ಡಸ್ಟರ್ ಕೂಡ ಮಾರಾಟದಲ್ಲಿದೆ, ಎರಡೂ ಕಾರುಗಳು ಒಂದೇ ರೀತಿಯ ಪವರ್‌ಟ್ರೇನ್‌ಗಳನ್ನು ಹಂಚಿಕೊಳ್ಳುತ್ತವೆ.
ಆದರೆ ಈ ಎಂಜಿನ್ ನಮ್ಮ ಭಾರತದಲ್ಲಿ ಮಾರಾಟವಾಗುವ ಡಸ್ಟರ್ ಬೇಸ್ ಮಾಡಲ್‌ನೊಂದಿಗೆ ನೀಡಲಾಗುವ ಟರ್ಬೊ - ಪೆಟ್ರೋಲ್ ಎಂಜಿನ್‌ಗೆ ಹೊಂದಿಕೆಯಾಗುವುದಿಲ್ಲ. ಯೂರೋಪ್‌ನಲ್ಲಿ ಬಿಗ್‌ಸ್ಟರ್ 1.2-ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿದೆ, ಇದು ಆಯ್ಕೆಮಾಡಿದ ವೇರಿಯೆಂಟ್ ಅವಲಂಬಿಸಿ 130hp ಪವರ್ ಅಥವಾ 140hp ಪವರ್ ಉತ್ಪಾದಿಸುತ್ತದೆ.

ಯುರೋಪ್‌ನಲ್ಲಿ ಡೇಸಿಯಾ ಬಿಗ್‌ಸ್ಟರ್‌ನೊಂದಿಗೆ ನೀಡಲಾಗುವ ಎಂಜಿನ್ ಭಾರತದಲ್ಲಿ ಮಾರಾಟವಾಗುವ ಟಾಪ್-ಸ್ಪೆಕ್ ಡಸ್ಟರ್‌ನಲ್ಲಿ ಇರುತ್ತದೆ. ಈ ಬಲಿಷ್ಠ ಹೈಬ್ರಿಡ್ ಸೆಟಪ್ 1.8-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು 1.4kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಒಟ್ಟಾರೆಯಾಗಿ 163hp ಪವರ್ ಮತ್ತು 280Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ರೆನಾಲ್ಟ್ ಬಿಗ್‌ಸ್ಟರ್ ಈ ವರ್ಷದ ಕೊನೆಯಲ್ಲಿ ಅಥವಾ 2027 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ರೆನಾಲ್ಟ್‌ನ ಇಂಡಿಯಾ ಲೈನ್‌ಅಪ್‌ನಲ್ಲಿ ಡಸ್ಟರ್‌ಗಿಂತ ಮೇಲಿರುತ್ತದೆ, ಹಾಗೆಯೇ ಮಹೀಂದ್ರಾ XUV 7XO, ಹುಂಡೈ ಅಲ್ಕಾಜರ್ ಮತ್ತು ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಮುಂತಾದ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಹೊಸ ಮುಂಬರಲಿರುವ 7-ಸೀಟರ್ ಎಸ್‌ಯುವಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








