2014 ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್; ಹೇಗೆ ಭಿನ್ನ?
ಭಾರತದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಬಿ ಪ್ಲಸ್ ಸೆಗ್ಮೆಂಟ್ ಹ್ಯಾಚ್‌ಬ್ಯಾಕ್ ಕಾರಾಗಿರುವ ಮಾರುತಿ ಸ್ವಿಫ್ಟ್, ಪ್ರಸಕ್ತ ಸಾಲಿನಲ್ಲೇ ಪರಿಷ್ಕೃತಗೊಳ್ಳುತ್ತಿದೆ.
ವರದಿಗಳ ಪ್ರಕಾರ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಪ್ರಸಕ್ತ ಸಾಲಿನ ಹಬ್ಬದ ಆವೃತಿಯಲ್ಲಿ ಬಿಡುಗಡೆಯಾಗಲಿದೆ. ಇದರಂತೆ ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಇದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಈ ಹಿಂದೆ 2005ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದಾಗ ಸ್ವಿಫ್ಟ್ ಪೆಟ್ರೋಲ್ ವರ್ಷನ್ ಮಾತ್ರ ಲಭ್ಯವಿತ್ತು. ಬಳಿಕ 2007ರಲ್ಲಿ ಡೀಸೆಲ್ ವೆರಿಯಂಟ್ ಸೇರ್ಪಡೆಯಾಗಿತ್ತು. ಇದೀಗ ಎರಡನೇ ಬಾರಿ ವಿನ್ಯಾಸ ಮಾರ್ಪಡುಗೊಳ್ಳುತ್ತಿದೆ.

ನಾವೀಗ ಮಾತನಾಡುತ್ತಿರುವ ಸ್ವಿಫ್ಟ್ ಫೇಸ್‌ಲಿಫ್ಟ್ ಈಗಾಗಲೇ ಜಪಾನ್ ಹಾಗೂ ಯುರೋಪ್ ಮಾರುಕಟ್ಟೆಗಳನ್ನು ಪ್ರವೇಶಿಸಿವೆ. ಇದರ ವಿನ್ಯಾಸವು ಬಹುತೇಕ ಈಗಿನ ಸ್ವಿಫ್ಟ್ ಮಾದರಿಗೆ ಸಮಾನವಾಗಿರಲಿದೆ.

ಹಾಗಿದ್ದರೂ ಎಲ್ ಆಕಾರದ ಎಲ್‌ಇಡಿ, ಪರಿಷ್ಕೃತ ಫಾಗ್ ಲ್ಯಾಂಪ್, ಬಂಪರ್‌ಗಳಂತಹ ಇನ್ನಿತರ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ 16 ಇಂಚಿನ ಅಲಾಯ್ ವೀಲ್ ಆಯ್ಕೆಯು ಇರಲಿದೆ.

ಇನ್ನು ಕಾರಿನೊಳಗೂ ಕೆಲವೊಂದು ಬದಲಾವಣೆಗಳು ಕಂಡುಬರಲಿದ್ದು, ನೀಲಿ ಹಾಗೂ ಬೂದು ಬಣ್ಣದ ಸೀಟ್ ಫ್ಯಾಬ್ರಿಕ್, ಆಟೋ ಅಪ್ ಟಚ್ ಫಂಕ್ಷನ್, ಆಟೋಮ್ಯಾಟಿಕ್, ಸ್ಟಾರ್ಟ್ ಸ್ಟಾರ್ಟ್ ಬಟನ್ ಹಾಗೂ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೈಡ್ ವ್ಯೂ ಮಿರರ್ ಪಡೆದುಕೊಳ್ಳಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಹಾಗೂ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.


Click it and Unblock the Notifications








