2014 ಟಾಟಾ ಆರಿಯಾ ಫೇಸ್‌ಲಿಫ್ಟ್ ಲಾಂಚ್

By Nagaraja

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನೂತನ 2014 ಆರಿಯಾ ಫೇಸ್‌ಲಿಫ್ಟ್ ಆವೃತ್ತಿ ಲಾಂಚ್ ಮಾಡಿದೆ.

ದರ ಮಾಹಿತಿ: 9.95 ಲಕ್ಷ ರು.

ಯಾವುದೇ ಸದ್ದಿಲ್ಲದೆ ಟಾಟಾದಿಂದ ನೂತನ ಕಾರು ಬಿಡುಗಡೆಗೊಂಡಿರುವುದು ಸ್ವಲ್ಪ ಕುತೂಹಲ ಕೆರಳಿಸಿತ್ತು. ಪ್ರಸ್ತುತ ಆರಿಯಾ ಕಾರು ಕೆಲವೊಂದು ಬದಲಾವಣೆ ಪಡೆದುಕೊಂಡಿರಲಿದೆ. ಇದರಲ್ಲಿ ಸೈಡ್ ಡಿಕಾಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಬೇಸ್ ವೆರಿಯಂಟ್‌ನಲ್ಲೂ ಲಭ್ಯವಾಗಲಿದೆ.

2014 ಟಾಟಾ ಆರಿಯಾ ಫೇಸ್‌ಲಿಫ್ಟ್ ಲಾಂಚ್

ನೂತನ 2014 ಆರಿಯಾ ಫೇಸ್‌ಲಿಫ್ಟ್, ಸುಧಾರಿತ 2.2 ಲೀಟರ್ ಎಂಜಿನ್ ಪಡೆದುಕೊಳ್ಳಲಿದ್ದು, 150 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

2014 ಟಾಟಾ ಆರಿಯಾ ಫೇಸ್‌ಲಿಫ್ಟ್ ಲಾಂಚ್

ಒಟ್ಟು ಮೂರು ವೆರಿಯಂಟ್‌ಗಳಲ್ಲಿ 2014 ಟಾಟಾ ಆರಿಯಾ ಲಭ್ಯವಾಗಲಿದೆ. ಅವುಗಳೆಂದರೆ

  • ಬೇಸ್ ಪ್ಯೂರ್ 4x2,
  • ಪ್ಲೆಷರ್ 4x2,
  • ಪ್ರೈಡ್ 4x4
  •  ಬೇಸ್ ಪ್ಯೂರ್ 4x2

    ಬೇಸ್ ಪ್ಯೂರ್ 4x2

    ಇಲ್ಲಿ ಗಮನಾರ್ಹ ಅಂಶವೆಂದರೆ ಬೇಸ್ ಪ್ಯೂರ್ 4x2 ವೆರಿಯಂಟ್‌ಗೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯವಿರಲಿದೆ. ಅಲ್ಲದೆ ಸೆಂಟ್ರಲ್ ಲಾಂಕಿಂಗ್, ಚಾಲಕ ಮಾಹಿತಿ ವ್ಯವಸ್ಥೆ, ರಿಯರ್ ಏರ್-ಕಾನ್ ವೆಂಟ್ಸ್, ಸನ್ ಗ್ಲಾಸ್ ಹೋಲ್ಡರ್, ಎಲೆಕ್ಟ್ರಿಕ್ ಒಆರ್‌ವಿಎಂ, ಫಾಲೋ ಮಿ ಹೋಮ್ ಲ್ಯಾಂಪ್ ಮತ್ತು ಡಿಸ್ಕ್ ಬ್ರೇಕ್ ಲಭ್ಯವಿರಲಿದೆ.

    ಪ್ಲೆಷರ್ 4x2

    ಪ್ಲೆಷರ್ 4x2

    ಇನ್ನು ಮಿಡ್ ಪ್ಲೆಷರ್ 4x2 ವೆರಿಯಂಟ್‌ನಲ್ಲಿ ಡಿನ್ ಸ್ಟೀರಿಯೊ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ರೂಫ್ ಸ್ಟೋರೆಜ್ ಬಿನ್ಸ್, ಚಿಲ್ಡ್ ಗ್ಲೋವ್ ಬಾಕ್ಸ್, ರಿಯರ್ ವೈಪರ್ ಮತ್ತು ಡಿಫಾಗರ್ ಲಭ್ಯವಿರಲಿದೆ. ಇನ್ನು ಸುರಕ್ಷತೆಯ ದೃಷ್ಟಿಕೋನದಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಜತೆ ಇಬಿಡಿ ಲಭ್ಯವಿರಲಿದೆ. ಇನ್ನು ಹೊರಗಡೆ ಕ್ರೋಮ್ ಡೋರ್ ಹ್ಯಾಂಡಲ್, ಫುಲ್ ಕ್ರೋಮ್ ಗ್ರಿಲ್ ಮತ್ತು ದೇಹ ಬಣ್ಣದ ರೂಫ್ ರೈಲ್ ಕೂಡಾ ಲಗತ್ತಿಸಲಾಗಿದೆ.

    ಪ್ರೈಡ್ 4x4

    ಪ್ರೈಡ್ 4x4

    ಅಂತಿಮವಾಗಿ ಟಾಪ್ ಎಂಡ್ ಪ್ರೈಡ್ 4x4 ವೆರಿಯಂಟ್, ಆಲ್ ವೀಲ್ ಡ್ರೈವ್ ವ್ಯವಸ್ಥೆಯಲ್ಲಿ ಲಭ್ಯವಿರಲಿದ್ದು, ಹೆಸರೇ ಸೂಚಿಸಿರುವಂತೆಯೇ ಲೆಥರ್ ಅಪ್‌ಹೋಲ್‌ಸ್ಟ್ರೇ, ಸ್ಯಾಟಲೈಟ್ ನೇವಿಗೇಷನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹರ್ಮನ್ ಮಾಹಿತಿ ಮನರಂಜನಾ ಸಿಸ್ಟಂ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೆಡ್ ಲ್ಯಾಂಪ್ ಜತೆ ಬ್ಲ್ಯಾಕ್ ಸೌರಂಡ್ಸ್, ಫ್ರಂಟ್, ಸೈಡ್ ಮತ್ತು ಕರ್ಟೈನ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಇಎಸ್‌ಪಿ ಮತ್ತು ಟ್ರಾಕ್ಷನ್ ಕಂಟ್ರೋಲ್ ಇರಲಿದೆ.

    ದರ ಮಾಹಿತಿ

    ದರ ಮಾಹಿತಿ

    ಅಂದ ಹಾಗೆ 2014 ಟಾಟಾ ಆರಿಯಾ ಫೇಸ್‌ಲಿಫ್ಟ್ ಬೇಸ್ ಪ್ಯೂರ್ 4x2 ಪ್ರಾರಂಭಿಕ ದರ 9.95 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ 4x4 ವೆರಿಯಂಟ್ 14.74 ಲಕ್ಷ ರು.ಗಳಲ್ಲಿ ಆಗಮನವಾಗಲಿದೆ.

More from DriveSpark

Article Published On: Tuesday, March 11, 2014, 9:55 [IST]
English summary
Tata Motors has launched the facelifted version of the Aria MPV without any hype. The 2014 Tata Aria receives minor changes which are hardly noticeable. These include new side decals and projector headlamps, even for the base variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+