ಬುಕ್ಕಿಂಗ್ ರದ್ದುಗೊಳಿಸಿ ಇಲ್ಲದಿದ್ದಲ್ಲಿ ಬೇರೆ ಫೋರ್ಡ್ ಮಾಡೆಲ್‌ಗೆ ಮೊರೆ ಹೋಗಿ!
ಬೇಡಿಕೆ ಮಿತಿಮೀರಿದ ಹಿನ್ನಲೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಬುಕ್ಕಿಂಗ್ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಈ ನಡುವೆ ಗ್ರಾಹಕರಿಗೆ ಇಕೊಸ್ಪೋರ್ಟ್ ಬುಕ್ಕಿಂಗ್ ಹಿಂಪಡೆಯುವಂತೆ ಸೂಚಿಸಲಾಗುತ್ತಿದ್ದು, ಇಲ್ಲದಿದ್ದಲ್ಲಿ ಇನ್ನಿತರ ಫೋರ್ಡ್ ಮಾಡೆಲ್‌ಗಳನ್ನು ಖರೀದಿಸುವಂತೆಯೂ ಮನವೊಳಿಸುವ ಪ್ರಯತ್ನವೂ ನಡೆದು ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಹಕರಿಗೆ ಇಕೊಸ್ಪೋರ್ಟ್ ವಿತರಣೆ ದಿನಾಂಕವನ್ನು ಫೋರ್ಡ್ ಮುಂದೂಡುತ್ತಲೇ ಇದೆ. ಇದೀಗ ದೇಶದಲ್ಲಿ ಫೋರ್ಡ್‌ನಿಂದ ಲಭ್ಯವಿರುವ ಇತರ ಐದು ಮಾದರಿಗಳನ್ನು ಆಯ್ಕೆ ಮಾಡುವಂತೆಯೇ ಗ್ರಾಹಕರನ್ನು ವಿನಂತಿಸಿಕೊಳ್ಳಲಾಗುತ್ತಿದೆ.

ಪ್ರಸ್ತುತ ವಿತರಣೆ ಕಾರ್ಯ ವಿಳಂಬವಾಗುತ್ತಿರುವುದು ಫೋರ್ಡ್‌ಗೆ ನಕರಾತ್ಮಕವಾಗಿ ಬಾಧಿಸತೊಡಗಿದೆ. ಈ ನಡುವೆ ವೇಟಿಂಗ್ ಪಿರೀಡ್ ವರ್ಧಿಸುತ್ತಿರುವುದು ಹಾಗೂ ಪದೇ ಪದೇ ದರ ಏರಿಕೆಗೊಳಿಸುವುದು ಗ್ರಾಹಕರಲ್ಲಿ ಬೇಸರಕ್ಕೆ ಕಾರಣವಾಗಿದೆ.
ಇಕೊಸ್ಪೋರ್ಟ್‌ನಿಂದ ಲಭ್ಯವಿರುವ ಹತ್ತು ಮಾಡೆಲ್‌ಗಳ ಪೈಕಿ ಎಂಟು ಆವೃತ್ತಿಗಳ ಬುಕ್ಕಿಂಗ್ ರದ್ದುಗೊಳಿಸಲಾಗಿದೆಯೆಂಬ ಮಾಹಿತಿಯಿದೆ. ಅದೇ ರೀತಿ ಆರು ತಿಂಗಳುಗಳ ವರೆಗಿದ್ದ ವಿತರಣೆ ದಿನಾಂಕವೀಗ ಒಂದು ವರ್ಷದ ವರೆಗೂ ವಿಸ್ತರಿಸಿದೆ.


Click it and Unblock the Notifications








