ಇದೀಗ ಫೋರ್ಡ್ ಫಿಗೊದಲ್ಲೂ ವೈಫೈ ಸೇವೆ ಲಭ್ಯ
ಬಹುನಿರೀಕ್ಷಿತ ದೆಹಲಿ ಆಟೋ ಎಕ್ಸ್ ಪೋದಿಂದ ಮಗದೊಂದು ಖುಷಿ ಸುದ್ದಿ ಹೊರಬಂದಿದೆ. ನೀವೆಲ್ಲರೂ ಫೋರ್ಡ್ ಫಿಗೊ ಸೆಡಾನ್ ಕಾನ್ಸೆಪ್ಟ್ ಮತ್ತು ಫೋರ್ಡ್ ಫಿಯೆಸ್ಟ್ ಆವೃತ್ತಿಯಲ್ಲೇ ಗಮನ ಕೇಂದ್ರಿತವಾಗಿರಬಹುದು.
ಹಾಗಿರುವ 2014 ಪೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಗಿಟ್ಟಿಸಿಕೊಂಡಿರಲಾರದು. ಕುತೂಹಲಕಾರಿ ಸಂಗತಿಯೆಂದರೆ ನೂತನ ಫಿಗೊ ಹೊರಮೈಗಿಂತಲೂ ಒಳಮೈ ಹೆಚ್ಚಿನ ಆಸಕ್ತಿದಾಯಕವೆನಿಸಲಿದೆ.

ಹೌದು, ನೂತನ ಫಿಗೊ ಕಾರಿನಲ್ಲಿ ನಿಮಗೆ ವೈಫೈ ಸೇವೆ ಲಭ್ಯವಾಗಿರಲಿದೆ. ಇದು ಸೌಲಭ್ಯ ಇಎಕ್ಸ್‌ಐ, ಝಡ್‌ಎಕ್ಸ್‌ಐ ಮತ್ತು ಟೈಟಾನಿಯಂ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಇದರ ಸ್ಟಾಂಡರ್ಡ್ ಆಡಿಯೋ ಸಿಸ್ಟಂನಲ್ಲಿ ವೈಫೈ ಸೇವೆ ಲಭ್ಯವಿರಲಿದೆ. ಇದರ ಯುಎಸ್‌ಬಿ ಪೋರ್ಟ್‌ನಲ್ಲಿ ಡಿವೈಸ್ ಕನೆಕ್ಟ್ ಮಾಡಿದಾಗ ಕಾರಿನೊಳಗೆ ವೈಫೈ ಕೆಲಸ ಮಾಡಲಿದೆ. ಇದಕ್ಕಾಗಿ 3ಜಿ ಸಂಪರ್ಕವನ್ನು ಖರೀದಿಸಬೇಕಾಗುತ್ತದೆ.
ಇದರ ಜತೆಗೆ ಝಡ್‌ಎಕ್ಸ್‌ಐ ವೆರಿಯಂಟ್‌ನಲ್ಲಿ ಚಾಲಕನ ಬದಿಯ ಏರ್‌ಬ್ಯಾಗ್ ಸ್ಟಾಂಡರ್ಡ್ ಆಗಿಯೂ ಮತ್ತು ಇಎಕ್ಸ್‌ಐ ವೆರಿಯಂಟ್‌ನಲ್ಲಿ ಸ್ಟೀರಿಯೊ ಸಿಸ್ಟಂ ಕೂಡಾ ಇರಲಿದೆ. ಅಲ್ಲದೆ ಮಾರ್ಸ್ ರೆಡ್ ಬಣ್ಣದಲ್ಲೂ ಆಗಮನವಾಗಲಿದೆ. 2014 ಫೋರ್ಡ್ ಫಿಗೊ ದೆಹಲಿ ಎಕ್ಸ್ ಶೋ ರೂಂ ದರ 4.03 ಲಕ್ಷ ರು.ಗಳಾಗಿರಲಿದೆ. ಈ ಪೈಕಿ ಇಎಕ್ಸ್‌ಐ ಹಾಗೂ ಟೈಟಾನಿಯಂ ವೆರಿಯಂಟ್ ದರ ತಲಾ 10,000 ರು.ಗಳ ವರೆಗೂ ಹಾಗೆಯೇ ಝಡ್‌ಎಕ್ಸ್‌ಐ ವೆರಿಯಂಟ್ ದರ ರು. 20,000 ವರೆಗೂ ವರ್ಧಿಸಿದೆ.


Click it and Unblock the Notifications