ಮುಂದಿನ ತಿಂಗಳಲ್ಲಿ 2014 ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಲಾಂಚ್
ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಮುಂದಿನ ತಿಂಗಳಲ್ಲಿ 2014 ಸನ್ನಿ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆ ಮಾಡಲಿದೆ. ಇದಕ್ಕೂ ಮೊದಲು ಇದೇ ಸಾಲಿನಲ್ಲಿ ನಡೆದ 2014 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ್ದ ನಿಸ್ಸಾನ್, ಹೊಸ ಮಾದರಿಯಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಕೊಂಡಿದೆ.
2014 ನಿಸ್ಸಾನ್ ಸನ್ನಿ ಹೆಚ್ಚೆಚ್ಚು ಗ್ರಾಹಕರನ್ನು ಮನ ಸೆಳೆಯುವ ನಿರೀಕ್ಷೆಯಲ್ಲಿದೆ. ಕಾರಿನ ಹೊರಮೈ ಜತೆಗೆ ಒಳಮೈ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ.

ಇದರ ಫ್ರಂಟ್ ಗ್ರಿಲ್ ಹೆಚ್ಚು ಪ್ರೀಮಿಯಂ ಲುಕ್ ಪಡೆದುಕೊಂಡಿದ್ದಲ್ಲದೆ ದೊಡ್ಡದಾದ ಹೆಡ್‌ಲೈಟ್ ಗಿಟ್ಟಿಸಿಕೊಂಡಿದೆ. ಹಾಗೆಯೇ ಫಾಗ್ ಲ್ಯಾಂಪ್ ವಿಶಿಷ್ಟ ಹೌಸಿಂಗ್ ಡಿಸೈನ್ ಪಡೆದುಕೊಂಡಿದೆ. ಇದಕ್ಕೆ ಕ್ರೋಮ್ ಫಿನಿಶ್ ಇರಲಿದೆ.
ಅದೇ ರೀತಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್‌ಸೈಡ್ ರಿಯರ್ ವ್ಯೂ ಕ್ಯಾಮೆರಾ ಇರಲಿದೆ. ಇನ್ನುಳಿದಂತೆ ಹೊಸ ಅಲಾಯ್ ವೀಲ್ ಕಾರಿನ ಹೊರಂಗಣ ಅಂದತೆಯನ್ನು ಹೆಚ್ಚಿಸಲಿದೆ.
ಹಾಗೆಯೇ ಕಾರಿನೊಳಗಡೆ ಹೊಸತನದ ಮಾಹಿತಿ ಮನರಂಜನಾ ವ್ಯವಸ್ಥೆ, ಯುಎಸ್‌ಬಿ, ಬ್ಲೂಟೂತ್ ಸೌಲಭ್ಯವಿರಲಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.5 ಲೀಟರ್ ಕೆ9ಕೆ ಡೀಸೆಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 85 ಪಿಎಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ 1.5 ಲೀಟರ್ ಪೆಟ್ರೋಲ್ ಎಂಜಿನ್ 98 ಪಿಎಶ್ ಪವರ್ ಹೊಂದಿರಲಿದ್ದು, ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಎಕ್ಸ್‌ಟ್ರಾನಿಕ್ ಸಿವಿಟಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.


Click it and Unblock the Notifications








