ಭಾರತದಲ್ಲೇ 2015 ಫೋರ್ಡ್ ಎಂಡೋವರ್ ಪಾದಾರ್ಪಣೆ
ಸದ್ಯ ದೇಶದ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್‌ಯುವಿ) ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಗಮನ ಕೇಂದ್ರಿಕರಿಸಿರುವ ಫೋರ್ಡ್ ಸಂಸ್ಥೆಯು ಸಂಸ್ಥೆದಲ್ಲೇ 2015 ಎಂಡೋವರ್ ಪರಿಚಯಿಸಲಿದೆ.
ಇಲ್ಲಿ ಗಮನಾರ್ಹ ಸಂಗತಿಯೆಂದರೆ 2015 ಫೋರ್ಡ್ ಎಂಡೋವರ್ ಜಾಗತಿಕ ಡೆಬ್ಯುಟ್ ಭಾರತದಲ್ಲೇ ನಡೆಯಲಿದೆ. 2014 ಫೆಬ್ರವರಿ 3ರಂದು ಆಲ್ ನ್ಯೂ ಪ್ರೀಮಿಯಂ ಎಂಡೋವರ್ ಜಾಗತಿಕ ಪ್ರದರ್ಶನ ಕಾಣಲಿದೆ.

ನೂತನ ಫೋರ್ಡ್ ಎಂಡೋವರ್ ಟಿಡಿಸಿಐ ಡೀಸೆಲ್ ಎಂಜನ್‌ಗಳಿಂದ ನಿಯಂತ್ರಿಸ್ಪಡುವ ಸಾಧ್ಯತೆಯಿದೆ. ಹಾಗಿದ್ದರೂ ಭಾರತವು 2.2 ಲೀಟರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು 170 ಅಶ್ವಶಕ್ತಿ (400 ಎನ್‌ಎಂ ಟಾರ್ಕ್) ಪಡೆಯುವ ಸಾಧ್ಯತೆಯಿದೆ.
ಕೇವಲ ಎಂಜಿನ್ ಮತ್ತು ವಿನ್ಯಾಸ ಮಾತ್ರ ಹೊಸ ರೂಪವನ್ನು ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಹಿಂದುಗಡೆ ಹೊಸತಾದ ಸಸ್ಪೆಷನ್ ಕೂಡಾ ಗಿಟ್ಟಿಸಿಕೊಳ್ಳಲಿದೆ. ಹಾಗೆಯೇ ವಾಯ್ಸ್ ಕಮಾಂಡ್, ಎಸ್‌ವೈಎನ್‌ಸಿ, ಹಿಲ್ ಅಸಿಸ್ಟ್, ಎಬಿಸ್‌ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳು ಲಭ್ಯವಾಗುವ ಸಾಧ್ಯತೆಯಿದೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ವರ್ಷಾಂತ್ಯದಲ್ಲೇ ಹೊಸ ಎಂಡೋವರ್ ಲಾಂಚ್ ಆಗಲಿದ್ದು, ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಅದೇ ಹೊತ್ತಿಗೆ ಮುಂಬರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.


Click it and Unblock the Notifications