ಜನರಲ್ ಮೋಟಾರ್ಸ್‌ನಿಂದ ಹೊಸ ಪಿಕಪ್ ಟ್ರಕ್
ಅಮೆರಿಕ ಮಾರುಕಟ್ಟೆಯಲ್ಲಿ ಮಿಡ್ ಸೈಜ್ ಪಿಕಪ್ ಟ್ರಕ್‌ಗಳಿಗೆ ಹೆಚ್ಚಿನ ಬೇಡಿಕೆಗಳಿಲ್ಲ. ಇದೇ ಕಾರಣಕ್ಕಾಗಿ ಫೋರ್ಡ್‌ಗಳಂತಹ ವಾಹನ ತಯಾರಕ ಸಂಸ್ಥೆಗಳು ಈಗಾಗಲೇ ಈ ವಿಭಾಗದಿಂದ ದೂರ ಸರಿದಿದೆ.
ಈ ವಿಭಾಗದಲ್ಲಿ ನಿಸ್ಸಾನ್ ಫ್ರಾಂಟಿಯರ್ ಮತ್ತು ಟೊಯೊಟಾ ಟಕೊಮಾ ಸ್ವಲ್ಪ ಹೆಚ್ಚು ಪ್ರಾಧಾನ್ಯತೆ ಗಿಟ್ಟಿಸಿಕೊಂಡಿತ್ತು. ಪ್ರಸ್ತುತ ಜನರಲ್ ಮೋಟಾರ್ಸ್ ಎರಡು ನೂತನ ಪಿಕಪ್ ಟ್ರಕ್ಕುಗಳನ್ನು ಪರಿಚಯಿಸುತ್ತಿದೆ.

ಅವುಗಳೆಂದರೆ 2015 ಜಿಎಂಸಿ ಕ್ಯಾನ್ಯಾನ್ ಮತ್ತು ಷೆವರ್ಲೆ ಕೊಲೊರಾಡೊ. ಈಗಾಗಲೇ ಡೆಟ್ರಾಯ್ಟ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಜಿಎಂಸಿ ಕ್ಯಾನ್ಯಾನ್ 2.5 ಲೀಟರ್ ಇನ್ ಲೈನ್ 4 ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಇನ್ನು ಷೆವರ್ಲೆ ಕೊಲೊರಾಡೊ ಕೂಡಾ ಇದಕ್ಕೆ ಸಮಾನವಾದ ಎಂಜಿನ್ ಪಡೆದುಕೊಳ್ಳಲಿದೆ.
ಕ್ಯಾನ್ಯಾನ್ ಆಟೋಮ್ಯಾಟಿಕ್ ವೆರಿಯಂಟ್‌ನ 3.6 ಲೀಟರ್ ವಿ6 ಎಂಜಿನ್ 302 ಬಿಎಚ್ ಪವರ್ ಉತ್ಪಾದಿಸಲಿದೆ. ಹಾಗೆಯೇ 2015ರ ವೇಳೆಗೆ 2.8 ಟರ್ಬೊಡೀಸೆಲ್ ಎಂಜಿನ್ ನಿರೀಕ್ಷಿಸಬಹುದು.


Click it and Unblock the Notifications








