ಸ್ಟಾರ್ಟಿಂಗ್ ಟ್ರಬಲ್; ಫಿಯೆಟ್ ಕಾರು ಧ್ವಂಸಗೊಳಿಸಿದ ಮಾಲಿಕ
ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದೆ. ಕಾರು ಸ್ಟಾರ್ಟ್ ಆಗುವುದಿಲ್ಲವೆಂಬ ಏಕ ಕಾರಣಕ್ಕಾಗಿ ತಮ್ಮ ಬೆಲೆಬಾಳುವ ಕಾರೊಂದನ್ನು ಇಟಲಿಯ ವ್ಯಕ್ತಿಯೊಬ್ಬರು ಪುಡಿ ಪುಡಿಗೈದಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಖರೀದಿಸಿದ್ದ ಫಿಯೆಟ್ 500 ಕಾರಿಗೆ ಇಂತಹ ದಯನೀಯ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗ್ಗೆ ಎದ್ದು ನೋಡಿದಾಗ ಕಾರಿಗೆ ಸ್ಟಾರ್ಟಿಂಗ್ ಪ್ರಾಬ್ಲಂ ತಗುಲಿತ್ತು. ಇದರಿಂದ ಕುಪಿತಗೊಂಡಿರುವ ಮಾಲಿಕ ಕಾರಿಗೆ ಮನಬಂದಂತೆ ಚಚ್ಚಿದ್ದಾರೆ. ಉತ್ತರ ಇಟಲಿಯ ನಿವಾಸಿಯಾಗಿರುವ 35ರ ಹರೆಯದ ಸ್ಪಾರ್ಟಕೊ ಕ್ಯಾಪೊನ್ ಎಂಬವರೇ ಶೀಘ್ರ ಕೋಪದಿಂದಾಗಿ ಇಂತಹದೊಂದು ಎಡವಟ್ಟು ಮಾಡಿದ್ದಾರೆ.
ಸಮೀಪ ನಿವಾಸಿಗಳು ಹೇಳುವ ಪ್ರಕಾರ, "ಶಂಕಿತ ವ್ಯಕ್ತಿಯೊರ್ವರು ಕಾರನ್ನು ಯದ್ವಾ ತದ್ವಾ ಹೊಡೆದುರುಳಿಸುತ್ತಿದ್ದರು. ಆದರೆ ಅವರೇ ಕಾರಿನ ಮಾಲಿಕರಾಗಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿದೆ" ಎಂದು ವಿವರಿಸಿದ್ದಾರೆ.


Click it and Unblock the Notifications








