ಆಡಿಗೆ ಬ್ರೇಕ್ ಸಮಸ್ಯೆ; 382 ಕ್ಯೂ7 ಎಸ್‌ಯುವಿಗಳಿಗೆ ಹಿಂದಕ್ಕೆ ಕರೆ

By Nagaraja

ಇದೇನಿದು, ಒಂದರ ಬಳಿಕ ಒಂದರಂತೆ ವಾಹನ ತಯಾರಿಕ ಸಂಸ್ಥೆಗಳು ತಮ್ಮ ಜನಪ್ರಿಯ ಮಾದರಿಗಳಲ್ಲಿ ಕಂಡುಬಂದಿರುವ ಸಮಸ್ಯೆಯ ಬೆನ್ನಲ್ಲೇ ವಾಪಾಸ್ ಕರೆ ನೀಡಲಾರಂಭಿಸಿದೆ. ದೇಶದಲ್ಲಿ ನಿಸ್ಸಾನ್, ಹೋಂಡಾ ಬಳಿಕವೀಗ ಆಡಿ ಸಂಸ್ಥೆಗೂ ರಿಕಾಲ್ ಬಿಸಿ ತಟ್ಟಿದೆ.

ಹೌದು, ಬ್ರೇಕ್ ಸಮಸ್ಯೆಯ ಹಿನ್ನಲೆಯಲ್ಲಿ ದೇಶದಲ್ಲಿ 382 ಯುನಿಟ್‌ ಕ್ಯೂ7 ಕ್ರೀಡಾ ಬಳಕೆಯ ವಾಹನಗಳನ್ನು (ಎಸ್‌ಯುವಿ) ಹಿಂದಕ್ಕೆ ಪಡೆದುಕೊಳ್ಳಲು ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ನಿರ್ಧರಿಸಿದೆ.

Audi q7

ಸಂಸ್ಥೆಯ ಪ್ರಕಾರ ಆಡಿ ಕ್ಯೂ7 ಮಾದರಿಯಲ್ಲಿ ಬ್ರೇಕಿಂಗ್ ವ್ಯವಸ್ಥೆಯಲ್ಲಿ ತೊಂದರೆ ಕಂಡುಬಂದಿದ್ದು, ಇದನ್ನು ಸರಿಪಡಿಸಿಕೊಡಲಾಗುವುದು. 2012 ಮಾರ್ಚ್ ತಿಂಗಳಿಂದ ಡಿಸೆಂಬರ್ ವರೆಗೆ ನಿರ್ಮಾಣವಾದ ಆಡಿ ಕ್ಯೂ7 ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ.

ಆಡಿ ಜಾಗತಿಕ ರಿಕಾಲ್ ಭಾಗವಾಗಿ ಭಾರತದಲ್ಲೂ ಕ್ಯೂ7 ಮಾದರಿಗೆ ವಾಪಾಸ್ ಕರೆ ನೀಡಲಾಗಿದೆ. ಜಾಗತಿಕವಾಗಿ ಎ4, ಎ5, ಎ6, ಎ7 ಸೆಡಾನ್, ಕ್ಯೂ5 ಮತ್ತು ಕ್ಯೂ7 ಎಸ್‌ಯುವಿ ಸೇರಿದಂತೆ ಒಟ್ಟು 70,000 ಯುನಿಟ್‌ಗಳಿಗೆ ವಾಪಾಸ್ ಕರೆ ನೀಡಲಾಗಿದೆ.

ಭಾರತದಲ್ಲಿ ಇದುವರೆಗೆ 5,000 ಕ್ಯೂ7 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸಂಸ್ಥೆಯ ಪ್ರಕಾರ ಇದೀಗ ತೊಂದರೆಕ್ಕೊಳಗಾಗಿರುವ 382 ಮಾದರಿಗಳ ಮಾಲಿಕರನ್ನು ತಮ್ಮ ವಿತರಕ ಜಾಲದ ಮೂಲಕ ಸಂಪರ್ಕಿಸಲಾಗುವುದು. ಬಳಿಕ ತಮ್ಮವಾರ್ಕ್‌ಶಾಪ್‌ನಲ್ಲಿ ಭೇಟಿ ಸಮಯ ನಿಗದಪಡಿಸಿ ತೊಂದರೆಕ್ಕೀಡಾದ ವಾಕ್ಯೂಮ್ ಲೈನ್ ಬದಲಾಯಿಸಿಕೊಡಲಾಗುವುದು. ಕೇವಲ ಅರ್ಧ ಗಂಟೆಯಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಪೂರ್ಣ ಉಚಿತವಾಗಿ ಇದನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಈ ಬಗ್ಗೆ 2014 ಸೆಪ್ಟಂಬರ್ 25ರಿಂದಲೇ ಆದೇಶ ಹೊರಡಿಸಲಾಗಿದ್ದು, ಇದುವರೆಗೆ 197 ಕ್ಯೂ7 ಕಾರುಗಳ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸಂಸ್ಥೆಯ ಪ್ರಕಾರ ತೊಂದರೆಕ್ಕೊಳಗಾದ ವಾಕ್ಯೂಮ್ ಲೈನ್ ಮುಖಾಂತರ ಎಂಜಿನ್ ಆಯಿಲ್ ಬ್ರೇಕಿಂಗ್ ಸಿಸ್ಟಂ ಒಳಕ್ಕೆ ಹರಿಯುವ ಭೀತಿಯಿದ್ದು, ಇದು ಸಂಪೂರ್ಣ ಬ್ರೇಕ್ ವ್ಯವಸ್ಥೆಗೆ ಕೇಡು ತರುವುದಲ್ಲದೆ, ಬ್ರೇಕಿಂಗ್ ಕ್ಷಮತೆಯನ್ನು ಕಡಿಮೆ ಮಾಡಲಿದೆ.

ವಿ.ಸೂ: ಹಿಂದಕ್ಕೆ ಕರೆ ಆಡಿ ಕ್ಯೂ7, 3.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಮಾದರಿಗಳಿಗೆ ಮಾತ್ರ ಅನ್ವಯವಾಗಲಿದೆ.

More from DriveSpark

Article Published On: Wednesday, October 29, 2014, 12:30 [IST]
English summary
Audi, the German luxury car manufacturer has recalled 382 units of its SUV, the Q7 for a fault with the braking system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+