ಏರ್ ಬ್ಯಾಗ್ ಸಮಸ್ಯೆ; 8.5 ಲಕ್ಷ ಆಡಿ ಕಾರುಗಳಿಗೆ ಹಿಂದಕ್ಕೆ ಕರೆ

By Nagaraja

ಕಳೆದ ದಿನವಷ್ಟೇ 1.1 ಮಿಲಿಯನ್ ಫೋಕ್ಸ್‌ವ್ಯಾಗನ್ ಕಾರುಗಳನ್ನು ಹಿಂದಕ್ಕೆ ಕರೆ ನೀಡಲಾಗಿರುವ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದಾದ ಬೆನ್ನಲ್ಲೇ ವಿಶ್ವದ ಎರಡನೇ ಅತಿದೊಡ್ಡ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಜರ್ಮನಿಯ ಮೂಲದ ಆಡಿ ಸಂಸ್ಥೆಗೂ ಸಮಸ್ಯೆ ಎದುರಾಗಿದೆ.

ವರದಿಗಳ ಪ್ರಕಾರ ಏರ್ ‌ಬ್ಯಾಗ್ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ 8.50 ಲಕ್ಷ ಯುನಿಟ್‌ಗಳನ್ನು ವಾಪಾಸ್ ಕರೆ ನೀಡಲು ಆಡಿ ನಿರ್ಧರಿಸಿದೆ. ಆಡಿ ಪ್ರೀಮಿಯಂ ಸೆಡಾನ್ ಎ4 ಕಾರಿನಲ್ಲಿ ಏರ್ ಬ್ಯಾಗ್ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

Audi

ಏನಿದು ಸಮಸ್ಯೆ?
2012ರ ಬಳಿಕ ನಿರ್ಮಾಣ ಮಾಡಲಾದ ಮಾದರಿಗಳಲ್ಲಿ ಏರ್ ಬ್ಯಾಗ್ ಸಮಸ್ಯೆ ಕಾಣಿಸಿಕೊಂಡಿದೆ. ಆಡಿ ಆಳವಡಿಸಲಾಗಿರುವ ತನ್ನದೇ ಸಾಫ್ಟ್‌ವೇರ್‌ನಲ್ಲಿ ಇಂತಹದೊಂದು ಸಮಸ್ಯೆ ಕಂಡುಬಂದಿದೆ.

ಅಪಘಾತ ಸಂದರ್ಭಗಳಲ್ಲಿ ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂ ಆತಂಕ ಮೂಡಿಬಂದಿದೆ. ಇಂತಹ ಮೊದಲ ಪ್ರಕರಣ ಜರ್ಮನಿಯಲ್ಲೇ ದಾಖಲಾಗಿದ್ದು, 1.50 ಯುನಿಟ್‌ಗಳಷ್ಟು ಎ4 ಕಾರುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಚೀನಾ, ಅಮೆರಿಕದಲ್ಲೂ ರಿಕಾಲ್ ಬಿಸಿ...
ವರದಿಗಳ ಪ್ರಕಾರ ಚೀನಾದಿಂದಲೂ 2.5 ಲಕ್ಷಗಳಷ್ಟು ಮಾದರಿಗಳನ್ನು ವಾಪಾಸ್ ಪಡೆಯಲಾಗಿದೆ. ಆಡಿ ಎ4 ಸೆಡಾನ್ ಲಾಂಗ್ ವೀಲ್ ಬೇಸ್ ಮಾದರಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಅದೇ ರೀತಿ ಅಮೆರಿಕದಲ್ಲೂ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, 2013,2014 ಹಾಗೂ ಮುಂದಿನ 2015ರ ಸಾಲಿಗಾಗಿ ನಿರ್ಮಿಸಲಾಗಿರುವ ಒಟ್ಟು 1.01 ಯುನಿಟ್‌ಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ.

ಆಡಿ ಎ4 ಮಾದರಿಯ ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಸಂಶೋಧನಾ ಪುಟಕ್ಕೆ ಭೇಟಿ ಕೊಡಿರಿ

Most Read Articles

Kannada
English summary
Audi has detected a potential problem and have recalled 8,50,000 units of their premium sedan, the A4.
Story first published: Friday, October 24, 2014, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X