ಜಿನೆವಾದಲ್ಲಿ ಆಡಿ ಎಸ್1 ಹ್ಯಾಚ್‌ಬ್ಯಾಕ್ ಅನಾವರಣ

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಪ್ರತಿಷ್ಠಿತ 2014 ಜಿನೆವಾ ಮೋಟಾರು ಶೋದಲ್ಲಿ ನೂತನ ಎಸ್1 ಹ್ಯಾಚ್‌ಬ್ಯಾಕ್ ಕಾರನ್ನು ಪ್ರದರ್ಶಿಸಿದೆ.

ಎಸ್ ಹಾಗೂ ಎಸ್1 ಸ್ಪೋರ್ಟ್‌ಬ್ಯಾಕ್ ಕಾರುಗಳು ಎರಡು ಹಾಗೂ ನಾಲ್ಕು ಬಾಗಿಲುಗಳ ಮಾದರಿಗಳಲ್ಲಿ ಲಭ್ಯವಾಗಲಿದೆ. ಈ ಪೈಕಿ ಆಡಿ ಎಸ್1 ಕ್ಸೆನನ್ ಹೆಡ್ ಲ್ಯಾಂಪ್, ಎಲ್‌ಇಡಿ ಟೈಲ್‌ಲೈಟ್ಸ್, ಕ್ವಾಡ್ ಎಕ್ಸಾಸ್ಟ್ ಮತ್ತು ರೂಫ್ ಮೌಂಟೆಡ್ ಸ್ಲ್ಪಿಟ್ ಸ್ಪಾಯ್ಲರ್ ಪಡೆದುಕೊಳ್ಳಲಿದೆ.

To Follow DriveSpark On Facebook, Click The Like Button
Audi S1

ಇನ್ನು ಕಾರಿನೊಳಗೂ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದೆ. ಇದು 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 228 ಅಶ್ವಶಕ್ತಿ (370 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಇದರ ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಡಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ತುಂಬಲಿದೆ. ಇದು ಕೇವಲ 5.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

English summary
Previewed initially through images last month, the new flagship Audi A1 model, the S1 has made its official debut at the Geneva Motor Show 2014.
Story first published: Thursday, March 6, 2014, 11:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark