ದೇಶದ ಚೊಚ್ಚಲ ಎಲೆಕ್ಟ್ರಿಕ್ ಬಸ್ ಬೆಂಗ್ಳೂರಲ್ಲಿ ಓಡಾಟ

By Nagaraja

ಭಾರತದ ಪ್ರಪ್ರಥಮ ಎಲೆಕ್ಟ್ರಿಕ್ ಬಸ್, ನಮ್ಮ ಬೆಂಗಳೂರಿನಲ್ಲಿ ಓಡಾಟ ಆರಂಭಿಸಿದೆ. ಚೊಚ್ಚಲ ವಿದ್ಯುತ್ ಚಾಲಿತ ಬಸ್ ಕನಸು ನನಸಾಗಿರುವುದಕ್ಕೆ ನಾವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಕೃತಜ್ಞತೆ ಸಲ್ಲಿಸಬೇಕಾಗುತ್ತದೆ.

ಬೆಂಗ್ಳೂರಿಗೆ ಅಪ್ಪಳಿಸಲಿದೆ ಹೈಬ್ರಿಡ್ ಬಸ್ಸು

ಸಾರಿಗೆ ಸಚಿವಾಲಯದಿಂದ ಹಸಿರು ನಿಶಾನೆ ಪಡೆದಿರುವ ಎಲೆಕ್ಟ್ರಿಕ್ ಬಸ್ ಮುಂದಿನ ಮೂರು ತಿಂಗಳ ವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ. ಚೀನಾದ ಯುತೋಪಿಯಾ ಆಟೋಮೇಶನ್ ಆಂಡ್ ಕಂಟ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬಿಎಂಟಿಸಿಗೆ ಈ ವಿದ್ಯುತ್ ಚಾಲಿತ ಬಸ್ಸನ್ನು ಒದಗಿಸಿದೆ. ಅಂತೆಯೇ ಗುರುವಾರ (ಫೆ. 27) ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಎಲೆಕ್ಟ್ರಿಕ್ ಬಸ್ ಅನ್ನು ಉದ್ಘಾಟಿಸಿದರು.

ದೇಶದ ಚೊಚ್ಚಲ ಎಲೆಕ್ಟ್ರಿಕ್ ಬಸ್ ಬೆಂಗ್ಳೂರಲ್ಲಿ ಓಡಾಟ

ಎರಡು ಕೋಟಿಗಳಷ್ಟು ಬೆಲೆಬಾಳುವ ಈ ದುಬಾರಿ ಬಸ್ ಮುಂದಿನ ಮೂರು ತಿಂಗಳುಗಳಲ್ಲಿ ಸಮರ್ಥನೀಯವಾಗಿ ಕಾರ್ಯನಿರ್ವಹಿಸಿದರೆ ಇನ್ನಷ್ಟು ವಿದ್ಯುತ್ ಚಾಲಿತ ಬಸ್ಸುಗಳನ್ನು ಆಳವಡಿಸುವ ಇರಾದೆಯನ್ನು ಬಿಎಂಟಿಸಿ ಹೊಂದಿದೆ. ಇದು ಸಾಮ್ಯಾನ ಡೀಸೆಲ್ ಬಸ್ಸುಗಳಿಗಿಂತಲೂ ಹತ್ತು ಪಟ್ಟು ದುಪ್ಪಾಟಾಗಿದೆ.

ದೇಶದ ಚೊಚ್ಚಲ ಎಲೆಕ್ಟ್ರಿಕ್ ಬಸ್ ಬೆಂಗ್ಳೂರಲ್ಲಿ ಓಡಾಟ

ಪ್ರಸ್ತುತ ಎಲೆಕ್ಟ್ರಿಕ್ ಬಸ್ ಮೆಜೆಸ್ಟಿಕ್‌ನಿಂದ ಕಾಡುಗೋಡಿ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಸದ್ಯ ವೋಲ್ವೋ ಬಸ್ಸುಗಳ ದರ ಇದಕ್ಕೂ ಅನ್ವಯವಾಗಲಿದೆ.

(ಸಾಂದರ್ಭಿಕ ಚಿತ್ರ ಬಳಕೆ)

ವೈಶಿಷ್ಟ್ಯತೆಗಳೇನು?

ವೈಶಿಷ್ಟ್ಯತೆಗಳೇನು?

  • ವಾಯು, ಶಬ್ದ ಮಾಲಿನ್ಯ ರಹಿತ ಬಸ್
  • ಕಡಿಮೆ ಚಾಲನಾ ಹಾಗೂ ನಿರ್ವಹಣಾ ವೆಚ್ಚ
  • ಸಂಪೂರ್ಣ ಹವಾ ನಿಯಂತ್ರಿತ
  • ಎಲ್‌ಇಡಿ ಮಾರ್ಗಸೂಚಿ ಫಲಕ,
  • (ಸಾಂದರ್ಭಿಕ ಚಿತ್ರ ಬಳಕೆ)

    ವೈಶಿಷ್ಟ್ಯತೆಗಳೇನು?

    ವೈಶಿಷ್ಟ್ಯತೆಗಳೇನು?

    • ಸಂಪೂರ್ಣ ಚಾರ್ಜ್ ಮಾಡಿಸಲು ಆರರಿಂದ ಏಳು ತಾಸುಗಳ ಅಗತ್ಯ,
    • ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 240ರಿಂದ 260 ಕೀ.ಮೀ. ವರೆಗೂ ಪಯಣ,
    • (ಸಾಂದರ್ಭಿಕ ಚಿತ್ರ ಬಳಕೆ)

      ವೈಶಿಷ್ಟ್ಯತೆಗಳೇನು?

      ವೈಶಿಷ್ಟ್ಯತೆಗಳೇನು?

      • ಸುರಕ್ಷತೆ ದೃಷ್ಟಿಕೋನದಲ್ಲಿ ಎರಡು ಸಿಸಿ ಕ್ಯಾಮೆರಾ ಆಳವಡಿಕೆ
      • ವಿಕಲಚೇತನರಿಗೆ ಬಸ್ ಏರಲು ವೀಲ್ ಚೇರ್ ವ್ಯವಸ್ಥೆ
      • ಸೌರಶಕ್ತಿಯಲ್ಲೂ ಚಾರ್ಜಿಂಗ್ ಸೌಲಭ್ಯ
      • ಬೆಸ್ಕಾನಿಂದ ವಿದ್ಯುತ್ ಪೂರೈಕೆ
      • (ಸಾಂದರ್ಭಿಕ ಚಿತ್ರ ಬಳಕೆ)

        ದೇಶದ ಚೊಚ್ಚಲ ಎಲೆಕ್ಟ್ರಿಕ್ ಬಸ್ ಬೆಂಗ್ಳೂರಲ್ಲಿ ಓಡಾಟ

        ನಿಮ್ಮ ಮಾಹಿತಿಗಾಗಿ ಚೀನಾ ಸೇರಿದಂತೆ ಅಮೆರಿಕ, ಕೆನಡಾ, ಸಿಂಗಾಪುರ ಮತ್ತು ಅನೇಕ ಯುರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಬಸ್ಸುಗಳು ಆಳವಡಿಕೆಯಲ್ಲಿದೆ. ಆದರೆ ಮೂಲಸೌಕರ್ಯ ಕೊರತೆಯ ಹಿನ್ನಲೆಯಲ್ಲಿ ಭಾರತದಲ್ಲಿ ಹಿನ್ನಡೆ ಅನುಭವಿಸುತ್ತಿದೆ.

More from DriveSpark

Article Published On: Friday, February 28, 2014, 10:30 [IST]
English summary
The Bangalore Metropolitan Transport Corporation (BMTC) introduced the country’s first electric zero-emission bus in the city on Thursday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+