ಹೊಸ ವರ್ಷಕ್ಕೆ ಕಹಿ ಸುದ್ದಿ; ವಾಹನಗಳು ದುಬಾರಿ ?

By Nagaraja

2014ನೇ ಸಾಲು ಅಂತ್ಯವಾಗುತ್ತಿರುವಂತೆಯೇ ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ. ಆದರೆ ಎಂದಿನಂತೆ ಕಳೆಗುಂದಿರುವ ವಾಹನ ಮಾರುಕಟ್ಟೆ ಮಾತ್ರ ಚೇತರಿಕೆಗಾಗಿ ಚಡಪಡಿಸುತ್ತಿದೆ.

ಈ ನಡುವೆ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ಬೆಲೆ ಏರಿಕೆ ಪ್ರಕಟಿಸಲಿದೆ. ವರದಿಗಳ ಪ್ರಕಾರ ಹೊಸ ವರ್ಷದ ವೇಳೆ ಎಲ್ಲ ವಾಹನಗಳು ದುಬಾರಿಯಾಗಲಿದೆ. ಬೆಲೆ ಏರಿಕೆಯು ವಾಹನ ತಯಾರಿಕರಿಂದ ತಯಾರಿಕರಿಗೆ ವಿಭಿನ್ನವಾಗಿರಲಿದ್ದು, ಅವುಗಳ ನಿರ್ದಿಷ್ಟ ವೆರಿಯಂಟ್ ಅವಲಂಬಿಸಿರಲಿದೆ.

wagonr

ಪ್ರಮುಖವಾಗಿಯೂ ನಿರ್ಮಾಣ ವೆಚ್ಚ ಹೆಚ್ಚಿರುವುದೇ ಬೆಲೆ ಏರಿಕೆಗೆ ಕಾರಣವಾಗದೆ. ಈ ನಡುವೆ ಬೆಲೆಯೇರಿಕೆ ನಡುವೆಯೂ ವಾಹನ ಮಾರುಕಟ್ಟೆ ಚೇತರಿಕೆ ಕಾಣುವ ನಿರೀಕ್ಷೆಯನ್ನು ವಾಹನ ಸಂಸ್ಥೆಗಳು ಹೊಂದಿದೆ.

ಇನ್ನೊಂದೆಡೆ ವಾಹನಗಳ ಮೇಲಿನ ಅಬಕಾರಿ ತೆರಿಗೆ ವಿನಾಯಿತಿ ಈ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಇದರಿಂದ ಸರಕಾರದ ಪರಿಷ್ಕೃತ ನೀತಿಯಲ್ಲಿ ತೆರಿಗೆ ವಿನಾಯಿತಿ ಮುಂದುವರಿಸಲಿದೆಯೇ ಎಂಬುದು ಗಮನಾರ್ಹವೆನಿಸಿದೆ.

ಕಳೆದ 14 ತಿಂಗಳಲ್ಲಿ ದರ ಏರಿಕೆಯನ್ನು ಹಿಡಿದಿಟ್ಟುಕೊಂಡಿರುವ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಹ ಬೆಲೆ ಏರಿಕೆ ಪ್ರಕಟಿಸುವ ಸಾಧ್ಯತೆಯಿದೆ. ಇದನ್ನೇ ಹ್ಯುಂಡೈ, ಹೋಂಡಾ ಹಾಗೂ ಟೊಯೊಟಾ ಅನುಸರಿಸುವ ಸಾಧ್ಯತೆಯಿದೆ.

ಅಂದ ಹಾಗೆ ಮಹೀಂದ್ರ ಸಂಸ್ಥೆಯು ಈಗಾಗಲೇ ದರ ಏರಿಕೆಯನ್ನು ಪ್ರಕಟಿಸಿದೆ. ಒಟ್ಟಿನಲ್ಲಿ 5,000 ರು.ಗಳಿಂದ ಆರಂಭವಾಗಿ ಗರಿಷ್ಠ 25,000 ರು.ಗಳ ವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಇಂದಿನ ವ್ಯವಹಾರ: ಆಟೋಮೊಬೈಲ್ ಆಕ್ಸೆಸರಿಯಲ್ಲಿ ಶೇ.65ರಷ್ಟು ರಿಯಾಯಿತಿ ತ್ವರೆ ಮಾಡಿ

More from DriveSpark

Article Published On: Monday, December 15, 2014, 13:02 [IST]
English summary
Automobile manufacturers in India are set to increase prices for new vehicles from January onwards, due to rising costs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+