3 ಮಿಲಿಯನ್ ಕ್ಲಬ್‌ಗೆ ಎಂಟ್ರಿ ಕೊಟ್ಟ ಷೆವರ್ಲೆ ಕ್ರೂಝ್
ಅಮೆರಿಕ ಮೂಲದ ಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಜನಪ್ರಿಯ ಬ್ರಾಂಡ್ ಆಗಿರುವ ಷೆವರ್ಲೆ ಇತ್ತೀಚೆಗಷ್ಟೇ 2015 ಷೆವರ್ಲೆ ಕ್ರೂಝ್ ನೆರೆಯ ಚೀನಾದಲ್ಲಿ ಲಾಂಚ್ ಮಾಡಿತ್ತು.
ಈ ಅತ್ಯಾಧುನಿಕ ಮಾದರಿ ಮುಂದಿನ ವರ್ಷ ಭಾರತ ಪ್ರವೇಶಿಸುವ ಸಾಧ್ಯತೆಯಿದೆ. ಹಾಗಿರಬೇಕೆಂದರೆ ಷೆವರ್ಲೆ ಕ್ರೂಝ್‌ಗೆ ಮಗದೊಂದು ಕೋಡು ಮೂಡಿದ್ದು, ಜಾಗತಿಕವಾಗಿ ಮೂರು ದಶಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಸರಿ ಸುಮಾರು 16 ತಿಂಗಳ ಹಿಂದೆ ಎರಡು ಮಿಲಿಯನ್ ಮೈಲುಗಲ್ಲು ತಲುಪಿದ್ದ ಈ ಸೆಡಾನ್ ಕಾರು ಇದೀಗ ಮೂರು ಮಿಲಿಯನ್ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ. ನಿಮ್ಮ ಮಾಹಿತಿಗಾಗಿ, ಮೊದಲ ಜನರೇಷನ್ ಷೆವರ್ಲೆ ಕ್ರೂಝ್ 2008ನೇ ಇಸವಿಯಲ್ಲಿ ಲಾಂಚ್ ಆಗಿತ್ತು. ಅಲ್ಲದೆ 2015 ಕ್ರೂಝ್ ಬೀಜಿಂಗ್ ಮೋಟಾರು ಶೋದಲ್ಲಿ ಮೊದಲ ಬಾರಿ ಪ್ರದರ್ಶನಗೊಂಡಿತ್ತು.
ಆಸ್ಟ್ರೇಲಿಯಾದಲ್ಲಿ ಹೋಲ್ಡನ್ ಕ್ರೂಝ್ ಎಂಬ ಹೆಸರಿನಿಂದ ಅರಿಯಲ್ಪಡುವ ಜನಪ್ರಿಯ ಷೆವರ್ಲೆ ಕ್ರೂಝ್ ದಕ್ಷಿಣ ಕೊರಿಯಾದಲ್ಲಿ ದೇವೂ ಲಸೆಟ್ಟಿ ಪ್ರೀಮಿಯರ್ ಎಂದರಿಯಲ್ಪಟ್ಟಿದೆ. ಅಂದ ಹಾಗೆ ಭಾರತ ಹಾಗೂ ಅಮೆರಿಕದಲ್ಲಿ ಈ ಬನಪ್ರಿಯ ಮಾದರಿಯು ಸೆಡಾನ್ ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯಲ್ಲೂ ಪರಿಚಯವಾಗಿದೆ.

ಏತನ್ಮಧ್ಯೆ 2015 ಕ್ರೂಝ್ ಮಾದರಿಯಲ್ಲಿ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ಇದು ಏರ್ ಬ್ಯಾಗ್ ಸ್ಟಾಂಡರ್ಡ್ ಆಗಿ ಹೊಂದಿದ್ದು, ರಿಯರ್ ವಿಷನ್ ಕ್ಯಾಮೆರಾ, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಸೈಡ್ ಬ್ಲೈಂಡ್ ಜೋನ್‌ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
2015 ಕ್ರೂಝ್‌ನಲ್ಲಿ 4ಜಿ ಎಲ್‌ಟಿಇ ಕನೆಕ್ಷನ್ ಜೊತೆ ವೈಫೈ ಕನೆಕ್ಟಿವಿಟಿ ಸಹ ಇರಲಿದೆ. ಅಲ್ಲದೆ ಆನ್‌ಸ್ಟಾರ್ ಮತ್ತು ಸಿರಿ ಐಸ್ ಫ್ರಿ ಇಂಟೇಗ್ರೇಷನ್ ಸೌಲಭ್ಯ ಕೂಡಾ ಇರಲಿದೆ. ಒಟ್ಟಾರೆಯಾಗಿ 2.0 ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಷೆವರ್ಲೆ ಕ್ರೂಝ್ ಪ್ರತಿ ಲೀಟರ್‌ಗೆ 16.28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








