ನಿಮ್ಮ ಗಮನ ಸೆಳೆಯಿತೇ 2014 ಷೆವರ್ಲೆ ಕ್ರೂಜ್?

Written By:

ಸಾಮಾನ್ಯವಾಗಿ ಮಾರುತಿ, ಹ್ಯುಂಡೈ, ಟಾಟಾ ಅಥವಾ ಟೊಯೊಟಾ ಕಾರುಗಳನ್ನು ಹೊರತುಪಡಿಸಿದರೆ ಭಾರತೀಯರು ಇತರ ಕಾರು ತಯಾರಕರ ಬಗ್ಗೆ ಹೆಚ್ಚು ನಿಷ್ಠೆ ವ್ಯಕ್ತಪಡಿಸುವುದಿಲ್ಲ. ಗುಣಮಟ್ಟತೆಯಲ್ಲೂ ಶ್ರೇಷ್ಠತೆ ಹೊಂದಿದ್ದರೂ ಗ್ರಾಹಕರು ಅತ್ತ ತಿರುಗಿಯೂ ನೋಡಲು ಬಯಸುವುದಿಲ್ಲ.

ಹಾಗಿರುವಾಗ ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ ಷೆವರ್ಲೆ ಬ್ರಾಂಡ್, ನೂತನ ಕ್ರೂಜ್ ಸೆಡಾನ್ ಆವೃತ್ತಿಯನ್ನು ಭಾರತಕ್ಕೆ ಪರಿಚಯಿಸಿದೆ. ಪ್ರಸ್ತುತ ಫೇಸ್‌ಲಿಫ್ಟ್ ವರ್ಷನ್ ಆಗಿರುವ 2014 ಷೆವರ್ಲೆ ಕ್ರೂಜ್ ಹಿಂದಿನ ಆವೃತ್ತಿಗಿಂತಲೂ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಅಂದ ಹಾಗೆ ನೂತನ ಷೆವರ್ಲೆ ಕ್ರೂಜ್ ಆರಂಭಿಕ ದರ 14.37 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ ವೆರಿಯಂಟ್ 16.99 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

2014 ಷೆವರ್ಲೆ ಕ್ರೂಜ್

2014 ಷೆವರ್ಲೆ ಕ್ರೂಜ್ ಮುಂಭಾಗದಲ್ಲಿ ಆಕರ್ಷಕ ಫ್ರಂಟ್ ಗ್ರಿಲ್ ಪಡೆದುಕೊಂಡಿದ್ದು, ಷೆವರ್ಲೆ ಲಾಂಛನ ವಿಶೇಷವಾಗಿ ಗುರುತಿಸಿಕೊಂಡಿದೆ.

2014 ಷೆವರ್ಲೆ ಕ್ರೂಜ್

ಹೊಸತಾದ ಅಲಾಯ್ ವೀಲ್ 2014 ಷೆವರ್ಲೆ ಕ್ರೂಜ್ ಕಾರಿನ ಮಗದೊಂದು ಆಕರ್ಷಣೆಯಾಗಿರಲಿದೆ.

2014 ಷೆವರ್ಲೆ ಕ್ರೂಜ್

ಅಷ್ಟೇ ಅಲ್ಲದೆ ಹೊರಂಗಣ ರಿಯರ್ ವ್ಯೂ ಮಿರರ್ ಸಮಗ್ರ ಟರ್ನ್ ಸಿಗ್ನಲ್ ಇಂಡಿಕೇಟರ್‌ಗಳನ್ನು ಪಡೆದುಕೊಳ್ಳಲಿದೆ.

2014 ಷೆವರ್ಲೆ ಕ್ರೂಜ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎರಡು ಹೆಚ್ಚುವರಿ ಏರ್ ಬ್ಯಾಗ್‌ಗಳನ್ನು ಆಳವಡಿಸಲಾಗಿದೆ. ಅಂದರೆ ಟಾಪ್ ಎಂಡ್ ವೆರಿಯಂಟ್ ನಾಲ್ಕು ಏರ್ ಬ್ಯಾಗ್‌ಗಳನ್ನು ಪಡೆದುಕೊಳ್ಳಲಿದೆ (ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರಿಗೆ ತಲಾ ಎರಡರಂತೆ).

2014 ಷೆವರ್ಲೆ ಕ್ರೂಜ್

ಇನ್ನುಳಿದಂತೆ ಆಡಿಯೋ ಸಿಸ್ಟಂ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜತೆಗೆ ಇನ್ನಿತರ ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

2014 ಷೆವರ್ಲೆ ಕ್ರೂಜ್

ಹಾಗಿದ್ದರೂ ಎಂಜಿನ್ ಮಾತ್ರ ಹಳೆ ಆವೃತ್ತಿಗೆ ಸಮಾನವಾಗಿರಲಿದೆ. ಇದು 2.0 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 168 ಪಿಎಸ್ ಪವರ್ (380 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ ಜತೆಗೆ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಮತ್ತು ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.

2014 ಷೆವರ್ಲೆ ಕ್ರೂಜ್

ಇಲ್ಲಿ ಗಮನಾರ್ಹ ಸಂಗತಿಯೆಂದರೆ 2014 ಷೆವರ್ಲೆ ಕ್ರೂಜ್ ಆಟೋಮ್ಯಾಟಿಕ್ ವೆರಿಯಂಟ್ ಪ್ರತಿ ಲೀಟರ್‌ಗೆ 14.81 ಕೀ.ಮೀ. ಹಾಗೆಯೇ ಮ್ಯಾನುವಲ್ ವೆರಿಯಂಟ್ ಪ್ರತಿ ಲೀಟರ್‌ಗೆ 17.3 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿರಲಿದೆ.

ದರ ಮಾಹಿತಿ

ದರ ಮಾಹಿತಿ

ಷೆವರ್ಲೆ ಕ್ರೂಜ್ ಎಲ್‌ಟಿ (ಮ್ಯಾನುವಲ್) - 14,37,220 ರು.

ಷೆವರ್ಲೆ ಕ್ರೂಜ್ ಎಲ್‌ಟಿಝಡ್ (ಮ್ಯಾನುವಲ್) - 15,93,184 ರು.

ಷೆವರ್ಲೆ ಕ್ರೂಜ್ ಎಲ್‌ಟಿಝಡ್ (ಆಟೋಮ್ಯಾಟಿಕ್) - 1699053 ರು.

2014 ಷೆವರ್ಲೆ ಕ್ರೂಜ್

ಇದೀಗ ಷೆವರ್ಲೆ ಕ್ರೂಜ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಾಗೆಯೇ ಇತರ ಕಾರಿಗಳಿಗಿಂತ ಷೆವರ್ಲೆ ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿಸಿರಿ.

English summary
Chevrolet has officially confirmed the launch of the facelifted version of the Cruze sedan. The 2014 Chevrolet Cruze has not dramatically changed in how it looks, but the few improvements that it has received are worthy of mention.
Story first published: Tuesday, April 1, 2014, 10:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark