ಷೆವರ್ಲೆ ಸ್ಪಾರ್ಕ್ ವಿಶೇಷ ಆವೃತ್ತಿ ಲಾಂಚ್; ದರ ಎಷ್ಟು ಗೊತ್ತೇ?
ಅಮೆರಿಕದ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ, ದೇಶದಲ್ಲಿ ನೂತನ ಸ್ಪಾರ್ಕ್ ವಿಶೇಷ ಆವೃತ್ತಿ ಲಾಂಚ್ ಮಾಡಿದೆ. ಈ ಸಣ್ಣ ಹ್ಯಾಚ್‌ಬ್ಯಾಕ್ ಕಾರಿನ ದೆಹಲಿ ಎಕ್ಸ್ ಶೋ ದರ 3.44 ಲಕ್ಷ ರು.ಗಳಿಂದ ಆರಂಭವಾಗಿ 3.99 ಲಕ್ಷ ರು.ಗಳ ವರೆಗಿರಲಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಜನರಲ್ ಮೋಟಾರ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರವಿಂದ್ ಸಕ್ಸೇನಾ, ಇದರ ಉನ್ನತ ಸ್ಮಾರ್ಟ್‌ಟೆಕ್ ಎಂಜಿನ್ ಯುವ ಗ್ರಾಹಕರನ್ನು ಆಕರ್ಷಿಸಲಿದೆ ಎಂದಿದ್ದಾರೆ. ಈ ಮೂಲಕ ಗ್ರಾಹಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ಬದ್ಧರಾಗಿದ್ದೇವೆ ಎಂದಿದ್ದಾರೆ.

ನೂತನ ಷೆವರ್ಲೆ ಸ್ಪಾರ್ಕ್ ಸೀಮಿತ ಆವೃತ್ತಿಯು ಫೂಟ್‌ವೆಲ್ ಲೈಟ್, ಬೀಜ್ ಸೀಟ್ ಕವರ್ ಜತೆ ರೆಡ್ ಸ್ಟ್ರಿಪ್, ನೆಕ್ ರೆಸ್ಟ್, ಕಾರ್ಪಟ್ ಫ್ಲೂರ್ ಮ್ಯಾಟ್ ಮತ್ತು ಸ್ಟೀರಿಂಗ್ ವೀಲ್ ಕವರ್ ಪಡೆದುಕೊಳ್ಳಲಿದೆ.
ಅದೇ ರೀತಿ ಕಾರಿನ ಬಾಹ್ಯ ಭಾಗವು ವಿಶೇಷ ಗಮನ ಸೆಳೆಯುತ್ತದೆ. ಇದು ಔಟ್‌ಸೈಡ್ ರಿಯರ್ ವ್ಯೂ ಕ್ಯಾಮೆರಾ ಜತೆ ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್, ಎರಡು ಬಣ್ಣಗಳಲ್ಲಿ ಬಾಡಿ ಸ್ಟಿಕ್ಕರ್ ಹಾಗೂ ಲಿಮಿಟೆಡ್ ಎಡಿಷನ್ ಬ್ಯಾಡ್ಜ್ ಪಡೆದುಕೊಳ್ಳಲಿದೆ.
ಒಟ್ಟು ಏಳು ಕಲರುಗಳಲ್ಲಿ ಜನರಲ್ ಮೋಟಾರ್ಸ್ ಲಭ್ಯವಾಗಲಿದೆ. ಇವುಗಳಲ್ಲಿ ಕೇವಿಯರ್ ಬ್ಲ್ಯಾಕ್, ಸಮ್ಮಿತ್ ವೈಟ್, ಲಿನೆನ್ ಬೀಜ್, ಸ್ಯಾಡ್ರಿಫ್ಟ್ ಗ್ರೇ, ವಾಲ್ವೆಟ್ ರೆಡ್, ಮಿಸ್ಟಿ ಮೆಟ್ಯಾಲಿಕ್ ಹಾಗೂ ಸ್ವಿಚಬಲ್ ಸಿಲ್ವರ್ ಬಣ್ಣಗಳು ಸೇರಿರಲಿದೆ.
ಅಂದ ಹಾಗೆ ಷೆವರ್ಲೆ ಸ್ಪಾರ್ಕ್ ವಿಶೇಷ ಆವೃತ್ತಿಯು 1.0 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು 63 ಪಿಎಸ್ ಪವರ್ ಉತ್ಪಾದಿಸುವ (90.3 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ ಮೂರು ವರ್ಷಗಳ ಅಥವಾ ಒಂದು ಲಕ್ಷ ಕೀ.ಮೀ.ಗಳ ವಾರಂಟಿ ಸಹ ಸೌಲಭ್ಯವಿರುತ್ತದೆ.
ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿರುವ ಹೊರತಾಗಿಯೂ ಗರಿಷ್ಠ ಸುರಕ್ಷತೆಗೆ ಆದ್ಯತೆ ಕೊಡಲಾಗಿದೆ. ಇದು ಗರಿಷ್ಠ ಗುಣಮಟ್ಟದ ಸ್ಟೀಲ್‌ನಿಂದ ನಿರ್ಮಿಸಲಾಗಿದ್ದು, ಸ್ಥಿರತೆ ಪ್ರದಾನ ಮಾಡಲಿದೆ.


Click it and Unblock the Notifications








