ಸದ್ಯದಲ್ಲೇ ಪರಿಷ್ಕೃತ ಷೆವರ್ಲೆ ಸೈಲ್ ಹ್ಯಾಚ್‌ಬ್ಯಾಕ್, ಸೆಡಾನ್ ಬಿಡುಗಡೆ
ಅಮೆರಿಕ ಮೂಲದ ಪ್ರತಿಷ್ಠಿತ ವಾಹನ ತಯಾರಿಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಈ ಬಾರಿಯ ಹಬ್ಬದ ಆವೃತ್ತಿಯ ಎರಡು ವಿಶೇಷ ಪರಿಷ್ಕೃತ ಮಾದರಿಗಳನ್ನು ಪರಿಚಯಿಸಲಿದೆ.
ಹೌದು ಷೆವರ್ಲೆ ಸಂಸ್ಥೆಯ ಜನಪ್ರಿಯ ಸೈಲ್ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಮಾದರಿಗಳು ಮುಂಬರುವ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಲಿದೆ.

ವರದಿಗಳ ಪ್ರಕಾರ ಷೆವರ್ಲೆ ಹೊಸ ಮಾದರಿಗಳ ಕಾರಿನೊಳನ ಬದಲಾವಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರ ಡ್ಯಾಶ್‌ಬೋರ್ಡ್ ಡ್ಯುಯಲ್ ಟೋನ್ ಬ್ಲ್ಯಾಕ್ ಮತ್ತು ಬೀಜ್ ಪ್ಲಾಸ್ಟಿಕ್ಟ್ ಹೊಂದಿರಲಿದೆ.
ಅದೇ ರೀತಿ ಎಸಿ ವೆಂಟ್ಸ್ ಹಾಗೂ ಗೇರ್ ಲಿವರ್ ಕ್ರೋಮ್‌ನಿಂದ ಸುತ್ತುವರಿಯಲ್ಪಡಲಿದೆ. ಅದೇ ರೀತಿ ಕಪ್ಪು ವರ್ಣದ ಸ್ಟೀರಿಂಗ್ ಪಡೆಯಲಿದೆ.
ಈಗಾಗಲೇ ಚೀನಾ ಮಾದರಿಯ ಸೈಲ್ ಸೆಡಾನ್ ಫೇಸ್‌ಲಿಫ್ಟ್ ಅನಾವರಣಗೊಳಿಸಿರುವ ಜನರಲ್ ಮೋಟಾರ್ಸ್, ಇಂತಹುದೇ ಮಾದರಿಯನ್ನು ಭಾರತಕ್ಕೆ ಪರಿಚಯಿಸಲಿದೆ.
ಇನ್ನು ಕಾರಿನ ಹೊರಗಡೆ ಫಾಗ್ ಲ್ಯಾಂಪ್ ಸುತ್ತಲೂ ಕ್ರೋಮ್‌ನಿಂದ ಆವರಿಸಲ್ಪಡಲಿದೆ. ಹಾಗಿದ್ದರೂ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.


Click it and Unblock the Notifications








