2016ರ ವೇಳೆಗೆ ನಾಲ್ಕು ಕ್ರೈಸ್ಲರ್ ಮಾದರಿಗಳು ಬಿಡುಗಡೆ
ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ (ಎಫ್‌ಜಿಎಐಪಿಎಲ್) ಅಧೀನತೆಯಲ್ಲಿರುವ ಹೊಸತಾಗಿ ರೂಪಿತವಾಗಿರುವ ಫಿಯೆಟ್ ಕ್ಲೈಸ್ಲರ್ ಆಟೋಮೊಬೈಲ್ಸ್, 2016ರ ವೇಳೆಗೆ ಒಂಬತ್ತು ನೂತನ ಮಾದಿರಗಳನ್ನು ಲಾಂಚ್ ಮಾಡುವುದಾಗಿ ಘೋಷಿಸಿದೆ. ಈ ಪೈಕಿ ನಾಲ್ಕು ಕ್ಲೈಸ್ಲರ್ ಮಾದರಿಗಳು ಒಳಗೊಂಡಿರಲಿದೆ.
ಫಿಯೆಟ್ ಬ್ರಾಂಡ್ ಅಡಿಯಲ್ಲಿ ಮೊದಲೆರಡು ಲಾಂಚ್ ನಿಗದಿಯಾಗಿದೆ. ಅವುಗಳೆಂದರೆ ಫಿಯೆಟ್ ಅವೆಂಚ್ಯೂರಾ ಹಾಗೂ ಪುಂಟೊ ತಲಹದಿಯ ಕ್ರಾಸೋವರ್ ಮತ್ತು ಅಬಾರ್ತ್ 500.

ಇದಾದ ಬೆನ್ನಲ್ಲೇ ಮೊದಲೆರಡು ಕ್ಲೈಸ್ಲರ್ ಮಾದರಿಗಳು ಆಗಮನವಾಗಲಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಜೀಪ್ ವ್ರಾಂಗ್ಲರ್ ಮತ್ತು ಗ್ರಾಂಡ್ ಕೆರೊಕಿ ಇದರಲ್ಲಿ ಪ್ರಮುಖವಾಗಿದೆ. ಸಹಜವಾಗಿಯೇ ಕ್ಲೈಸ್ಲರ್ ವಾಹನಗಳು ಪ್ರೀಮಿಯಂ ಸ್ಥಾನ ಪಡೆಯಲಿದೆ.
ಇನ್ನಿತರ ಎರಡು ಕ್ಲೈಸ್ಲರ್ ಮಾದರಿಗಳು ಯಾವುವು ಎಂಬುದು ಇನ್ನೂ ನಿಗದಿಯಾಗಿಲ್ಲ. ವರದಿಗಳ ಪ್ರಕಾರ 2016ರ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಹೊಸತಾದ ಕ್ಲೈಸ್ಲರ್ ಮಾದರಿಗಳು ಆರಂಭದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಆಗಮನವಾಗಲಿದ್ದು ಬಳಿಕ ಬೇಡಿಕೆಗೆ ಅನುಗುಣವಾಗಿ ಸ್ಥಳೀಯವಾಗಿ ನಿರ್ಮಾಣವಾಗಲಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








