ಡೇಸಿಯಾ ಡಸ್ಟರ್ ಪಿಕಪ್ ಟ್ರಕ್ ಬಿಡುಗಡೆ
ರೆನೊ ರೊಮಾನಿಯಾದ ಬಜೆಟ್ ಬ್ರಾಂಡ್ ಆಗಿರುವ ಡೇಸಿಯಾ ಹೊಸತಾದ ಡಸ್ಟರ್ ಪಿಕಪ್ ಟ್ರಕ್ ಬಿಡುಗಡೆ ಮಾಡಿದೆ. ಇದು ಸೀಮಿತ ಆವೃತ್ತಿಯಲ್ಲಿ ಮಾತ್ರ ನಿರ್ಮಾಣವಾಗಲಿದೆ.
ಇದಕ್ಕೂ ಮೊದಲು ಬಂದಿರುವ ಲೋಗನ್ ಪಿಕಪ್ ಟ್ರಕ್‌ಗೆ ಹೋಲಿಸಿದರೆ ವಿಶೇಷ ಡಸ್ಟರ್ ಪಿಕಪ್ ನಿರ್ಮಾಣ ಸರಣಿಯನ್ನು ಹೊಂದಿರುವುದಿಲ್ಲ. ಇದನ್ನು ಪೂರ್ಣವಾಗಿಯೂ ಗ್ರಾಹಕರ ಬೇಡಿಕೆಯ ಹಿನ್ನಲೆಯಲ್ಲಿ ತಯಾರಿಸಲಾಗಿದ್ದು, ಸೀಮಿತ 500 ಯುನಿಟ್‌ಗಳಷ್ಟು ಮಾತ್ರ ಲಭ್ಯವಿರಲಿದೆ.

ವಿಶೇಷವೆಂದರೆ ಇದರ ಮಾರಾಟ ಜವಾಬ್ದಾರಿಯನ್ನು ಡೇಸಿಯಾ ವಹಿಸಿಕೊಳ್ಳುವುದಿಲ್ಲ. ಬದಲಾಗಿ ಡೇಸಿಯಾ ಈ ಡಸ್ಟರ್ ಟ್ರಕ್‌ಗಳನ್ನು ರೊಮ್‌ಟ್ಯೂರಿಂಗಿಯಾಗೆ (Romturingia) ರವಾನಿಸಲಿದೆ. ಇಲ್ಲಿಂದ ಬಳಿಕ ಗ್ರಾಹಕರಿಗೆ ತಲುಪಲಿದೆ.
ದಕ್ಷಿಣ ಪೂರ್ವ ಯುರೋಪ್ ನಗರವನ್ನು ಡಸ್ಟರ್ ಪಿಕಪ್ ಟ್ರಕ್ ಕೇಂದ್ರಿಕರಿಸಲಿದೆ. ಇದು ಡಸ್ಟರ್ 1.5 ಡಿಸಿಐ 100 4 ವೀಲ್ ಡ್ರೈವ್ ತಲಹದಿಯಲ್ಲಿ ನಿರ್ಮಾಣವಾಗಿದೆ.

ಆರಂಭದಲ್ಲಿ ಡೇಸಿಯಾ ವಾಹನಗಳಿಗೆ ಅತಿ ಹೆಚ್ಚು ಬೇಡಿಕೆಯಿರುವ ಮೊರಕ್ಕೊದಲ್ಲೂ ಡಸ್ಟರ್ ಪಿಕಪ್ ಟ್ರಕ್ಕುಗಳು ಮಾರಾಟಕ್ಕೆ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿತ್ತು.


Click it and Unblock the Notifications








