ಡೈಮ್ಲರ್ ಮೈಲುಗಲ್ಲು; ದೇಶದಲ್ಲಿ 20,000 ಟ್ರಕ್ ನಿರ್ಮಾಣ
ಡೈಮ್ಲರ್ ಎಜಿ ಅಧೀನತೆಯಲ್ಲಿರುವ ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೈವೇಟ್ ಲಿಮೆಟೆಡ್ (ಡಿಐಸಿವಿ) ಸಂಸ್ಥೆಯು ಹೊಸ ಮೈಲುಗಲ್ಲು ತಲುತ್ತಿದ್ದು, 20,000ನೇ ಯುನಿಟ್ ಟ್ರಕ್ ಅನ್ನು ಬಿಡುಗಡೆಗೊಳಿಸಿದೆ.
ಚೆನ್ನೈನಲ್ಲಿ ಸ್ಥಿತಗೊಂಡಿರುವ ಓರಗಡಂ ಘಟದಲ್ಲಿ ನಿರ್ಮಾಣವಾಗಿರುವ ಭಾರತ್ ಬೆಂಝ್ ಟ್ರಕ್ ರೂಪದಲ್ಲಿ 20,000ನೇ ಯುನಿಟ್ ನಿರ್ಮಾಣಗೊಂಡಿದೆ. ಅಂದ ಹಾಗೆ ಬಾರತ್ ಬೆಂಝ್ 2523ಸಿ ಟಿಪ್ಪರ್ ನಿರ್ಮಾಣಗೊಂಡಿದೆ.

ವಿಶೇಷವೆಂದರೆ ಒಟ್ಟು 20,000 ಯುನಿಟ್‌ಗಳ ಪೈಕಿ ಅರ್ಧದಷ್ಟು ಯುನಿಟ್‌ಗಳು ಪ್ರಸಕ್ತ ಸಾಲಿನಲ್ಲೇ ನಿರ್ಮಾಣವಾಗಿರುವುದು ಗಮನಾರ್ಹವೆನಿಸಿದೆ. ಇದು ದೇಸದಲ್ಲಿ ಡೈಮ್ಲರ್ ಸಾಧಿಸುತ್ತಿರುವ ಪ್ರಗತಿಯ ಸಂಕೇತವಾಗಿದೆ.
ಈ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುವ ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎರಿಚ್ ನೆಸೆಲ್‌ಹಾಲ್ಫ್, "20,000 ಯುನಿಟ್ ನಿರ್ಮಾಣ ಮಾಡುವ ಮೂಲಕ ಸಂಸ್ಥೆಯು ಮಗದೊಂದು ಮೈಲುಗಲ್ಲನ್ನು ತಲುಪಿದೆ" ಎಂದಿದ್ದಾರೆ.


Click it and Unblock the Notifications








