ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

Written By:

ಜರ್ಮನಿಯ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಡೈಮ್ಲರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಡೈಮ್ಲರ್ ಕಾರುಗಳು ಮಿತಿಮೀರಿದ ಇಂಗಾಲ ಹೊರಸೂಸುವಿಕೆಯನ್ನು ಹೊಂದಿವೆ ಎಂಬ ಆರೋಪ ಕೇಳಿಬಂದಿದೆ.

To Follow DriveSpark On Facebook, Click The Like Button
ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

ಈ ಹಿನ್ನೆಲೆ ಪ್ರತಿಷ್ಠಿತ ಡೈಮ್ಲರ್ ಕಾರು ಉತ್ಪಾದನಾ ಸಂಸ್ಥೆ ಮೇಲೆ ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಪ್ರಕರಣ ಕೂಡಾ ದಾಖಲಿಸಿದ್ದು, ಈ ಹಿನ್ನೆಲೆ ಸ್ಟುಟ್ಗಾರ್ಟ್ ನ್ಯಾಯಾಲಯದಿಂದ ವಾರೆಂಟ್ ಹೊಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

ಸರ್ಕಾರರೇತರ ಸಂಘ ಸಂಸ್ಥೆಗಳ ದೂರಿನ್ವಯ ಡೈಮ್ಲರ್ ವಿರುದ್ಧ ತನಿಖೆ ನಡೆಸಲಾಗುತ್ತಿದ್ದು, ಅಮೆರಿಕ ಮತ್ತು ಯುರೋಪಿನ್ ಪ್ರಮುಖ ರಾಷ್ಟ್ರಗಳಲ್ಲಿ ಕಳಪೆ ಗುಣಮಟ್ಟದ 1 ದಶಲಕ್ಷ ಕಾರುಗಳನ್ನು ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

ಇದಲ್ಲದೇ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವ ಡೈಮ್ಲರ್ ಸಂಸ್ಥೆಯು, ಸುಳ್ಳು ಮಾಹಿತಿಯ ಜಾಹೀರಾತುಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟವನ್ನು ಕೈಗೊಂಡಿರುವುದು ಕೂಡಾ ತಿಳಿದುಬಂದಿದೆ.

ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

ಇದಲ್ಲದೇ ಡೈಮ್ಲರ್ ಸಂಸ್ಥೆಯು ಮರ್ಸಿಡಿಸ್ ಬೆಂಝ್ ಸಹ ಸಂಸ್ಥೆ ಕೂಡಾ ಆಗಿದ್ದು, ಕೆಲವು ಬೆಂಝ್ ಸಂಸ್ಥೆಯ ಕೆಲವು ಕಾರು ಮಾದರಿಯ ಉತ್ಪಾದನೆಯಲ್ಲೂ ಅತಿಯಾದ ಇಂಗಾಲ ಹೊರಸೂಸುವಿಕೆ ಲೋಪದೋಷಗಳು ಇರಬಹುದೆಂದು ಶಂಕಿಸಲಾಗಿದೆ.

ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

ಒಂದು ವೇಳೆ ಪ್ರಕರಣ ಸಾಬೀತಾದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಡೈಮ್ಲರ್ ಉತ್ಪನ್ನಗಳು ನಿಷೇಧಗೊಳ್ಳುವ ಸಾಧ್ಯತೆಗಳಿದ್ದು, ಅದು ಮರ್ಸಿಡಿಸ್ ಬೆಂಝ್ ಮೌಲ್ಯದ ಮೇಲೂ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನುವುದು ಆಟೋ ಮೊಬೈಲ್ ತಜ್ಞರ ಅಭಿಪ್ರಾಯ.

ಮಾಲಿನ್ಯ ತಡೆಯುವಲ್ಲಿ ವಿಫಲ- ಸಂಕಷ್ಟಕ್ಕೆ ಸಿಲುಕಿದ ಡೈಮ್ಲರ್ ಸಂಸ್ಥೆ

ಆದ್ರೆ ಪ್ರಕರಣವನ್ನು ತಳ್ಳಿಹಾಕಿರುವ ಡೈಮ್ಲರ್ ಸಂಸ್ಥೆಯು, ಇದು ಕೇವಲ ಉಹಾಪೋಹದ ವರದಿಯಾಗಿದೆ ಎಂದಿದೆ. ಇನ್ನು ಪೂರ್ಣಪ್ರಮಾಣದ ತನಿಖೆಯ ನಂತರವಷ್ಟೇ ನಿಜಾಂಶ ಹೊರಬರಬೇಕಿದೆ.

English summary
Read in Kannada about Daimler Allegedly Sold Over 1 Million Cars With Excess Emission.
Story first published: Thursday, July 13, 2017, 14:40 [IST]
Please Wait while comments are loading...

Latest Photos