ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಡೈಮ್ಲರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಡೈಮ್ಲರ್ ಡೀಸೆಲ್ ಕಾರುಗಳು ಮಿತಿಮೀರಿದ ಇಂಗಾಲ ಹೊರಸೂಸುವಿಕೆಯನ್ನು ಹೊಂದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ 30ಲಕ್ಷ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ.

By Praveen

ಜರ್ಮನಿಯ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಡೈಮ್ಲರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಡೈಮ್ಲರ್ ಡೀಸೆಲ್ ಕಾರುಗಳು ಮಿತಿಮೀರಿದ ಇಂಗಾಲ ಹೊರಸೂಸುವಿಕೆಯನ್ನು ಹೊಂದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಯುರೋಪ ಮತ್ತು ಅಮೆರಿಕದಲ್ಲಿ ಮರ್ಸಿಡಿಸ್ ಬೆಂಝ್ ಡೀಸೆಲ್ ಕಾರು ಮಾದರಿಗಳು ಮಿತಿಮೀರಿದ ಇಂಗಾಲ ಹೊರಸೂಸುವಿಕೆಯನ್ನು ಹೊಂದಿವೆ ಎಂಬ ಆರೋಪದ ಬೆನ್ನಲ್ಲೇ ಮಹತ್ವದ ನಿರ್ಧಾರ ಪ್ರಕಟಿಸಿರುವ ಡೈಮ್ಲರ್, ಸ್ವಯಂಪ್ರೇರಿತವಾಗಿ ಡೀಸೆಲ್ ಮಾದರಿಗಳ ತಂತ್ರಜ್ಞಾನ ಪರಿಶೀಲನೆಗೆ ಮುಂದಾಗಿದೆ.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ವ್ಯಾಪಕ ಸಾರ್ವಜನಿಕ ಚರ್ಚೆಯ ಮಧ್ಯೆಯೇ ಸ್ವಯಂಪ್ರೇರಿತವಾಗಿ 30 ಲಕ್ಷ ಕಾರುಗಳ ಹಿಂಪಡೆಯುವಿಕೆಯೂ ಹಲವು ಅನುಮಾನಗಳಿಗೆ ಎಡೆಮಾಡಿದ್ದು,ಆತಂಕದಲ್ಲಿರುವ ಬೆಂಝ್ ಗ್ರಾಹಕರಿಗೆ ಧೈರ್ಯ ತುಂಬಲು ಈ ನಿರ್ಧಾರ ಕೈಗೊಂಡಿರುವುದಾಗಿ ಡೈಮ್ಲರ್ ತಿಳಿಸಿದೆ.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಡೈಮ್ಲರ್ ನಿರ್ಧಾರದಿಂದ ನಿಟ್ಟುಸಿರುವ ಬಿಟ್ಟಿರುವ ಬೆಂಝ್ ಗ್ರಾಹಕರು, ಸದ್ಯದಲ್ಲೇ ಅತಿಯಾದ ಮಾಲಿನ್ಯ ಹೊರಸೂಸುವಿಕೆಯನ್ನು ಹೊಂದಿರುವ ಕಾರು ಮಾದರಿಗಳನ್ನು ಪ್ರಸ್ತುತ ತಂತ್ರಜ್ಞಾನಗಳೊಂದಿಗೆ ಉನ್ನತಿಕರಿಸಿಕೊಳ್ಳಲಿದ್ದಾರೆ.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಇದಲ್ಲದೇ ಈ ಹಿಂದೆ ಅತಿಯಾದ ಇಂಗಾಲ ಹೊರಸೂಸುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಡೈಮ್ಲರ್ ಕಾರು ಉತ್ಪಾದನಾ ಸಂಸ್ಥೆ ಮೇಲೆ ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಪ್ರಕರಣ ಕೂಡಾ ದಾಖಲಿಸಿದ್ದವು.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಸರ್ಕಾರರೇತರ ಸಂಘ ಸಂಸ್ಥೆಗಳ ದೂರಿನ್ವಯ ಡೈಮ್ಲರ್ ವಿರುದ್ಧ ಸದ್ಯ ತನಿಖೆ ಪ್ರಗತಿಯಲ್ಲಿದ್ದು, ಅಮೆರಿಕ ಮತ್ತು ಯುರೋಪಿನ್ ಪ್ರಮುಖ ರಾಷ್ಟ್ರಗಳಲ್ಲಿ ಕಳಪೆ ಗುಣಮಟ್ಟದ 1 ದಶಲಕ್ಷ ಕಾರುಗಳನ್ನು ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಇದಲ್ಲದೇ ಡೈಮ್ಲರ್ ಸಂಸ್ಥೆಯು ಮರ್ಸಿಡಿಸ್ ಬೆಂಝ್ ಸಹ ಸಂಸ್ಥೆ ಕೂಡಾ ಆಗಿದ್ದು, ಬೆಂಝ್ ಸಂಸ್ಥೆಯ ಕೆಲವು ಕಾರು ಮಾದರಿಯ ಉತ್ಪಾದನೆಯಲ್ಲೂ ಅತಿಯಾದ ಇಂಗಾಲ ಹೊರಸೂಸುವಿಕೆ ಲೋಪದೋಷಗಳು ಇರಬಹುದೆಂದು ಶಂಕಿಸಲಾಗಿದೆ.

ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್

ಒಂದು ವೇಳೆ ಪ್ರಕರಣ ಸಾಬೀತಾದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಡೈಮ್ಲರ್ ಉತ್ಪನ್ನಗಳು ನಿಷೇಧಗೊಳ್ಳುವ ಸಾಧ್ಯತೆಗಳಿದ್ದು, ಇದರ ಬೆನ್ನಲ್ಲೆ 30 ಲಕ್ಷ ಡೀಸೆಲ್ ಕಾರು ಮಾದರಿಗಳನ್ನು ಹಿಂಪಡೆದು ಸರಿಪಡಿಸುವ ಪ್ರಕಟಣೆ ಹೊರಡಿಸಿರುವುದು ಜಾಗತಿಕ ಆಟೋ ಮೊಬೈಲ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Most Read Articles

Kannada
English summary
Read in Kannada about Daimler Recalls 3 Million Mercedes-Benz Diesel Cars.
Story first published: Wednesday, July 19, 2017, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X