ದಟ್ಸನ್ ಗೊ ಪ್ಲಸ್ ಎಂಪಿವಿ ಡೀಸೆಲ್ ಮಾದರಿ ಸದ್ಯಕ್ಕಿಲ್ಲ!

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕೆಲವು ತಿಂಗಳುಗಳ ಹಿಂದೆಯಷ್ಟೇ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಗೊಂಡಿತ್ತು. ಇದರ ಬೆನ್ನಲ್ಲೇ ದಟ್ಸನ್ ಗೊ ಪ್ಲಸ್ ಬಹು ಬಳಕೆಯ ವಾಹನ (ಎಂಪಿವಿ) ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ಸದ್ಯ ಬಂದಿರುವ ವರದಿಗಳ ಪ್ರಕಾರ ನಿಸ್ಸಾನ್ ಒಡೆತನದಲ್ಲಿರುವ ದಟ್ಸನ್‌ ಗೊ ಪ್ಲಸ್ ಎಂಪಿವಿ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಲಭ್ಯವಾಗಲಿದೆ. ಅಂದರೆ ಡೀಸೆಲ್ ವರ್ಷನ್ ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ.

Datsun go plus

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಂಡಿದ್ದ ಗೊ ಪ್ಲಸ್ ಎಂಪಿವಿ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈಗಾಗಲೇ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಿರುವ ದಟ್ಸನ್ ಗೊ ಪ್ಲಸ್, 1198 ಸಿಸಿ, ಇನ್ ಲೈಟನ್ ತ್ರಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 68 ಅಶ್ವಶಕ್ತಿ (104 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಇಂಡೋನೇಷ್ಯಾದಲ್ಲಿ ದಟ್ಸನ್ ಎ, ಆಪ್ಷನ್ ಎ, ಡಿ, ಟಿ ಹಾಗೂ ಆಪ್ಷನ್ ಟಿಗಳೆಂಬ ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿತ್ತು. ಇದು 4.42 ಲಕ್ಷ ರು.ಗಳಿಂದ 5.36 ಲಕ್ಷ ರು.ಗಳಷ್ಟು ದುಬಾರಿಯೆನಿಸಿತ್ತು. ಇನ್ನು ಭಾರತದ ಮಾದರಿ ಮಾರುತಿಯ ಎರ್ಟಿಗಾಗಿಂತಲೂ ಕಡಿಮೆ ದರದಲ್ಲಿ ಪರಿಚಯವಾಗುವುದು ಬಹುತೇಕ ಖಚಿತವಾಗಿದೆ.

ಕೇವಲ ಡೀಸೆಲ್ ಆವೃತ್ತಿ ಮಾತ್ರವಲ್ಲ. ಸದ್ಯಕ್ಕೆ ಎಎಂಟಿ ವರ್ಷನ್ ಸಹ ಬಿಡುಗಡೆಯಾಗುವುದಿಲ್ಲ. ಸ್ಮರ್ದಾತ್ಮಕ ದರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯು ಇಂತಹದೊಂದು ನಡೆಗೆ ಮುಂದಾಗಿದೆ. ಇನ್ನೊಂದೆಡೆ ಜುಲೈ ತಿಂಗಳಲ್ಲಿ ಲಾಂಚ್ ಆಗಲಿರುವ ಹೋಂಡಾ ಮೊಬಿಲಿಯೊ, ಮಾರುತಿಯ ಎರ್ಟಿಗಾಗಿಂತಲೂ ದುಬಾರಿಯಾಗುವ ಸಾಧ್ಯತೆಯಿದೆ.

More from DriveSpark

Article Published On: Friday, June 27, 2014, 15:15 [IST]
English summary
Datsun has launched its maiden product in India the GO hatchback. At the recent 2014 Auto Expo held in New Delhi the Japanese manufacturer showcased its MPV bound for India. They have named it the GO+ and has been launched in Indonesia already.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+