ದಟ್ಸನ್ ಗೊ ಪ್ಲಸ್ ನಿರ್ಮಾಣ ಆರಂಭ; 2015 ಜನವರಿಯಲ್ಲಿ ಬಿಡುಗಡೆ

By Nagaraja

ಈ ವರ್ಷದ ಹಬ್ಬದ ಆವೃತ್ತಿಯಲ್ಲಿ ಲಾಂಚ್ ಆಗಬೇಕಾಗಿದ್ದ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರಿನ ಬಿಡುಗಡೆಯನ್ನು ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಅಲ್ಲದೆ 2015 ವರ್ಷಾರಂಭದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ವರದಿಗಳ ಪ್ರಕಾರ, ಚೆನ್ನೈನಲ್ಲಿರುವ ರೆನೊ-ನಿಸ್ಸಾನ್ ಓರಗಂಡ ಘಟಕದಲ್ಲಿ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರಿನ ನಿರ್ಮಾಣ ಪ್ರಕ್ರಿಯೆ ಆರಂಭಿಸಲಾಗಿದೆ.


ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್, ಗೊ ಹ್ಯಾಚ್‌ಬ್ಯಾಕ್ ಮೂಲಕ ವರ್ಷಾರಂಭದಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಿತ್ತು. ಇದು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು.

ದಟ್ಸನ್ ಗೊ ಅದೇ ತಲಹದಿಯಲ್ಲಿ ಗೊ ಪ್ಲಸ್ ಎಂಪಿವಿ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಏಳು ಮಂದಿ ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದಾಗಿದೆ.


ನಾಲ್ಕು ಮೀಟರ್ ಪರಿಧಿಯೊಳಗೆ ನಿರ್ಮಾಣವಾಗಿರುವುದರಿಂದ ತೆರಿಗೆ ವಿನಾಯಿತಿ ಲಭಿಸುವುದರೊಂದಿಗೆ ಮಾರುಕಟ್ಟೆಯಲ್ಲಿ ಸ್ಮರ್ಧಾತ್ಮಕ ಬೆಲೆ ಕಾಯ್ದುಕೊಳ್ಳಲು ಸಂಸ್ಥೆಗೆ ಸಹಕಾರಿಯಾಗಲಿದೆ.

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ಗೊ ಹ್ಯಾಚ್‌ಬ್ಯಾಕ್‌ನಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಹಾಗೂ ನಿಸ್ಸಾನ್ ಮೈಕ್ರಾದ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಆಮದು ಮಾಡಿಕೊಳ್ಳಲಾಗುವುದು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಅನುಕ್ರಮವಾಗಿ 68 ಹಾಗೂ 66 ಅಶ್ವಶಕ್ತಿ ಉತ್ಪಾದಿಸದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆಯಲಿದೆ.

Datsun Go Plus

ಇನ್ನುಳಿದಂತೆ ಫಾಲೋ ಮಿ ಹೆಡ್‌ಲ್ಯಾಂಪ್‌ಗಳಂತಹ ಆಧುನಿಕ ವಿಶಿಷ್ಟತೆಗಳನ್ನು ಪಡೆಯಲಿರುವ ಗೊ ಪ್ಲಸ್ ಬಹು ಬಳಕೆಯ ಕಾರು 5 ಲಕ್ಷ ರು.ಗಳಿಂದ 6.5 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

More from DriveSpark

Article Published On: Monday, October 20, 2014, 10:26 [IST]
English summary
Nissan has commenced production of new Datsun Go+ MPV for dealer dispatch at the Renault-Nissan Oragadam facility in Chennai. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+