ಫೆರಾರಿಯಿಂದ ಮಗದೊಂದು ಆಕರ್ಷಕ ಸೂಪರ್ ಕಾರು ಅನಾವರಣ
ಬೇಡಿಕೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತನ್ನೆಲ್ಲ ಸೂಪರ್ ಕಾರುಗಳನ್ನು ಸೀಮಿತ ಮಾತ್ರದಲ್ಲಿ ನಿರ್ಮಿಸುವುದಾಗಿ ಈ ಹಿಂದೆ ಘೋಷಿಸಿದ್ದ ಇಟಲಿಯ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಫೆರಾರಿ, ಇದೀಗ ಅಬುದಾಬಿಯಲ್ಲಿ ನಡೆದ ಫೆರಾರಿ ಫಿನಾಲಿ ಮೊಂಡಿಯಾಲಿಯಲ್ಲಿ ಹೊಸತಾದ ಎಫ್‌ಎಕ್ಸ್‌ಎಕ್ಸ್ ಕೆ ಸೂಪರ್ ಕಾರನ್ನು ಪ್ರದರ್ಶಿಸಿದೆ.
ಹಿಂದೆ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಫೆರಾರಿ ಎಫ್‌ಎಕ್ಸ್‌ಎಕ್ಸ್, ಇಟಲಿಯ ಲಾಫೆರಾರಿ ತಳಹದಿಯಲ್ಲಿ ರೂಪುಗೊಂಡಿದೆ. ಪ್ರಸ್ತುತ ಕಾರು ಟ್ರ್ಯಾಕ್‌ಗೆ ಮಾತ್ರ ಸೀಮಿತವಾಗಿರಲಿದೆ.

ಫೆರಾರಿ ಎಫ್‌ಎಕ್ಸ್‌ಎಕ್ಸ್ ಕೆ ಸೂಪರ್ ಕಾರು ವಿ12 6.3 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 848 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಹೊಸತಾದ ಕೆರ್ಸ್ (KERD)ಸಿಸ್ಟಂ ಇನ್ನಷ್ಟು 187 ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದ್ದು, ಬರೋಬ್ಬರಿ 1035 ಬಿಎಚ್‌ಪಿ ಉತ್ಪಾದಿಸಲಿದೆ. ಅಂತೆಯೇ 7 ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಕೂಡಾ ಇರಲಿದೆ.

ಇನ್ನು ಇಎಸ್‌ಸಿ, ಎಬಿಎಸ್, ಇಬಿಡಿ, ಇಎಫ್1-ಟ್ರಾಕ್, ಇ ಡಿಫ್ 3, ಎಸ್‌ಸಿಎಂಇ, ಆಕ್ಟಿವ್ ಏರೋಡೈನಾಮಿಕ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಒಟ್ಟಿನಲ್ಲಿ ಫೆರಾರಿ ಪ್ರತಿಷ್ಠೆಯನ್ನು ಎತ್ತಿ ಹಿಡಿಯುವಲ್ಲಿ ಎಫ್‌ಎಕ್ಸ್‌ಎಕ್ಸ್ ಕೆ ಮಾದರಿಗೆ ಸಾಧ್ಯವಾಗಲಿದೆ. ಇದು ಹಿಂದುಗಡೆ ಏರೋಡೈನಾಮಿಕ್ ರೆಕ್ಕೆ ಸಹ ಪಡೆದುಕೊಂಡಿದೆ.


Click it and Unblock the Notifications








