ಫಿಯೆಟ್, ಜೀಪ್ ಕಾರುಗಳು ಭಾರತಕ್ಕಿಲ್ಲ?

By Nagaraja

ಭಾರತದಲ್ಲಿ ಅನೇಕ ನೂತನ ಮಾದಿರಗಳನ್ನು ಪರಿಚಯಿಸಲು ಫಿಯೆಟ್ ಯೋಜನೆಯಿರಿಸಿಕೊಂಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ 12 ಹೊಸ ಮಾದಿರಗಳನ್ನು ಪರಿಚಯಿಸುವುದು ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯ ಇರಾದೆಯಾಗಿದೆ.

ಹಾಗಿದ್ದರೂ ಈ ಪೈಕಿ ಫಿಯೆಟ್ 500ಎಕ್ಸ್ ಹಾಗೂ ಜೀಪ್ ರೆನೆಗೇಡ್ (Renegade) ಭಾರತ ಪ್ರವೇಶಿಸುತ್ತಿಲ್ಲವೆಂಬುದು ಬೇಸರದ ಸುದ್ದಿ. ಕೇವಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾತ್ರ ಈ ಮಾದರಿಗಳು 2014 ಸಾಲಿನ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.


ಭಾರತದಂತಹ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಇದಕ್ಕೆ ತಕ್ಕ ರೀತಿಯಲ್ಲಿ ವಿಶೇಷ ಕೊಡುಗೆಯನ್ನು ನೀಡಲು ಫಿಯೆಟ್ ಉದ್ದೇಶವಿರಿಸಿಕೊಂಡಿದೆ.

ಭಾರತದಲ್ಲಿ ಪುಂಟೊ ತಲಹದಿಯ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆಯಾಗಲಿದೆ. ಫಿಯೆಟ್ ಹೇಳುವಂತೆಯೇ ಭಾರತಕ್ಕೆ ಹೊಸ ಕಾಂಪಾಕ್ಟ್ ಎಸ್‌ಯುವಿ ಪ್ರಸಕ್ತ ಸಾಲಿನಲ್ಲೇ ಪರಿಚಯವಾಗಲಿದೆ.

Fiat

ಈಗಾಗಲೇ ದೇಶದ್ಯಾಂತ ಸುತ್ತಾಡುತ್ತಿರುವ ಅವೆಂಚ್ಯುರಾ, ಗ್ರಾಹಕರ ಬೇಡಿಕೆಗಳನ್ನು ಗುರುತಿಸಿಕೊಳ್ಳಲಿದೆ. ಇದಕ್ಕೂ ಮೊದಲು ನವದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಅವೆಂಚ್ಯುರಾ ಸಾರ್ವಜನಿಕ ಪ್ರದರ್ಶನ ಕಂಡಿತ್ತು.

ಅಂದ ಹಾಗೆ ಫಿಯೆಟ್‌ನ ಅವೆಂಚ್ಯುರಾ ಮಾದರಿಯು, ಈಗಾಗಲೇ ಬಿಡುಗಡೆಗೊಂಡಿರುವ ಟೊಯೊಟಾ ಎಟಿಯೋಸ್ ಕ್ರಾಸ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮತ್ತು ರೆನೊ ಡಸ್ಟರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದರಲ್ಲಿ 1.3 ಲೀಟರ್ ಡೀಸೆಲ್ ಮಲ್ಟಿಜೆಟ್ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ ಇರಲಿದೆ.

More from DriveSpark

Article Published On: Monday, May 12, 2014, 11:49 [IST]
English summary
The Italian automobile company plans to launch over 12 products in the coming five years. We are disappointed to know that they won't be getting the Fiat 500X and Jeep Renegade to India anytime soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+