2015ರಿಂದ ಫಿಯೆಟ್ ಅಬಾರ್ತ್ ಭಾರತದಲ್ಲೇ ಜೋಡಣೆ
ಪ್ರಸಕ್ತ ಸಾಲಿನಲ್ಲೇ ದೇಶಕ್ಕೆ ಎಂಟ್ರಿ ಕೊಡಲಿರುವ ಫಿಯೆಟ್, ನೂತನ ಅಬಾರ್ತ್ 500 ಲಾಂಚ್ ಮಾಡಲಿದೆ. ಅಷ್ಟೇ ಅಲ್ಲದೆ 2015ನೇ ಸಾಲಿನಿಂದ ದೇಶದಲ್ಲೇ ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭಿಸಲಿದೆ.
ಕಳೆದ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ಅಬಾರ್ತ್ 500, ಕಂಪ್ಲೀಟ್ ಬಿಲ್ಡ್ ಯುನಿಟ್ (ಸಿಬಿಯು) ಭಾರತಕ್ಕೆ ಪ್ರವೇಶಿಸಲಿದೆ. ಅಂದರೆ ಇದರ ಬೆಲೆ ಕಾರಿನ ನೈಜ ದರಗಿಂತಲೂ ಎರಡು ಪಟ್ಟು ಹೆಚ್ಚಾಗಲಿದೆ.

ಸದ್ಯ ಇದಲ್ಲದೆ ಫಿಯೆಟ್ ಮುಂದೆ ಬೇರೆ ಮಾರ್ಗವಿಲ್ಲ. ಆದರೆ ನಿಕಟ ಭವಿಷ್ಯದಲ್ಲೇ ಪರಿಸ್ಥಿತಿ ಬದಲಾಗಲಿದೆ. ವರದಿಗಳ ಪ್ರಕಾರ ಫಿಯೆಟ್ ದೇಶದಲ್ಲಿ ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭಿಸಲಿದೆ. ಹಾಗಿದ್ದರೂ ಫಿಯೆಟ್‌ನಿಂದ ಇದುವರೆಗೆ ಅಧಿಕೃತ ನಿರ್ಧಾರ ಬಂದಿಲ್ಲ. ಪ್ರಸ್ತುತ ಭಾರತದ ಆಯ್ದ ನಗರಗಳಲ್ಲಿ ಮಾತ್ರ ಅಬಾರ್ತ್ ಮಾರಾಟವಾಗಲಿದೆ.
ಒಟ್ಟಾರೆಯಾಗಿ ಇತ್ತೀಚೆಗಷ್ಟೇ 2014 ಲಿನಿಯಾ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದ್ದ ಫಿಯೆಟ್, ಪ್ರಸಕ್ತ ಸಾಲಿನಲ್ಲೇ ಇನ್ನಿತರ ಮೂರು ಮಾದರಿಗಳನ್ನು ಲಾಂಚ್ ಮಾಡಲಿದೆ. ಇದರಲ್ಲಿ ಅಬಾರ್ತ್ 500, ಹೊಸತಾದ ಪುಂಟೊ ಕ್ರಾಸೋವರ್ ಹಾಗೂ 2014 ಪುಂಟೊ ಫೇಸ್‌ಲಿಫ್ಟ್ ಸೇರಿಕೊಂಡಿದೆ.



Click it and Unblock the Notifications








