ಮಾರುತಿಗೆ ಫಿಯೆಟ್ ಎಂಜಿನ್‌ಗಳ ಬಲ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಮಾನೇಸರ್ ಘಟಕದಲ್ಲಿ ಎಂಜಿನ್‌ಗಳನ್ನು ಉತ್ಪಾದಿಸುತ್ತಿದೆ. ಅದೇ ರೀತಿ ಡೀಸೆಲ್ ಎಂಜಿನ್ ಜೋಡಣೆ ಕಾರ್ಯವು ಗುರ್ಗಾಂವ್ ಘಟಕದಲ್ಲಿ ನಡೆಯುತ್ತಿದೆ.
ಇನ್ನೊಂದೆಡೆ ಮಾರುತಿ ತನ್ನದೇ ಆದ 800ಸಿಸಿ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಸದ್ಯ ಭಾರತದಲ್ಲಿ ಮಾರುತಿಗೆ ಫಿಯೆಟ್ ಸಂಸ್ಥೆಯು ಡೀಸೆಲ್ ಎಂಜಿನ್‌ಗಳನ್ನು ಪೊರೈಸುತ್ತಿದೆ.

ಪ್ರಸ್ತುತ ಈ ಪ್ರಕ್ರಿಯೆಯು ಮುಂದಿನ ಮೂರು ವರ್ಷಗಳ ವರೆಗೂ ಮುಂದುವರಿಯಲಿದೆ. ವರದಿಗಳ ಪ್ರಕಾರ ಭಾರತದಲ್ಲಿ ಜೋಡಣೆಯಾಗುತ್ತಿರುವ ಫಿಯೆಟ್ ಡೀಸೆಲ್ ಎಂಜಿನ್‌ಗಳು ಮಾರುತಿಗೆ ವಿತರಣೆಯಾಗಲಿದೆ. ಇದರಂತೆ ಸ್ವಿಫ್ಟ್, ಡಿಜೈರ್ ವಾಹನಗಳಿಗೆ ಫಿಯೆಟ್ ಮಲ್ಟಿಜೆಟ್ ಎಂಜಿನ್‌ಗಳ ಬಳಕೆ ಮುಂದುವರಿಯಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಕುಸಿಯುತ್ತಿದೆ. ಈ ನಡುವೆಯೂ ಫಿಯೆಟ್ ಜೊತೆಗಿನ ಒಪ್ಪಂದ ಪರಿಷ್ಕೃರಿಸಲು ಮಾರುತಿ ಸಂಸ್ಥೆ ನಿರ್ಧರಿಸಿದೆ.


Click it and Unblock the Notifications








