ಫಿಯೆಟ್ ಇಂಡಿಯಾ ಉಚಿತ ಚಳಿಗಾಲ ಚೆಕಪ್ ಶಿಬಿರ

By Nagaraja

ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್ (ಎಫ್‌ಜಿಎಐಪಿಎಲ್) ಸಂಸ್ಥೆಯು ಭಾರತದಲ್ಲಿ ಉಚಿತ ಚೆಕಪ್ ಕ್ಯಾಂಪ್ ತೆರೆದುಕೊಂಡಿದೆ. ಈ ಮೂಲಕ ಗ್ರಾಹಕರ ಮೇಲೆ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಸಂಸ್ಥೆಯು ಮಾರಾಟದ ನಂತರವೂ ಗರಿಷ್ಠ ಅನುಭವ ನೀಡುವುದರಲ್ಲಿ ಗಮನ ಕೇಂದ್ರಿತವಾಗಿದೆ.

ಮುಖ್ಯಾಂಶಗಳು
ಫಿಯೆಟ್ ವಿಂಟರ್ ಚೆಕಪ್ ಕ್ಯಾಂಪ್ - ಅಕ್ಟೋಬರ್ 17ರಿಂದ 19ರ ವರೆಗೆ ದೇಶದಲ್ಲಿ ಸ್ಥಿತಗೊಂಡಿರುವ 96 ಫಿಯೆಟ್ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್‌ಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಮೂಲಕ ದೇಶೆದೆಲ್ಲೆಡೆ ಇರುವ ಫಿಯೆಟ್ ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡಲಾಗುವುದು.

FIAT India

ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಯೆಟ್ ಕ್ಲೈಸ್ಲರ್ ಇಂಡಿಯಾ ಕಾರ್ಯಾಚರಣೆಯ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ನಾಗೇಶ್ ಬಸವನಹಳ್ಳಿ, ಚೆಕಪ್ ಕ್ಯಾಂಪ್ ಮೂಲಕ ಫಿಯೆಟ್ ಗ್ರಾಹಕರನ್ನು ತಲುಪುವಲ್ಲಿ ನಿರಂತರವಾಗಿ ಪ್ರಯತ್ನವನ್ನು ಮಾಡಲಾಗುತ್ತಿದೆ. ಈಗಿನ ದೇಶದ್ಯಾಂತ ಚೆಕಪ್ ಕ್ಯಾಂಪ್ ಮೂಲಕ ಗ್ರಾಹಕರ ಮೇಲಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಲಾಗುತ್ತಿದೆ ಎಂದಿದ್ದಾರೆ.

ಫಿಯೆಟ್ ಗ್ರಾಹಕರಿಗೆ ಈ ಬಗ್ಗೆ ಮೊಬೈಲ್ ಹಾಗೂ ಇ-ಮೇಲ್ ಸಂದೇಶದ ಮೂಲಕ ಎಚ್ಚರಿಕೆ ಕೊಡಲಾಗುವುದು. ಅಲ್ಲದೆ ಚೆಕಪ್ ಕ್ಯಾಂಪ್‌ನಲ್ಲಿ ಗೋಚರತೆ, ತಾಪಮಾನ, ಕೂಲಿಂಗ್ ಜೊತೆಗೆ 52 ಅಂಶಗಳ ಬಗ್ಗೆ ಪರಿಶೀಲಿಸಲಾಗುವುದು.

ಅದೇ ಹೊತ್ತಿಗೆ ಶೇಕಡಾ 20ರಷ್ಟು ಲೇಬರ್ ಮತ್ತು 10ರಷ್ಟು ಮೆಕ್ಯಾನಿಕಲ್ ರಿಪೇರಿ ಕಾಮಗಾರಿಗಾಗಿ ಡಿಸ್ಕೌಂಟ್ ಲಭಿಸಲಿದೆ. ಹಾಗೆಯೇ ಫಿಯೆಟ್ ಅಭಿಮಾನಿಗಳಿಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪುಂಟೊ ಇವೊ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಅವೆಂಚ್ಯೂರಾ ಮಾದರಿಗಳನ್ನು ನೋಡುವ ಭಾಗ್ಯ ಲಭಿಸಲಿದೆ.

More from DriveSpark

Article Published On: Thursday, October 16, 2014, 15:12 [IST]
English summary
FIAT Group Automobiles India Pvt. Ltd (FGAIPL) has undertaken a massive after sales initiative across India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+