ಪ್ರಸಕ್ತ ಸಾಲಿನಲ್ಲೇ 2 ಹೊಸ ಫಿಯೆಟ್ ಗಾಡಿಗಳು ರಸ್ತೆಗೆ
ಇತ್ತೀಚೆಗಷ್ಟೇ ಪುಂಟೊ ಇವೊ (ಇಲ್ಲಿದೆ ಓದಿ)ಮಾದರಿಯನ್ನು ಪರಿಚಯಿಸಿರುವ ಇಟಲಿ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ಪ್ರಸಕ್ತ ಸಾಲಿನಲ್ಲೇ ಎರಡು ನೂತನ ಮಾದರಿಗಳನ್ನು ದೇಶಕ್ಕೆ ಪರಿಚಯಿಸಲಿದೆ.
ಇದಕ್ಕೂ ಮೊದಲು ದೆಹಲಿ ಆಟೋ ಎಕ್ಸ್ ಪೋದಲ್ಲಿ 2014 ಲಿನಿಯಾ ಫೇಸ್‌ಲಿಫ್ಟ್ ಮಾದರಿ ಪರಿಚಯಿಸಿರುವ ಫಿಯೆಟ್, ಭಾರತದಲ್ಲಿ ಸುಭದ್ರ ನೆಲೆ ಸ್ಥಾಪಿಸುವ ಇರಾದೆ ಹೊಂದಿದೆ. ಈ ಮೂಲಕ ಸ್ಥಿರ ಬೆಳವಣಿಗೆಯನ್ನು ಗುರಿಯಿರಿಸಿಕೊಂಡಿದೆ.

ಫಿಯೆಟ್ ಸದ್ಯದಲ್ಲೇ ಅವೆಂಚ್ಯುರಾ ಕ್ರಾಸೋವರ್ ಮಾದರಿಯನ್ನು ಬಿಡುಗಡೆಗೊಳಿಸಿದೆ. 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಅವೆಂಚ್ಯುರಾ ಫಿಯೆಟ್‌ನ ಬಹುನಿರೀಕ್ಷಿತ ಮಾದರಿಯಾಗಿರಲಿದೆ.
ಅದೇ ಹೊತ್ತಿಗೆ ಹೆಚ್ಚು ಶಕ್ತಿಶಾಲಿ ಅಬಾರ್ತ್ 500 ಆವೃತ್ತಿಯನ್ನು ವರ್ಷಾಂತ್ಯದೊಳಗೆ ಬಿಡುಗಡೆಗೊಳಿಸುವ ಯೋಜನೆಯನ್ನು ಫಿಯೆಟ್ ಸಂಸ್ಥೆ ಹೊಂದಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಜೋಡಣೆ ಮಾಡಲಿದ್ದು, ಸ್ಮರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ.



Click it and Unblock the Notifications








